'ಟಾಕ್ಸಿಕ್' ಚಿತ್ರದ 'ತಬಾಹಿ' ವೀಡಿಯೋ ಸಾಂಗ್ ಧೂಳೆಬ್ಬಿಸಿದೆ. ಯಶ್ ಹಾಗೂ ಕಿಯಾರಾ ಅದ್ವಾನಿ ಕೆಮೆಸ್ಟ್ರಿ, ಅದ್ಧೂರಿ ವಿಷ್ಯುವಲ್ಸ್, ವಿಶಾಲ್ ಮಿಶ್ರಾ ಟ್ಯೂನು, ವಾಯ್ಸ್ ಕೇಳಿ ಫಿದಾ ಆಗಿದ್ದಾರೆ. ಅಭಿಮಾನಿಗಳಂತೂ ಪದೇ ಪದೇ ಸಾಂಗ್ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಕಥೆ ಬಗ್ಗೆ ಸಾಂಗ್‌ನಲ್ಲಿ ಸಾಕಷ್ಟು ಸುಳಿವುಗಳಿವೆ ಎನ್ನುವ ಚರ್ಚೆ ನಡೀತಿದೆ.

Advertisement

ಈಗಾಗಲೇ 'ಟಾಕ್ಸಿಕ್' ಚಿತ್ರದ 4 ಟೀಸರ್ ಬಂದು ಸದ್ದು ಮಾಡಿದೆ. ಸಿನಿಮಾ ಕಥೆ ಏನಿರಬಹುದು ಎನ್ನುವ ಸುಳಿವು ಸಿಕ್ಕಿದೆ. ಯಶ್ ಕೂಡ ಒನ್‌ಲೈನ್ ಸ್ಟೋರಿ ಹೇಳಿಬಿಟ್ಟಿದ್ದಾರೆ. ಇನ್ನು ಏನೆಲ್ಲಾ ಸಿನಿಮಾದಲ್ಲಿ ಸರ್‌ಪ್ರೈಸ್ ಇರಬಹುದು ಎಂದು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. 'ತಬಾಹಿ' ಸಾಂಗ್ ಕೂಡ ಅಲ್ಲಲ್ಲಿ ಎಡಿಟ್ ಮಾಡಿದಂತೆ ಕಾಣ್ತಿದೆ. ಮಾಂಟೇಜ್ ಸಾಂಗ್ ಆಗಿರುವುದರಿಂದ ಒಂದಷ್ಟು ದೃಶ್ಯಗಳನ್ನು ಅರ್ಧಕ್ಕೆ ಕಟ್ ಮಾಡಿದಂತೆ ಕಾಣ್ತಿದೆ. ಚಿತ್ರದಲ್ಲಿ ಕಿಯಾರಾ ಬಿಕಿನಿ ಧರಿಸಿ ನಟಿಸಿದ್ದಾರಾ? ಎನ್ನುವ ಚರ್ಚೆ ಕೂಡ ನಡೀತಿದೆ. ಆಕೆ ಇಲ್ಲದೇ ಇದ್ದರೂ ಇದ್ದಂತೆ ಕಲ್ಪಿಸಿಕೊಂಡು ರಾಯ ತನ್ನದೇ ಲೋಕದಲ್ಲಿ ವಿಹರಿಸುವ ಸಮಯದಲ್ಲೇ ಈ ಹಾಡು ಬರುತ್ತದೆ ಎಂದು ಕೆಲವರು ಬಲವಾಗಿ ನಂಬುತ್ತಿದ್ದಾರೆ.

Advertisement

ರೆಬೆಕಾ ಆಗಿ ತಾರಾ ಸುತಾರಿಯಾ ಸಣ್ಣ ಝಲಕ್‌ನಲ್ಲಿ ಬಂದು ಹೋಗ್ತಾರೆ. ಆಕೆಯ ಡೈಲಾಗ್ ಅದಕ್ಕೆ ರಾಯನ ಪ್ರತಿಕ್ರಿಯೆ ನೋಡಿ ಕಥೆಯ ಬಗ್ಗೆ ದೊಡ್ಡ ಸುಳಿವು ಹೊರಬಂದಿದೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ. ಕಥೆಯ ಬಗ್ಗೆ ತಮ್ಮದೇ ಸಾಕಷ್ಟು ಥಿಯರಿಗಳನ್ನು ಮುಂದಿಡುತ್ತಿದ್ದಾರೆ. ಮುಖ್ಯವಾಗಿ ನಾಡಿಯಾ ಪಾತ್ರ ಸತ್ತು ಹೋದ ಬಳಿಕ ಆಕೆಯ ನೆನೆನಪಿನಲ್ಲೇ ರಾಯ ಬದುಕುವ ಸಮಯದಲ್ಲಿ ಬರುವ ಹಾಡು ಇದು ಎಂದು ಕೆಲವರು ಊಹಿಸುತ್ತಿದ್ದಾರೆ.

ಸರ್ಕಸ್‌ನಲ್ಲಿ ಪರ್ಫಾರ್ಮನ್ಸ್ ಮಾಡುವ ಹುಡುಗಿ ನಾಡಿಯಾ ಆಗಿ ಕಿಯಾರಾ ನಟಿಸಿದ್ದಾರೆ. ಸಾಂಗ್‌ನಲ್ಲಿ ಕೂಡ ಸರ್ಕಸ್‌ ವೇಳೆ ಕೂಡ ಆಕೆಯನ್ನು ಎಳೆದುಕೊಂಡು ಹೋಗಿ ರಾಯ ರೊಮ್ಯಾನ್ಸ್ ಮಾಡ್ತಾನೆ. ಟೀಸರ್‌ನಲ್ಲಿ ಗಮನಿಸಿದ್ರೆ, ಸರ್ಕಸ್‌ ಹಾಲ್‌ಗೆ ಬೆಂಕಿ ಬಿದ್ದಿರುವ ಫ್ರೇಮ್ ಕೂಡ ಇದೆ. ಅಂದ್ರೆ ನಾಡಿಯಾ ಸತ್ತು ಹೋಗಿರುತ್ತಾಳೆ. ಆಕೆಯ ಭ್ರಮೆಯಲ್ಲಿ ರಾಯ ಮುಳುಗಿ ತೇಲುವಂತೆ ಕಾಣುತ್ತಿದೆ. ನಾಡಿಯಾ ಗುಂಗಿನಿಂದ ಹೊರ ಬರದ ರಾಯನಿಗೆ ಹತ್ತಿರವಾಗಲು ರೆಬೆಕಾ ಪ್ರಯತ್ನಿಸುತ್ತಿರುವಂತೆ ಕಾಣ್ತಿದೆ. ಆದರೆ ಅದಕ್ಕೆ ಆತ ಸಿದ್ಧನಿಲ್ಲ. ಇದನ್ನೇ ಸಾಂಗ್‌ನಲ್ಲಿ ತೋರಿಸಿದ್ದಾರೆ ಎಂದು ಭಾವಿಸುತ್ತಿದ್ದಾರೆ.

Advertisement

ನಾಡಿಯಾ ಸಾಯುವುದಿಲ್ಲ. ಆಕೆಗೆ ರಾಯ ಮೋಸ ಮಾಡ್ತಾನಾ? ಆಕೆ ದೂರಾಗಿ ರಾಯ ನೋವಿನಲ್ಲಿ ನರಳುತ್ತಾನಾ? ಆ ಸಂದರ್ಭದಲ್ಲಿ ಈ ಸಾಂಗ್ ಬರುತ್ತಾ? ಎಂದು ಕೆಲವರು ಊಹಿಸುತ್ತಿದ್ದಾರೆ. ಒಟ್ಟಾರೆ 'ತಬಾಹಿ' ಸಾಂಗ್ ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದೆ. ಆಗಸ್ಟ್ 26ರವರೆಗೆ ಅದು ಕೊರೆಯುತ್ತಲೇ ಇರುತ್ತದೆ. ಅಪ್ಪಿ ತಪ್ಪಿ 'ಟಾಕ್ಸಿಕ್' ಸಿನಿಮಾ ಟ್ರೈಲರ್‌ನಲ್ಲಿ ಈ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕರೂ ಸಿಗಬಹುದು.

ಈ ಹಿಂದೆ 'ತಬಾಹಿ' ಸಾಂಗ್ ಪೋಸ್ಟರ್ ನೋಡಿ ನಾಡಿಯಾ ಪಾತ್ರದ ಬಗ್ಗೆ ಕೆಲವರು ಏನೇನೋ ಅಂದುಕೊಂಡಿದ್ದರು. ಕಣ್ಣು ಕಾಣದ ವಿಶೇಷ ಚೇತನ ಪಾತ್ರದಲ್ಲಿ ಹುಡುಗಿಯಾಗಿ ಕಿಯಾರಾ ನಟಿಸಿದ್ದಾರೆ ಎಂದು ಕಾಮೆಂಟ್ ಮಾಡಿದ್ದರು. ಆದರೆ 'ಲೇಡೀಸ್ & ಲೇಡೀಸ್' ಟೀಸರ್‌ನಲ್ಲಿ ಅಂತಹ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಅದೇ ರೀತಿ ಈಗ 'ತಬಾಹಿ' ಸಾಂಗ್ ನೋಡಿ ಏನೇನೋ ಚರ್ಚೆ ಮಾಡುತ್ತಿದ್ದಾರೆ. ಎಲ್ಲದ್ದಕ್ಕೂ ಆಗಸ್ಟ್ 26ರಂದು ತೆರೆಮೇಲೆ ಉತ್ತರ ಸಿಗಲಿಲ್ಲ. ಅದಕ್ಕೂ ಮುನ್ನ ಇನ್ನು 4 ಸಾಂಗ್ ಹಾಗೂ ಟ್ರೈಲರ್ ನೋಡುವುದು ಬಾಕಿಯಿದೆ.