ಗೌರಿ ಗಣೇಶ ಹಬ್ಬಕ್ಕೆ ಬಂದ 7 ಹೊಸ ಪೋಸ್ಟರ್ ಗಳ ಝಲಕ್


ಗೌರಿ ಹಬ್ಬದ ಈಗಾಗಲೇ ಶುರುವಾಗಿದೆ. ನಾಳೆ ಗಣೇಶ ಹಬ್ಬ ಕೂಡ ಜೋರಾಗಿ ಇರುತ್ತದೆ. ಈ ಹಬ್ಬಕ್ಕೆ ಸ್ಯಾಂಡಲ್ ವುಡ್ ನಟರು ತಮ್ಮ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

ಅಂದುಕೊಂಡಂತೆ ಆಗಿದ್ದರೆ, ಕನ್ನಡದ ಯಾವುದಾದರೂ ದೊಡ್ಡ ಚಿತ್ರ ಗಣೇಶ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಈ ವರ್ಷ ಹಬ್ಬದ ದಿನ ಯಾವುದೇ ದೊಡ್ಡ ಚಿತ್ರಗಳು ರಿಲೀಸ್ ಆಗುತ್ತಿಲ್ಲ.

ಖುಷಿಯಲ್ಲೊಂದು ನಿರಾಸೆ: 'ವಿಲನ್' ಬರುವ ದಿನ ಮತ್ತೆ ಬದಲಾಯ್ತು.!

ಸಿನಿಮಾ ರಿಲೀಸ್ ಆಗಿಲ್ಲ ಅಂದ್ರೆ ಏನಂತೆ, ಕನ್ನಡದ ಹೊಸ ಹೊಸ ಸಿನಿಮಾಗಳ ಪೋಸ್ಟರ್ ಗಳು ಈಗ ಅಭಿಮಾನಿಗಳಿಗಾಗಿ ಬಂದಿದೆ. 'ದಿ ವಿಲನ್' 'ಭರಾಟೆ', 'ಕವಚ' 'ಸೀತಾರಾಮ ಕಲ್ಯಾಣ', 'ನಾತಿಚರಾಮಿ' 'ಟಕ್ಕರ್' ಹಾಗೂ 'ಪಡ್ಡೆಹುಲಿ' ಸಿನಿಮಾದ ಪೋಸ್ಟರ್ ಗಳು ಹಬ್ಬದ ದಿನ ಹೊರ ಬಂದಿವೆ. ಆ ಪೋಸ್ಟರ್ ಗಳು ಮುಂದಿವೆ ನೋಡಿ...

ಹಬ್ಬಕ್ಕೆ ವಿಶ್ ಮಾಡಿದ 'ಭರಾಟೆ' ಟೀಂ

ನಟ ಶ್ರೀಮುರಳಿ ಅಭಿನಯದ 'ಭರಾಟೆ' ಸಿನಿಮಾದ ಮೂರ್ನಾಲ್ಕು ಹೊಸ ಪೋಸ್ಟರ್ ಗಳು ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿವೆ. ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಶ್ರೀ ಲೀಲಾ ನಾಯಕಿಯಾಗಿ ನಟಿಸಿದ್ದಾರೆ. ಈಗಾಗಲೇ ಸಿನಿಮಾದ ಒಂದು ಹಾಡಿನ ಟೀಸರ್ ಹಿಟ್ ಆಗಿದೆ.

ಅಕ್ಟೋಬರ್ 18ಕ್ಕೆ 'ದಿ ವಿಲನ್'

'ದಿ ವಿಲನ್' ಸಿನಿಮಾದ ಬಿಡುಗಡೆಯ ದಿನಾಂಕ ಹಬ್ಬದ ವಿಶೇಷವಾಗಿ ಅನೌನ್ಸ್ ಆಗಿದೆ. ಚಿತ್ರದ ಪೋಸ್ಟರ್ ನಲ್ಲಿ ಬಿಡುಗಡೆ ದಿನಾಂಕ ತಿಳಿಸಿದ್ದು, ಪ್ರೇಕ್ಷಕರಿಗೆ ಹಬ್ಬದ ಶುಭಾಶಯ ಹೇಳಿದ್ದಾರೆ. 'ದಿ ವಿಲನ್' ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯ ಚಿತ್ರವಾಗಿದ್ದು, ಪ್ರೇಮ್ ನಿರ್ದೇಶನ ಮಾಡಿದ್ದಾರೆ.

ಶಿವರಾಜ್ ಕುಮಾರ್ 'ಕವಚ' ಚಿತ್ರಕ್ಕೆ ಹೊಸ ನಾಯಕಿಯ ಆಗಮನ

ಶೃತಿ ಹರಿಹರನ್ ಅವರ 'ನಾತಿಚರಾಮಿ'

'ನಾತಿಚರಾಮಿ' ಚಿತ್ರತಂಡ ಕೂಡ ಹಬ್ಬಕ್ಕೆ ಶುಭ ಹಾರೈಸಿದೆ. ಈ ಸಿನಿಮಾದಲ್ಲಿ ನಟಿ ಶೃತಿ ಹರಿಹರನ್ ಹಾಗೂ ಸಂಚಾರಿ ವಿಜಯ್ ನಟಿಸುತ್ತಿದ್ದಾರೆ. 'ನಾತಿಚರಾಮಿ' ಸಿನಿಮಾಗೆ ಮಂಸೋರೆ ನಿರ್ದೇಶನ ಮಾಡುತ್ತಿದ್ದಾರೆ. ಬಿಂದುಮಾಲಿನಿ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಸಂಧ್ಯಾರಾಣಿಯವರ ಕತೆ-ಸಂಭಾಷಣೆಯನ್ನು ಬರೆದಿದ್ದಾರೆ.

ಶುಭ ಕೋರಿದ 'ಸೀತಾರಾಮ'

ನಟ ನಿಖಿಲ್ ಕುಮಾರ್ ಹಾಗೂ ನಟಿ ರಚಿತಾ ರಾಮ್ ಗೌರಿ ಗಣೇಶ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಶುಭ ಕೋರಿದ್ದಾರೆ. ಇವರಿಬ್ಬರು ನಟಿಸಿರುವ 'ಸೀತಾರಾಮ ಕಲ್ಯಾಣ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಸಿನಿಮಾವನ್ನು ಎ ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಟೀಸರ್ ಈಗಾಗಲೇ ಸೂಪರ್ ಹಿಟ್ ಆಗಿದೆ.

'ಕವಚ' ಚಿತ್ರದ ಪೋಸ್ಟರ್

'ಕವಚ' ಚಿತ್ರದ ಹೊಸ ಪೋಸ್ಟರ್ ಹಬ್ಬದ ವಿಶೇಷವಾಗಿ ಬಂದಿದೆ. ಈ ಸಿನಿಮಾದಲ್ಲಿ ಶಿವಣ್ಣ ಮೊದಲ ಬಾರಿಗೆ ಕುರುಡನ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ. ಸಿನಿಮಾ ಮಲೆಯಾಳಂ ಭಾಷೆಯ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ. ಇಶಾ ಕೊಪ್ಪಿಕರ್ ಚಿತ್ರದ ನಾಯಕಿ ಆಗಿದ್ದಾರೆ. 17 ವರ್ಷಗಳ ನಂತರ ಶಿವರಾಜ್ ಕುಮಾರ್ ರೀಮೇಕ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

'ಟಕ್ಕರ್' ಕೊಟ್ಟ ಮನೋಜ್

ನಟ ದರ್ಶನ್ ಅವರ ಕುಟುಂಬದ ಪ್ರತಿಭೆ ಮನೋಜ್ ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ 'ಟಕ್ಕರ್'. ಈ ಚಿತ್ರದ ವಿಶೇಷ ಪೋಸ್ಟರ್ ಗಳು ಹಬ್ಬ ದಿನ ರಿಲೀಸ್ ಆಗಿದೆ. ರಂಜನಿ ರಾಘವನ್ ಈ ಚಿತ್ರದ ನಾಯಕಿ ಆಗಿದ್ದಾರೆ. ರಘು ಶಾಸ್ತ್ರಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

'ಪಡ್ಡೆಹುಲಿ'ಯ ಹೊಸ ಲುಕ್

ನಿರ್ಮಾಪಕ ಕೆ.ಮಂಜು ಅವರ ಮಗ ಶ್ರೇಯಸ್ ನಟನೆಯ ಮೊದಲ ಸಿನಿಮಾ 'ಪಡ್ಡೆಹುಲಿ'. ಈ ಸಿನಿಮಾ ತಂಡ ಕೂಡ ಹಬ್ಬಕ್ಕೆ ವಿಶ್ ಮಾಡಿದ್ದಾರೆ. ಗುರುದೇಶ ಪಾಂಡೇ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ತೇಜಸ್ವಿನಿ ಎಂಟರ್ ಪ್ರೈಸಸ್" ಬ್ಯಾನರ್ ನಲ್ಲಿ ಎಂ ರಮೇಶ್ ರೆಡ್ಡಿ ನಿಮಿ೯ಸುತ್ತಿದ್ದಾರೆ. ಶ್ರೇಯಸ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಅಭಿನಯಿಸುತ್ತಿದ್ದಾರೆ.

Have a great day!
Read more...

English Summary

Kannada new movies posters came on the occasion of Gowri Ganesha festival.