ತಮಿಳುನಾಡು ಸಿಎಂ ವಿಜಯ್ ಹಾಗೂ ಪತ್ನಿ ಸಂಗೀತಾ ಡಿವೋರ್ಸ್ ನಿರ್ಧಾರ ಗೊತ್ತೇಯಿದೆ. ಈ ವಿವಾದದಲ್ಲಿ ನಟಿ ತ್ರಿಷಾ ಹೆಸರು ತಳುಕು ಹಾಕಿಕೊಂಡಿದೆ. ತಮಿಳುನಾಡು ಸಿಎಂ ಆಗಿ ವಿಜಯ್ ಪ್ರಮಾಣವಚನ ಸ್ವೀಕರಿಸಿದ ಕಾರ್ಯಕ್ರಮಕ್ಕೆ ನಟಿ ತ್ರಿಷಾ ಹಾಜರಾಗಿದ್ದರು. ಇದೇ ವಿಚಾರವನ್ನು ಪ್ರಸ್ತಾಪಿಸಿ ಮಲಯಾಳಂ ನಟ ಧ್ಯಾನ್ ಶ್ರೀನಿವಾಸನ್ ಕಾರ್ಯಕ್ರಮವೊಂದರಲ್ಲಿ ತಮಾಷೆ ಮಾಡಿದ್ದಾರೆ. ಆ ವೀಡಿಯೋ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

Advertisement

'ವಿಸಿಟರ್' ಎಂಬ ಚಿತ್ರದಲ್ಲಿ ಧ್ಯಾನ್ ಶ್ರೀನಿವಾಸನ್ ನಟಿಸಿದ್ದಾರೆ. ಚಿತ್ರದ ಪ್ರಚಾರದ ವೇಳೆ ನಡೆದ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ವೇದಿಕೆಯಲ್ಲಿ ಮಾತನಾಡುತ್ತಾ ಎದುರಿಗೆ ಕುಳಿತಿದ್ದ ನಟಿ ನವ್ಯಾ ಬಗ್ಗೆ ಧ್ಯಾನ್ ತಮಾಷೆ ಮಾಡಿದ್ದಾರೆ. "ನಾವಿಬ್ಬರು ಬಹಳ ದಿನಗಳ ನಂತರ ಒಟ್ಟಿಗೆ ನಟಿಸಿದ್ದೇವೆ. ನವ್ಯಾ ಮದುವೆ ಆಗಿದ್ದಾರೆ, ಆಕೆಗೆ ಒಬ್ಬ ಮಗ ಕೂಡ ಇದ್ದಾನೆ. ಆದ್ರು, ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವಾಗ, ನವ್ಯಾ ಸೀರೆ ಉಟ್ಟು ಕಣ್ಣಲ್ಲಿ ನೀರು ತುಂಬಿಕೊಂಡು ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ ಅಂತ ನಾನು ಭಾವಿಸ್ತೀನಿ" ಎಂದು ಅಣಕವಾಡಿದ್ದಾರೆ. ಈ ಮಾತು ಕೇಳಿ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದವರು ಗೊಳ್ ಎಂದು ನಕ್ಕಿದ್ದಾರೆ.

Advertisement

ಧ್ಯಾನ್ ತಮಾಷೆ ಅಲ್ಲಿಗೆ ನಿಲ್ಲುವುದಿಲ್ಲ. ಬಳಿಕ ವೇದಿಕೆ ಏರಿದ ನಟಿ ನವ್ಯಾ ನಾಯರ್ "ಚಿಂತಿಸಬೇಡ ಧ್ಯಾನ್. ನೀವು ಮುಖ್ಯಮಂತ್ರಿಯಾದಾಗ, ನಿಮ್ಮ ಆಸೆಯಂತೆ, ನಾನು ಹಸಿರು ಬಾರ್ಡರ್ ಸೀರೆ ಉಟ್ಟು, ಡೈಮಂಡ್ ನೆಕ್ಲೆಸ್ ಹಾಕಿಕೊಂಡು ಮುಂದಿನ ಸಾಲಿನಲ್ಲಿ ಕುಳಿತು, ಕಣ್ಣೀರು ಸುರಿಸುತ್ತಾ, ಜೈಕಾರ ಹಾಕ್ತೀನಿ. ಮುಂದಿನ ಸಾಲಿನಲ್ಲಿ ನನಗೆ ಆಸನ ವ್ಯವಸ್ಥೆ ಮಾಡ್ತೀರಾ?" ಎಂದು ನಗೆ ಚಟಾಕಿ ಹಾರಿಸಿದ್ದಾರೆ.