ಬ್ರೇಕ್ ಅಪ್ ಸುದ್ದಿ: ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ನಿಂತ ಕಿಚ್ಚ ಸುದೀಪ್


ಕಳೆದ ಮೂರ್ನಾಲ್ಕು ದಿನದಿಂದ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಸುದ್ದಿ ದೊಡ್ಡ ಚರ್ಚೆಯಾಗುತ್ತಿದೆ. ನಿಶ್ಚಿತಾರ್ಥ ಮಾಡಿಕೊಂಡು ಮದುವೆ ಸಿದ್ಧವಾಗಿದ್ದ ಈ ಜೋಡಿ ಈ ಮಧ್ಯೆ ಬ್ರೇಕ್ ಅಪ್ ಮಾಡಿಕೊಂಡಿದೆ ಎಂದು ಆಪ್ತವಲಯಗಳಿಂದ ಮಾಹಿತಿ ಹೊರಬಿದ್ದಿತ್ತು.

ನಂತರ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್ ಮಂದಣ್ಣ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ '' ಇದು ಕೌಟುಂಬಿಕ ವಿಚಾರ, ನಾವು ಈಗಾಗಲೇ ನಿರ್ಧಾರ ತೆಗೆದುಕೊಂಡಿದ್ದೇವೆ. ಈ ಬಗ್ಗೆ ಮಾತನಾಡುವ ಅವಶ್ಯಕತೆ ಇಲ್ಲ'' ಎಂದಿದ್ದರು.

ರಶ್ಮಿಕಾ -ರಕ್ಷಿತ್ ಬ್ರೇಕ್ ಅಪ್: ಆಪ್ತ ಮೂಲಗಳಿಂದ ಬಂದ ಬ್ರೇಕಿಂಗ್ ನ್ಯೂಸ್!

ಮತ್ತೊಂದೆಡೆ ಈ ಬಗ್ಗೆ ಮೌನಮುರಿದ ರಕ್ಷಿತ್ ಶೆಟ್ಟಿ ಕೂಡ ಟ್ವಿಟ್ಟರ್ ಹಾಗೂ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿದ್ದರು. ''ಸದ್ಯದಲ್ಲೇ ಸತ್ಯ ನಿಮಗೂ ತಿಳಿಯಲಿದೆ. ಸದ್ಯಕ್ಕೆ ಯಾವುದನ್ನ ನಂಬಬೇಡಿ'' ಎಂದಿದ್ದರು. ಆದ್ರೆ, ನಿಖರವಾಗಿ ಯಾರೊಬ್ಬರು ಕೂಡ ಬ್ರೇಕ್ ಅಪ್ ಆಗಿದೆ ಎಂಬುದನ್ನ ಒಪ್ಪಿಕೊಂಡಿಲ್ಲ ಮತ್ತು ಸಂಬಂಧ ಚೆನ್ನಾಗಿದೆ ಎಂದು ಕೂಡ ಹೇಳುತ್ತಿಲ್ಲ. ಈ ಎಲ್ಲಾ ಬೆಳವಣಿಗೆಯನ್ನ ಗಮನಿಸಿದ ಕಿಚ್ಚ ಸುದೀಪ್ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸುದೀಪ್ ಏನಂದ್ರು.? ಮುಂದೆ ಓದಿ.....

ರಕ್ಷಿತ್ ಶೆಟ್ಟಿ ಬೆಂಬಲಕ್ಕೆ ಸುದೀಪ್

ರಶ್ಮಿಕಾ ಜೊತೆ ನಟ ರಕ್ಷಿತ್ ಶೆಟ್ಟಿ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂದು ಮೀಡಿಯಾದಲ್ಲಿ ಸುದ್ದಿ ಆದ ಬಳಿಕ, ಸ್ವತಃ ರಕ್ಷಿತ್ ಈ ಬಗ್ಗೆ ತಮ್ಮ ಅಭಿಪ್ರಾಯವನ್ನ ವ್ಯಕ್ತಪಡಿಸಿದರು. ಇದಕ್ಕೆ ಕಿಚ್ಚ ಸುದೀಪ್ ಪ್ರತಿಕ್ರಿಯಿಸಿದ್ದು, ರಕ್ಷಿತ್ ಶೆಟ್ಟಿಗೆ ಬೆಂಬಲ ಸೂಚಿಸಿದ್ದಾರೆ.

''ಇಲ್ಲಿ ತಲೆ ಹೋಗುವಂತದ್ದು ಏನು ಇಲ್ಲ'' ರಶ್ಮಿಕಾ ತಾಯಿಯ ನೇರ ನುಡಿಗಳು!

ರಕ್ಷಿತ್ ಪ್ರತಿಕ್ರಿಯೆಗೆ ಮೆಚ್ಚುಗೆ

ಬ್ರೇಕ್ ಅಪ್ ಕುರಿತು ದೊಡ್ಡ ಮಟ್ಟದ ಸುದ್ದಿಯಾಗಿದ್ದರೂ ತುಂಬಾ ತಾಳ್ಮೆಯಿಂದ ಉತ್ತರ ನೀಡಿರುವ ರಕ್ಷಿತ್ ಶೆಟ್ಟಿ ಅವರ ಪ್ರತಿಕ್ರಿಯೆಗೆ ಸುದೀಪ್ ಶ್ಲಾಘಿಸಿದ್ದಾರೆ. ''ಇದು ರಕ್ಷಿತ್ ಘನತೆ ಮತ್ತು ಪರಿಪಕ್ವತೆ. ಎಲ್ಲವೂ ಒಳ್ಳೆಯದಾಗುತ್ತೆ ಗೆಳೆಯ'' ಎಂದು ಟ್ವೀಟ್ ಮಾಡಿದ್ದಾರೆ.

ಸೆಲೆಬ್ರಿಟಿಗಳಿಗೆ ಭಾವನೆ ಇಲ್ವಾ.?

''ಸಾರ್ವಜನಿಕ ವ್ಯಕ್ತಿ ಅಂದ ಮಾತ್ರಕ್ಕೆ ಅವರ ಭಾವನೆಗಳನ್ನೆಲ್ಲಾ ಸಾರ್ವಜನಿಕವಾಗಿ ಹಂಚಿಕೊಳ್ಳಬೇಕು ಎಂದು ಇದೆಯಾ.? ಎಲ್ಲರಿಗೂ ಕೂಡ ಖಾಸಗಿ ಬದುಕಿದೆ. ಇದರ ಬಗ್ಗೆ ಹೆಚ್ಚು ಕೇಳುವುದು ಉತ್ತಮವಲ್ಲ'' ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

ರಶ್ಮಿಕಾ-ರಕ್ಷಿತ್ ಬ್ರೇಕ್ ಅಪ್ ಗೆ ಈ ಆರು ಘಟನೆಗಳೇ ಕಾರಣ.!

ಬ್ರೇಕ್ ಅಪ್ ಬಗ್ಗೆ ರಕ್ಷಿತ್ ಶೆಟ್ಟಿ ಏನಂದ್ರು.?

''ಕೆಲ ದಿನಗಳಿಂದ ನಡೆಯುತ್ತಿರುವ ಘಟನೆಗಳು, ತುಂಬಾ ಪ್ರೀತಿಸುತ್ತಿದ್ದ ಮತ್ತು ಜೊತೆಗಿದ್ದಿದನ್ನು ಕಳೆದುಕೊಳ್ಳುವಂತೆ ಮಾಡುತ್ತಿದೆ. ನೀವೆಲ್ಲರೂ ರಶ್ಮಿಕಾ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ನೀಡಿದ್ದೀರಿ. ಈ ಘಟನೆಗಳು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ನಾನು ಯಾರನ್ನು ದೂಷಿಸುವುದಿಲ್ಲ. ನಾವೆಲ್ಲರೂ ಏನನ್ನು ನೋಡುತ್ತೇವೆ ಮತ್ತು ಏನು ಹೇಳುತ್ತೇವೆ ಎಂಬುದನ್ನ ಮಾತ್ರ ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕು ಅಂತ ಏನಿಲ್ಲ.''

ಅವಳ ಬಗ್ಗೆ ನನಗೆ ಜಾಸ್ತಿ ಗೊತ್ತಿದೆ

''ಕೆಲವೊಮ್ಮೆ ನಾವು ಮತ್ತೊಂದು ದೃಷ್ಠಿಕೋನದಿಂದ ಯೋಚನೆ ಮಾಡದೆ ಒಂದು ತೀರ್ಮಾನಕ್ಕೆ ಬಂದು ಬಿಡುತ್ತೇವೆ. ನನಗೆ ರಶ್ಮಿಕಾ ಕಳೆದ ಎರಡ್ಮೂರು ವರ್ಷಗಳಿಂದ ಪರಿಚಯ. ಅವಳ ಬಗ್ಗೆ ನಿಮೆಲ್ಲರಿಗಿಂತ ನನಗೆ ಜಾಸ್ತಿ ಗೊತ್ತಿದೆ. ಅವಳನ್ನ ತಾಳ್ಮೆಯಿಂದ ಇರಲು ಬಿಡಿ.''

''ಕೆಲವೇ ದಿನಗಳಲ್ಲಿ ಸಂಪೂರ್ಣ ಸತ್ಯ ತಿಳಿಯುತ್ತೆ'' ಎಂದ ರಕ್ಷಿತ್ ಆಪ್ತ ಪುಷ್ಕರ್

ನಿಮಗೂ ಸತ್ಯ ತಿಳಿಯಲಿದೆ

''ಅದಷ್ಟೂ ಬೇಗ ಎಲ್ಲವೂ ಬಗೆಹರಿಯುತ್ತೆ ಎಂಬ ನಂಬಿಕೆ ಇದೆ. ನಿಮಗೂ ಕೂಡ ಸತ್ಯ ತಿಳಿಯಲಿದೆ. ದಯವಿಟ್ಟು ಯಾವುದೇ ಮಾಧ್ಯಮಗಳ ಸುದ್ದಿಯನ್ನ ನಂಬಬೇಡಿ. ನನ್ನ ಮತ್ತು ರಶ್ಮಿಕಾ ಕಡೆಯಿಂದ ಯಾವುದೇ ಮಾಹಿತಿ ಅವರ ಬಳಿ ಇಲ್ಲ. ಅವರ ಅವಶ್ಯಕತೆಗೆ ತಕ್ಕಂತೆ ಸುದ್ದಿಯನ್ನ ಬಿತ್ತರಿಸುತ್ತಿದ್ದಾರೆ. ಅವರ ಕಲ್ಪನೆ ನಿಜವಲ್ಲ.''

ಕಿರಿಕ್ ಜೋಡಿ ಬ್ರೇಕ್ ಅಪ್: ಮತ್ತೆ ಅದಲು ಬದಲಾಯ್ತು ಉಂಗುರ

ರಶ್ಮಿಕಾ ತಾಯಿ ಏನಂದ್ರು.?

''ಅವರವರ ಬದುಕು ಅವರವರಿಗೆ ಸ್ವಂತ. ಎಲ್ಲರೂ ಖುಷಿಯಿಂದ ಇರಬೇಕು ಅಷ್ಟೇ. ಎಲ್ಲರೂ ಒಬ್ಬೊಬ್ಬರಿಗೆ ಡಿಸ್ಟರ್ಬ್ ಆಗಿ ಅವರವರ ಕೆಲಸಕ್ಕೆ ತೊಂದರೆ ಮಾಡಿಕೊಳ್ಳುವುದು ಯಾಕೆ. ಇದರಿಂದ ಮುಂದೆ ಏನಾಗಬೇಕು ಹೇಳಿ. ಸುಮ್ಮನೆ ಯಾಕೆ ನೋವಿನಲ್ಲಿ ಬದುಕಬೇಕು.'' ಎಂದು ಈಗಾಗಲೇ ರಶ್ಮಿಕಾ ತಾಯಿ ಸುಮನ್ ಮಂದಣ್ಣ ಸ್ಪಷ್ಟನೆ ನೀಡಿದ್ದಾರೆ.

Have a great day!
Read more...

English Summary

According to family source, Rashmika Mandanna and Rakshit Shetty has decided to end their relationship. now, kiccha sudeep has tweet on this development.