ನಾಡಿನೆಲ್ಲೆಡೆ ಮೊದಲ ಆಷಾಢ ಶುಕ್ರವಾರ(ಜುಲೈ 17) ಸಂಭ್ರಮ ಮನೆ ಮಾಡಿದೆ. ಚಾಮುಂಡಿ ಬೆಟ್ಟದಲ್ಲಿ 4 ಶುಕ್ರವಾರ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ದೊಡ್ಡ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯುತ್ತಿದ್ದಾರೆ. ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಂದು ಚಾಮುಂಡಿ ತಾಯಿ ದರ್ಶನ ಪಡೆದು ಸಂಕಷ್ಟ ಪರಿಹರಿಸುವಂತೆ ಬೇಡಿಕೊಂಡರು.
ಸೋದರಳಿಯ ಚಂದು ಜೊತೆ ವಿಜಯಲಕ್ಷ್ಮಿ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ್ದರು. ಪತಿ ದರ್ಶನ್ ಹಾಗೂ ಮಗ ವಿನೀಶ್ ಹೆಸರಿನಲ್ಲಿ ಅರ್ಚನೆ ಮಾಡಿಸಿದ್ದಾರೆ. ಇತ್ತೀಚೆಗೆ ಪ್ರತಿ ವರ್ಷ ದರ್ಶನ್ ಆಷಾಢ ಶುಕ್ರವಾರ ಸಮಯದಲ್ಲಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುತ್ತಿದ್ದರು. 2024ರಲ್ಲಿ ಅದು ಸಾಧ್ಯವಾಗಿರಲಿಲ್ಲ. ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲು ಸೇರಿದ್ದರು. ಬಳಿಕ ಹೈಕೋರ್ಟ್‌ನಲ್ಲಿ ಜಾಮೀನು ಪಡೆದು ಹೊರ ಬಂದಿದ್ದರು. ಕಳೆದ ವರ್ಷ ಕೂಡ ಪತ್ನಿ ಹಾಗೂ ಸಹೋದರ ದಿನಕರ್ ಜೊತೆ ಆಷಾಢ ಶುಕ್ರವಾರದಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ ಮತ್ತೆ ಜೈಲು ಸೇರುವಂತಾಯಿತು. 11 ತಿಂಗಳಿಂದ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ವರ್ಷವೂ ಆಷಾಢ ಶುಕ್ರವಾರ ದರ್ಶನ್ ಚಾಮುಂಡಿ ಬೆಟ್ಟಕ್ಕೆ ಹೋಗಲು ಸಾಧ್ಯವಾಗದಂತಾಗಿದೆ.
ದರ್ಶನ್ ಎಲ್ಲೇ ಹೋದರು ಬಂದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದರು. ಚಾಮುಂಡಿ ಬೆಟ್ಟದಲ್ಲಿ ದರ್ಶನ್ ದೇವರ ದರ್ಶನಕ್ಕೆ ಹೋದಾಗಲೂ ನೂಕು ನುಗ್ಗಲು ಉಂಟಾಗುತ್ತಿತ್ತು. ದೇವಸ್ಥಾನ ಎನ್ನುವುದನ್ನು ನೋಡದೇ ಅಭಿಮಾನಿಗಳು 'ಡಿ ಬಾಸ್' ಎಂದ ಜೈಕಾರ ಹಾಕುತ್ತಿದ್ದರ. ಇಂದು ವಿಜಯಲಕ್ಷ್ಮಿ ದರ್ಶನ್ ಮಾತ್ರ ಬೆಟ್ಟಕ್ಕೆ ಬಂದಿರುವುದು ಗೊತ್ತಾಗಿ ಅಭಿಮಾನಿಗಳು ದರ್ಶನ್ ನೆನಪು ಮಾಡಿಕೊಳ್ಳುತ್ತಿದ್ದಾರೆ. ನಿನ್ನೆಯಷ್ಟೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮಿ ದರ್ಶನ್ ವಿಶೇಷ ಫೋಟೊ ಹಂಚಿಕೊಂಡಿದ್ದರು. ದರ್ಶನ್ ಜೊತೆಗಿನ AI ಜನರೇಟೆಡ್ ಇಮೇಜ್ ಪೋಸ್ಟ್ ಮಾಡಿ "ನಗುತ್ತಿರುವ ಮುಖದ ಹಿಂದಿನ ನೀವು, ಭಗವಂತನಿಗೆ ಮಾತ್ರ ಗೊತ್ತು" ಎಂದು ಬರೆದುಕೊಂಡಿದ್ದರು. ಅಭಿಮಾನಿಗಳುವಿಜಯಲಕ್ಷ್ಮಿ ಸ್ಪೆಷಲ್ ಪೋಸ್ಟ್
More Articles