ನಾಗತಿಹಳ್ಳಿ ಚಂದ್ರಶೇಖರ್ ಬಾಲ್ಯದ ಕನಸು ಈಗ ಈಡೇರಿತು


ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಬಾಲ್ಯದ ಕನಸು ಈಗ ಈಡೇರಿದೆ. ಆ ಕನಸನ್ನು ನನಸು ಮಾಡಿದ ಸಂತಸದಲ್ಲಿ ಇರುವ ಅವರು ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

ಸಣ್ಣ ಹುಡುಗನಾಗಿದ್ದಾಗ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಟ್ರಕ್ ಡ್ರೈವರ್ ಆಗಬೇಕು ಎಂಬ ಆಸೆ ಇತ್ತಂತೆ. ನಂತರ ಅದು ಪೈಲೆಟ್ ಆಗಬೇಕು ಎಂಬ ಕನಸಾಗಿ ಮಾರ್ಪಾಡಾಗಿತ್ತು. ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಫೇಲ್ ಆಗಿದ್ದ ಇವರು ನಂತರ ಮೇಷ್ಟ್ರು ಆದರು.

'ಸಲಿಂಗಕಾಮ'ದ ಬಗ್ಗೆ ನಟ ಚೇತನ್, ನಾಗತಿಹಳ್ಳಿ ಚಂದ್ರಶೇಖರ್ ಏನಂದ್ರು.?

ಮೇಷ್ಟಾದ ನಂತರ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಈಗ ತಮ್ಮ ಬಾಲ್ಯದ ಕನಸನ್ನು ಸಹಕಾರಗೊಳಿಸಿಕೊಂಡಿದ್ದಾರೆ. ''ಬ್ರಿಟಿಷ್ ಏರ್ ವೇಸ್ ವಿಮಾನ ಒಂಬತ್ತು ಗಂಟೆ ಪ್ರಯಾಣ ಮಾಡಿ ಲಂಡನ್ ನಿಂದ ಬೆಂಗಳೂರಿಗೆ ಬಂದಿದೆ. ಇಲ್ಲಿ ಬ್ರಿಟಿಷ್ ಪೈಲೆಟ್ ಜೊತೆಗೆ ನಾನು ಕುಳಿತಿದ್ದೇನೆ. ವಿಮಾನ ಹಾರಿಸೋಕ್ಕೆ ಬರುವುದಿಲ್ಲ. ಆದರೆ, ಪೈಲೆಟ್ ಜೊತೆಗೆ ಅವರ ಪಕ್ಕದಲ್ಲಿ ಕುಳಿತಿದ್ದೇನೆ. ಇದೆನ್ನೆಲ್ಲ ಹೇಗೆ ನಿರ್ವಹಿಸಬೇಕು ಎಂದು ತಿಳಿಯಲ್ಲ. ಈ ಅವಕಾಶ ನೀಡಿದಕ್ಕೆ ಬ್ರಿಟಿಷ್ ಏರ್ ವೇಸ್ ಗೆ ಧನ್ಯವಾದ'' ಎಂದು ಟ್ವೀಟ್ ಮಾಡಿದ್ದಾರೆ.

ಸದ್ಯ ನಾಗತಿಹಳ್ಳಿ ಚಂದ್ರಶೇಖರ್ ನಟಿ ಮಾನ್ವಿತಾ ಹರೀಶ್ ಹಾಗೂ ವಸಿಷ್ಟ ಅವರ ಜೊತೆಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Have a great day!
Read more...

English Summary

Kannada director Nagathihalli Chandrashekar childhood dream came true.