ರಜನಿಯ 2.0 ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!


ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ '2.0' ಚಿತ್ರ ನವೆಂಬರ್ 29 ರಂದು ನಿಮ್ಮೆಲ್ಲರ ಮುಂದೆ ಬರಲಿದೆ. ನಾಳೆ (ಸೆಪ್ಟೆಂಬರ್ 13) '2.0' ಚಿತ್ರದ ಟೀಸರ್ ಬಿಡುಗಡೆ ಆಗಲಿದೆ.

ಗಣೇಶ ಹಬ್ಬದ ಶುಭ ಸಂದರ್ಭದಂದು '2.0' ಚಿತ್ರದ ಟೀಸರ್ ರಿಲೀಸ್ ಆಗಲಿದೆ. ಶಂಕರ್ ನಿರ್ದೇಶನದ ಈ ಚಿತ್ರ ಅದ್ಧೂರಿಯಾಗಿ ನಿರ್ಮಾಣ ಆಗಿದ್ದು, 3 ಸಾವಿರಕ್ಕೂ ಅಧಿಕ ತಂತ್ರಜ್ಞರು '2.0'ಗಾಗಿ ಕೆಲಸ ಮಾಡಿದ್ದಾರೆ.

ಹೇಳಿ ಕೇಳಿ '2.0' ಸೈನ್ಸ್ ಫಿಕ್ಷನ್ ಸಿನಿಮಾ. ರೋಬೋ ಕುರಿತ ಚಿತ್ರ ಇದಾಗಿರುವ ಕಾರಣ, ಸಿನಿಮಾದಲ್ಲಿ ಗ್ರಾಫಿಕ್ಸ್ ಹೇರಳವಾಗಿರಲಿದೆ. ವಿಷ್ಯುವಲ್ ಎಫೆಕ್ಟ್ಸ್ ಗಾಗಿಯೇ ಚಿತ್ರತಂಡ 75 ಮಿಲಿಯನ್ ಡಾಲರ್ (543 ಕೋಟಿ ರೂಪಾಯಿ) ಖರ್ಚು ಮಾಡಿದೆ.

ಕೊನೆಗೂ ರಜನಿಯ '2.0' ಚಿತ್ರದ ರಿಲೀಸ್ ದಿನಾಂಕ ಪಕ್ಕಾ ಆಯ್ತು

ಗ್ರಾಫಿಕ್ಸ್ ಗಾಗಿ ಇಷ್ಟೊಂದು ದುಡ್ಡು ಸುರಿದಿರುವ ಭಾರತದ ಮೊದಲ ಸಿನಿಮಾ '2.0'. ವಿಷ್ಯುವಲ್ ಎಫೆಕ್ಟ್ಸ್ ಕೆಲಸಕ್ಕಾಗಿಯೇ ಚಿತ್ರದ ಬಿಡುಗಡೆ ಕೊಂಚ ತಡವಾಗಿದೆ. ವರದಿಗಳ ಪ್ರಕಾರ, '2.0' ಚಿತ್ರದ ಮೇಕಿಂಗ್ ಯಾವುದೇ ಹಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲ. ಪ್ರತಿಯೊಂದು ದೃಶ್ಯವೂ ಮೈನವಿರೇಳಿಸುವ ಹಾಗೆ ಶಂಕರ್ '2.0' ಚಿತ್ರವನ್ನ ತಯಾರು ಮಾಡಿದ್ದಾರೆ.

ಸೆಪ್ಟೆಂಬರ್ 13ಕ್ಕೆ ರಜನಿ ಅಭಿನಯದ '2.0' ಟೀಸರ್ ನಿಮ್ಮ ಮುಂದೆ.!

ರಜನಿಕಾಂತ್, ಶಂಕರ್ ಹಾಗೂ ಎ.ಆರ್.ರೆಹಮಾನ್... ಈ ಮೂರು ಅದ್ಭುತಗಳು ಒಂದಾಗಿರುವ ಸಿನಿಮಾ '2.0'. ಜೊತೆಗೆ ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ಕೂಡ ಪ್ರಮುಖ ತಾರಾಗಣದಲ್ಲಿ ಇದ್ದಾರೆ. ಹೀಗಾಗಿ, '2.0' ಬಗ್ಗೆ ನಿರೀಕ್ಷೆ ಬೆಟ್ಟದಷ್ಟಿದೆ.

Have a great day!
Read more...

English Summary

Rs 543 crore spent on Super Star Rajinikanth and Akshay Kumar starrer '2 point O' VFX.