ಕನ್ನಡ ಚಿತ್ರನಟ ಕಿರಣ್ ಶ್ರೀನಿವಾಸ್ ಇತ್ತೀಚೆಗೆ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಸಾರ್ವಜನಿಕವಾಗಿ ಕೂಡ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. 'ಹಾಗೆ ಸುಮ್ಮನೆ', 'ಚಮ್ಕಾಯ್ಸಿ ಚಿಂದಿ ಉಡಾಯ್ಸಿ', 'ಚಿರು' ಸೇರಿ ಒಂದಷ್ಟು ಸಿನಿಮಾಗಳಲ್ಲಿ ಕಿರಣ್ ನಟಿಸಿದ್ದರು. ಸಿಹಿಕಹಿ ಚಂದ್ರು ಮಗಳು ಹಿತಾ ಚಂದ್ರಶೇಖರ್ ಅವರನ್ನು ಕಿರಣ್ ಪ್ರೀತಿಸಿ ಮದುವೆ ಆಗಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಕಿರಣ್ ಹಿಂದೂ ಧರ್ಮ, ಆರ್‌ಎಸ್‌ಎಸ್‌ ಬಗ್ಗೆ ನೀಡಿರುವ ಹೇಳಿಕೆ ಭಾರೀ ಚರ್ಚೆ ಹುಟ್ಟಾಕ್ಕಿದೆ. ಈ ಬಗ್ಗೆ ಪರ ವಿರೋಧ ಚರ್ಚೆ ನಡೀತಿದೆ.

Advertisement

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ಕಿರಣ್ ಶ್ರೀನಿವಾಸ್ ಬಾಲ್ಯದಲ್ಲಿ ಮುಸ್ಲಿಂ ಸಮುದಾಯದವರೇ ಹೆಚ್ಚು ಓದುತ್ತಿದ್ದ ಶಾಲೆಯಲ್ಲಿ ಓದಿದ್ದರು. ಅದೇ ಸಮಯದಲ್ಲಿ ಆರ್‌ಎಸ್‌ಎಸ್‌ ಶಾಖೆಗೆ ಕೂಡ ಹೋಗುತ್ತಿದ್ದರಂತೆ. ಮುಸ್ಲಿಮರ ವಿರುದ್ಧ ಬಿತ್ತಿದ್ದ ದ್ವೇಷದಿಂದ ಹೊರ ಬರೋಕೆ 26 ವರ್ಷ ಬೇಕಾಯ್ತು ಎಂದು ಕಿರಣ್ ಹೇಳಿದ್ದಾರೆ. Peepal TV ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಇದೇ ವೇಳೆ ಅಯೋಧ್ಯೆ ರಾಮ ಮಂದಿರ, ಶ್ರೀರಾಮನ ಬಗ್ಗೆ ಕಿರಣ್ ಮಾತನಾಡಿರುವುದು ವೈರಲ್ ಆಗ್ತಿದೆ.

Advertisement

ನಾನು ನಾಸ್ತಿಕ.. ರಾಮ ದೇವರು ಎನ್ನುವುದಕ್ಕೆ ಸಾಕ್ಷಿ ಆಧಾರ ಇದ್ಯಾ? ಸರಿ ರಾಮ ಒಬ್ಬ ಲೆಜೆಂಡ್ ಎನ್ನುವುದಕ್ಕೆ ಸಾಧ್ಯವೇ? ರಾಮರಾಜ್ಯದಲ್ಲಿ ಎಲ್ಲರೂ ಸಮಾನರೂ ಅಂತ ರಾಮನೇ‌‌‌ ಹೇಳುವಾಗ ರಾಮ ದೇವರು ಹೇಗಾಗ್ತಾನೆ? ಎಂದು ಕಿರಣ್ ಶ್ರೀನಿವಾಸ್ ಪ್ರಶ್ನಿಸಿದ್ದಾರೆ. ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ಕಳ್ಳತನ ಘಟನೆ ಎಲ್ಲರಿಗೂ ನೋವು ತಂದಿದೆ. ಅದರ ಬಗ್ಗೆ ಮಾತನಾಡುವುದು ಬೇಡ. ಸಾಕಷ್ಟು ಜನ ನಂಬಿಕೆಯಿಂದ ಅಲ್ಲಿಗೆ ಹೋಗ್ತಾರೆ. ಈ ಘಟನೆಯಿಂದ ಅಂತಹವರಿಗೆ ನೋವಾಗಿರುತ್ತದೆ. ಈ ಬಗ್ಗೆ ನನಗೆ ಬೇಸರವಿದೆ" ಎಂದು ಕಿರಣ್ ಹೇಳಿದ್ದಾರೆ.

ಆರ್‌ಎಸ್‌ಎಸ್‌ ಹಾಗೂ ಬಿಜೆಪಿ ಸೇರಿ ಅಯೋಧ್ಯೆ ರಾಮಮಂದಿರ ನಿರ್ಮಿಸಿದ್ರು. ಆದ್ರೆ ಅಯೋಧ್ಯೆಯಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋತ್ರು.. ಈಗ ನಡೆದಿರುವ ದೇಣಿಗೆ ಕಳ್ಳತನ ವಿಚಾರ ನೋಡಿದ್ರೆ ಮುಂದಿನ ಚುನಾವಣೆಯಲ್ಲಿ ಕೂಡ ಬಿಜೆಪಿಗೆ ಹಿನ್ನಡೆ ಆಗಬಹುದು ಎಂದು ನಟ ಕಿರಣ್ ಶ್ರೀನಿವಾಸ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾಸ್ತಿಕತೆ ಎನ್ನುವುದು ಪಾಶ್ಚಿಮಾತ್ಯರಿಂದ ಬಂತು ಎಂದು ಎಂದು ಎಲ್ಲರೂ ಅಂದುಕೊಂಡಿದ್ದಾರೆ. ಆದರೆ ನಮ್ಮಲ್ಲೇ ಚಾರ್ವಾಕರಿಂದ ಇದು ಆರಂಭವಾಯ್ತು ಎನ್ನುವುದು ಬಹಳಷ್ಟು ಜನಕ್ಕೆ ಗೊತ್ತಿಲ್ಲ.ನನ್ನ ಸನ್ನಿವೇಶಗಳು, ಅನುಭವಗಳು ನನ್ನ ನಾಸ್ತಿಕತೆ ಕಡೆಗೆ ತಳ್ಳಿದೆ. ಆಸ್ತಿಕತೆ, ನಾಸ್ತಿಕತೆ ಎನ್ನುವುದು ಅವರವರ ನಂಬಿಕೆಗೆ ಬಿಟ್ಟಿದ್ದು ಎಂದು ತಿಳಿಸಿದ್ದಾರೆ.

Advertisement

ಬ್ರಹ್ಮಾಂಡವನ್ನು ಸೃಷ್ಟಿಸಿದ್ದು ದೇವರು ಎಂದು ಹೇಳಿದ್ರೆ, ಆಗ ನಾನು ನನ್ನ ನಾಸ್ತಿಕವಾದದ ಬಗ್ಗೆ ಮಾತನಾಡ್ತೀನಿ. ಎಲ್ಲವನ್ನು ದೇವರು ಸೃಷ್ಟಿಸಿದ್ದು ಎನ್ನುವುದಕ್ಕೆ ಆಧಾರ ಇಲ್ಲ. ಹಾಗಾಗಿ ನಾನು ನಂಬಲ್ಲ ಎಂದು ಹೇಳ್ತೀನಿ. ನಾನು ಸಾಕಷ್ಟು ಮಂತ್ರಗಳನ್ನು ಕಲಿತ್ತಿದ್ದೀನಿ. ದೇವರು ಇದ್ದಿದ್ರೆ ಮಕ್ಕಳಿಗೆ ಕ್ಯಾನ್ಸರ್ ಬರ್ತಿತ್ತಾ? ದೇವರು ಇದ್ದು ಹೀಗಾಗುತ್ತೆ ಅಂದ್ರೆ ನಂಬ್ತೀರಾ? ಅದನ್ನು ಕರ್ಮ ಎನ್ನುವುದಕ್ಕೆ ಯಾವುದೇ ಆಧಾರ ಇಲ್ವಲ್ಲ.. ಎಷ್ಟೋ ಅನ್ಯಾಯ ಮಾಡುವವರು ಕೂಡ ಚೆನ್ನಾಗಿಯೇ ಇದ್ದಾರಲ್ಲ.. ಯಾವುದಕ್ಕೆ ಉತ್ತರ ಸಿಗಲ್ವೋ ಅದನ್ನು ನಾವು ದೇವರ ಮೇಲೆ ಹಾಕುತ್ತಿದ್ದೀವಿ ಎಂದು ಕಿರಣ್ ಹೇಳಿದ್ದಾರೆ.

ಕಳೆದ ತಿಂಗಳು 'ಕಾಕ್ರೋಚ್ ಜನತಾ ಪಕ್ಷ' ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಕೂಡ ನಟ ಕಿರಣ್ ಶ್ರೀನಿವಾಸ್ ಭಾಗಿ ಆಗಿದ್ದರು. ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆಯ ಅಕ್ರಮದಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನ್ಯಾಯ ಆಗಿರುವುದರಿಂದ ಕೇಂದ್ರ ಸಚಿವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿತ್ತು.