ಶಿಕ್ಷೆ ಆಗುತ್ತದೆಂದು ಗೊತ್ತಿದ್ದರೂ ದಿಟ್ಟ ಹೆಜ್ಜೆ ಇಟ್ಟ ಕನ್ನಡದ ನಾಲ್ಕು ನಿರ್ದೇಶಕರು!


Advertisement

ಹಿಂದೆ ಹೇರಿಕೆ ವಿರುದ್ಧ ದೊಡ್ಡ ಮಟ್ಟದ ಪ್ರತಿಭಟನೆ ರಾಜ್ಯದಲ್ಲಿ ಎದ್ದಿದೆ. ಚಿತ್ರರಂಗ ಎಂದಿನಂತೆ ಹಿಂದಿ ಹೇರಿಕೆ ವಿರುದ್ಧ ನಿಂತಿದೆ.

ಪುನೀತ್ ರಾಜ್‌ಕುಮಾರ್, ದರ್ಶನ್, ನಿಖಿಲ್ ಕುಮಾರಸ್ವಾಮಿ, ಚೇತನ್, ಧನಂಜಯ್, ಪ್ರಕಾಶ್ ರೈ ಸೇರಿದಂತೆ ಹಲವಾರು ನಾಯಕ ನಟರು, ನಾಯಕಿಯರು ಕನ್ನಡ ಭಾಷೆಯ ಪರವಾಗಿ ನಿಲವು ವ್ಯಕ್ತಪಡಿಸಿದ್ದಾರೆ. ಹಿಂದಿ ಹೇರಿಕೆಯನ್ನು ವಿರೋಧಿಸಿದ್ದಾರೆ. ಸಿನಿಮಾ ನಿರ್ದೇಶಕರೂ ಸಹ ಈ ಪ್ರತಿಭಟನೆಯಲ್ಲಿ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ.

'ಕನ್ನಡ ಕಲಿಕೆ ನಮ್ಮೆಲ್ಲರ ಬಯಕೆ'-ಪುನೀತ್ ರಾಜ್ ಕುಮಾರ್ ಟ್ವೀಟ್

ನಿರ್ದೇಶಕ ಲೂಸಿಯಾ ಪವನ್ ಈ ಮೊದಲು ಹಿಂದಿ ಹೇರಿಕೆ ವಿರುದ್ಧ ಮಾಡಲಾದ ಪ್ರತಿಭಟನೆಯ ಬಗ್ಗೆ ತಮ್ಮ ಲೈವ್ ವಿಡಿಯೋದಲ್ಲಿ ವಿಮರ್ಶೆ ಮಾಡಿದ್ದರು. ಅದು ಹಲವರಿಗೆ ಇಷ್ಟವಾಗಿರಲಿಲ್ಲ. ಆದರೆ ಈ ಬಾರಿ ಪವನ್ ತುಸು ಕ್ರಾಂತಿಕಾರಿ ಎನ್ನಬಹುದಾದ ಹೊಸ ಯೋಜನೆಯೊಂದಿಗೆ ಮುಂದೆ ಬಂದಿದ್ದಾರೆ.

ಸಿನಿಮಾ ಮಾಧ್ಯಮದ ಮೂಲಕವೇ ಪ್ರತಿಭಟನೆ

ತಮ್ಮ ಹೊಸ ಲೈವ್ ವಿಡಿಯೋದಲ್ಲಿ ಈ ಬಗ್ಗೆ ಮಾತನಾಡಿರುವ ಪವನ್, ಯಾವುದೇ ಸಿನಿಮಾಗಳು ತಯಾರಾದ ಬಳಿಕ ಅವನ್ನು ಸೆನ್ಸಾರ್‌ ಬೋರ್ಡ್‌ಗೆ ಸಲ್ಲಿಸಲಾಗುತ್ತದೆ. ಅವರು ನೀಡುವ ಸೆನ್ಸಾರ್ ಸರ್ಟಿಫಿಕೇಟ್ ಇಂಗ್ಲೀಷ್ ಹಾಗೂ ಹಿಂದಿಯಲ್ಲಿರುತ್ತವೆ. ಕನ್ನಡ ಸಿನಿಮಾಗಳ ಪ್ರಮಾಣ ಪತ್ರಕ್ಕೆ ಹಿಂದಿ ಏಕೆ ಇದು ಹಿಂದಿಯ ಅನವಶ್ಯಕ ಹೇರಿಕೆ ಎಂದಿದ್ದಾರೆ ಪವನ್. ಇದರ ವಿರುದ್ಧ ಸಿನಿಮಾ ಮಾಧ್ಯಮದ ಮೂಲಕವೇ ಪ್ರತಿಭಟಿಸಲು ನಿರ್ಧರಿಸಿದ್ದಾರೆ.

ಹಿಂದಿ ಹೇರಿಕೆ ವಿರುದ್ಧವೇ ಕಿರು ಚಿತ್ರ ನಿರ್ಮಾಣ

ಸೆನ್ಸಾರ್‌ ಬೋರ್ಡ್‌ನ ಈ ನೀತಿಯನ್ನು ಪ್ರತಿಭಟಿಸಲು ನಿರ್ಧರಿಸಿರುವ ಪವನ್, 'ಹಿಂದಿ ಹೇರಿಕೆ ವಿರೋಧ' ವಿಷಯವನ್ನು ಆಧಾರವಾಗಿಟ್ಟುಕೊಂಡು ಹತ್ತು-ಹದಿನೈದು ನಿಮಿಷದ ಸಿನಿಮಾವೊಂದನ್ನು ನಿರ್ದೇಶಿಸಿ ಅದನ್ನು ಸೆನ್ಸಾರ್‌ಗೆ ಸರ್ಟಿಫಿಕೇಟ್‌ಗಾಗಿ ಸಲ್ಲಿಸುತ್ತಾರಂತೆ.

'ಎಲ್ಲಾ ಭಾಷೆಗಳನ್ನು ಕಲಿಯುವುದು ಒಳಿತು. ಆದರೆ...' ದ್ವಿಭಾಷಾನೀತಿ ಬೆಂಬಲಿಸಿದ ಸಿಂಪಲ್ ಸುನಿ

Advertisement
ಸೆನ್ಸಾರ್ ಮಂಡಳಿ ಪತ್ರ ಪಡೆಯದೇ ಬಿಡುಗಡೆ

ಸೆನ್ಸಾರ್ ಮಂಡಳಿಯು ಮಾಮೂಲಿನಂತೆಯೇ ಆ ಸಿನಿಮಾಕ್ಕೆ ಹಿಂದಿ-ಇಂಗ್ಲಿಷ್ ಭಾಷೆಯ ಪ್ರಮಾಣ ಪತ್ರ ನೀಡುತ್ತದೆ. ಆಗ ಅದನ್ನು ವಿರೋಧಿಸಿ ಪ್ರಮಾಣ ಪತ್ರ ಪಡೆಯದೇ ಆ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುತ್ತಾರಂತೆ ಪವನ್. ಆ ಮೂಲಕ ಹಿಂದಿ ಹೇರಿಕೆಯ ವಿರುದ್ಧ ಪ್ರತಿಭಟನೆ ಸಲ್ಲಿಸಲಿದ್ದಾರೆ.v

ನಾಲ್ಕು ನಿರ್ದೇಶಕರು ಈಗಾಗಲೇ ಮುಂದೆಬಂದಿದ್ದಾರೆ

ಪವನ್ ಎಲ್ಲಾ ನಿರ್ದೇಶಕರು, ನಟರು, ತಂತ್ರಜ್ಞರನ್ನು ಈ ಪ್ರತಿಭಟನೆಗೆ ಆಹ್ವಾನಿಸಿದ್ದಾರೆ. ಈಗಾಗಲೇ ನಿರ್ದೇಶಕ ಚೈತನ್ಯ, ಪಿ.ಶೇಷಾದ್ರಿ ಹಾಗೂ ಸಿಂಪಲ್ ಸುನಿ ಅವರುಗಳು ಈಗಾಗಲೇ ತಾವುಗಳೂ ಸಹ ಕಿರುಚಿತ್ರ ನಿರ್ದೇಶಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಒಪ್ಪಿದ್ದಾರಂತೆ.

ದ್ವಿಭಾಷಾ ನೀತಿ ಅಭಿಯಾನಕ್ಕೆ ಚಿತ್ರರಂಗದಿಂದ ಬೆಂಬಲ ಕೊಟ್ಟಿದ್ದು ಮೂವರೇ, ಮಿಕ್ಕವರು ಎಲ್ಲಿ?

Recommended Video

ನನ್ನ ನಂಬಿ ಸರ್ಕಾರ ದೊಡ್ಡ ಜವಾಬ್ದಾರಿ ಕೊಟ್ಟಿದೆ | Shruthi Krishna | Filmibeat Kannada
ಮೂರು ವರ್ಷ ಜೈಲು ಅಥವಾ ಸರಿಸಮನಾದ ಶಿಕ್ಷೆ ಗ್ಯಾರೆಂಟಿ

ಒಂದುವೇಳೆ ಪವನ್ ಹಾಗೂ ಇತರ ನಿರ್ದೇಶಕರು ಪ್ರಮಾಣಪತ್ರ ಧಿಕ್ಕರಿಸಿ ಸಿನಿಮಾ ಬಿಡುಗಡೆ ಮಾಡಿದರೆ ಅದು ಅಪರಾಧವೆಂದು ಪರಿಗಣಿತವಾಗುತ್ತದೆ. ಭಾರತೀಯ ಸಿನಿಮಾಟೊಗ್ರಾಫರ್ ಕಾಯ್ದೆ ಪ್ರಕಾರ ಪ್ರಮಾಣಪತ್ರವಿಲ್ಲದೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವಂತಿಲ್ಲ. ಇದಕ್ಕೆ ಮೂರು ವರ್ಷದ ಜೈಲು ಶಿಕ್ಷೆ ಆಗಬಹುದಾಗಿದೆ. ಆದರೂ ಈ ನಿರ್ದೇಶಕರು ಪ್ರತಿಭಟನೆಗೆ ಮುಂದೆ ಬಂದಿದ್ದಾರೆ.

ಹಿಂದಿ ಹೇರಿಕೆ ವಿರುದ್ಧ ದನಿಗೆ ನಿಖಿಲ್ ಕುಮಾರಸ್ವಾಮಿ ಬೆಂಬಲ

Read more...

English Summary

Lucia director Pawan calls for protest against censor board for its Hindi imposition through median of movie.