ದಂಡುಪಾಳ್ಯದಲ್ಲಿ ಇರಲಿದೆ ಮುಮೈತ್ ಖಾನ್ ತಕಧಿಮಿತಾ.!


ನಿರ್ದೇಶಕ ಶ್ರೀನಿವಾಸ್ ರಾಜು ಮೂರು ಭಾಗಗಳಲ್ಲಿ 'ದಂಡುಪಾಳ್ಯ'ದ ಪುರಾಣವನ್ನ ಬಿಚ್ಚಿಟ್ಟಿದ್ದರು. ಮೂರು ಭಾಗ ತೆರೆಕಂಡ ಮೇಲೆ 'ದಂಡುಪಾಳ್ಯ' ಹಂತಕರ ಕಥೆಗೆ ಅವರು ಪೂರ್ಣ ವಿರಾಮ ಇಟ್ಟಿದ್ದರು.

ಇದೀಗ ಸ್ಯಾಂಡಲ್ ವುಡ್ ನಲ್ಲಿ 'ದಂಡುಪಾಳ್ಯ-4' ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ. ಶ್ರೀನಿವಾಸ್ ರಾಜು ತೆರೆಗೆ ತಂದ 'ದಂಡುಪಾಳ್ಯ' ಸರಣಿಗೂ 'ದಂಡುಪಾಳ್ಯ-4' ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ. ಕೆ.ಟಿ.ನಾಯಕ್ ಎಂಬುವರು 'ದಂಡುಪಾಳ್ಯ-4' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ಜೈಲಿನಿಂದ ತಪ್ಪಿಸಿಕೊಳ್ಳಲು 'ದಂಡುಪಾಳ್ಯ' ಗ್ಯಾಂಗ್ ಮಾಡಿದ ತಂತ್ರಗಳೇ 'ದಂಡುಪಾಳ್ಯ-4' ಚಿತ್ರದ ಕಥೆಯಂತೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿ ಸುಮನ್ ರಂಗನಾಥ್ ಅಭಿನಯಿಸುತ್ತಿದ್ದಾರೆ. ಸಿನಿಮಾದಲ್ಲಿ ಬರುವ ವಿಶೇಷ ಹಾಡಿಗೆ ಹೆಜ್ಜೆ ಹಾಕಲು ಮುಮೈತ್ ಖಾನ್ ಬರ್ತಿದ್ದಾರೆ.

ಬರ್ತಿದೆ 'ದಂಡುಪಾಳ್ಯ 4' : ಈ ಬಾರಿ ಗ್ಯಾಂಗ್ ಸೇರಿದ್ದಾರೆ ಯಾರು ಊಹೆ ಮಾಡದ ನಟಿ!

ಮುಮೈತ್ ಖಾನ್ ಅಂದ್ರೆ ಯಾರು ಅಂತ ಗೊತ್ತಲ್ವಾ.? ತೆಲುಗಿನ 'ಪೊಕಿರಿ', 'ಕೆವ್ವು ಕೇಕಾ' ಮುಂತಾದ ಚಿತ್ರಗಳ ಐಟಂ ಸಾಂಗ್ ಗಳಲ್ಲಿ ಸೊಂಟ ಬಳುಕಿಸಿದ್ದ ಮದನಾರಿ ಈ ಮುಮೈತ್ ಖಾನ್.

ಐಟಂ ಸಾಂಗ್ ಗಳಿಂದಲೇ ಖ್ಯಾತಿ ಪಡೆದಿರುವ ಮುಮೈತ್ ಖಾನ್ ಇದೀಗ 'ದಂಡುಪಾಳ್ಯ-4' ಚಿತ್ರದ ಹಾಡೊಂದಕ್ಕೆ ಡ್ಯಾನ್ಸ್ ಮಾಡಲಿದ್ದಾರೆ. ಈಗಾಗಲೇ ಕನ್ನಡದಲ್ಲಿ 'ರಾಜಧಾನಿ' ಹಾಗೂ 'ಪೊರ್ಕಿ' ಐಟಂ ಸಾಂಗ್ ಗಳಲ್ಲಿ ಮುಮೈತ್ ಖಾನ್ ಸ್ಪೆಪ್ ಹಾಕಿದ್ದರು. ಇದೀಗ ಲಾಂಗ್ ಗ್ಯಾಪ್ ಬಳಿಕ ಸ್ಯಾಂಡಲ್ ವುಡ್ ಕಡೆ ಮುಖ ಮಾಡಿದ್ದಾರೆ.

ಅಂದ್ಹಾಗೆ, 'ದಂಡುಪಾಳ್ಯ-4' ಚಿತ್ರದಲ್ಲಿ ಸುಮನ್ ರಂಗನಾಥ್ ಜೊತೆಗೆ ತೆಲುಗು ನಟ ಸಂಜೀವ್, ವಿಠಲ್ ರಾಮದುರ್ಗ, ಮುಲೇಟ್ ಓಮು, ಸ್ನೇಹಾ, ರಿಚಾ ಶಾಸ್ತ್ರಿ, ಅರಣ್ ಬಚ್ಚನ್ ಅಭಿನಯಿಸುತ್ತಿದ್ದಾರೆ.

Have a great day!
Read more...

English Summary

Mumaith Khan to shake her leg for Kannada Film 'Dandupalya 4'.