ಕ್ರಿಕೆಟ್ ದೇವರನ್ನು ಬಿಡಲಿಲ್ಲ ಶ್ರೀರೆಡ್ಡಿ: ರೊಚ್ಚಿಗೆದ್ದ ಸಚಿನ್ ಅಭಿಮಾನಿಗಳು


'ಕಾಸ್ಟಿಂಗ್ ಕೌಚ್' ಬಗ್ಗೆ ಕಾಮೆಂಟ್ ಮಾಡುತ್ತಾ, ಒಬ್ಬೊಬ್ಬರೇ ಸ್ಟಾ ರ್ ನಟರನ್ನ ಟಾರ್ಗೆಟ್ ಮಾಡಿದ್ದ ನಟಿ ಶ್ರೀರೆಡ್ಡಿ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಕೀಳಾಗಿ ಹೇಳಿಕೆ ನೀಡುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನಕ್ಕೆ ಕಾರಣವಾಗಿದ್ದಾರೆ.

ಈ ಹಿಂದೆ ತೆಲುಗು ನಟ ನಾನಿ, ರಾಘವ ಲಾರೆನ್ಸ್ , ಹಿರಿಯ ನಟ ಚಂದ್ರಶೇಖರ್, ಎಆರ್ ಮುರುಗದಾಸ್ ಸೇರಿದಂತೆ ಖ್ಯಾತ ನಿರ್ಮಾಪಕ ಹಾಗೂ ನಟರ ಬಗ್ಗೆ ಗಂಭೀರ ಆರೋಪ ಮಾಡಿ ಸುದ್ದಿಯಾಗಿದ್ದರು.

'ಕ್ರಿಕೆಟ್ ದೇವರು' ಸಚಿನ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿ ಟ್ರೋಲ್ಡ್

ಈಗ ಸಚಿನ್ ತೆಂಡೂಲ್ಕರ್ ಅವರು ಹುಡುಗಿಯೊಬ್ಬಳ ಜೊತೆ ರೋಮ್ಯಾನ್ಸ್ ಮಾಡಿದ್ದರು. ಅದಕ್ಕೆ ವ್ಯಕ್ತಿಯೊಬ್ಬ ಮಧ್ಯವರ್ತಿಯಾಗಿದ್ದ ಎಂದು ಬಾಂಬ್ ಸಿಡಿಸಿದ್ದಾರೆ. ಈ ಹೇಳಿಕೆಯನ್ನ ಖಂಡಿಸಿದ ಸಚಿನ್ ಅಭಿಮಾನಿಗಳು ಶ್ರೀರೆಡ್ಡಿ ವಿರುದ್ಧ ಸಮರ ಸಾರುತ್ತಿದ್ದಾರೆ. ಟ್ವಿಟ್ಟರ್, ಫೇಸ್ಬುಕ್ ನಲ್ಲಿ ಹಿಗ್ಗಾಮುಗ್ಗಾ ಕ್ಲಾಸ್ ತೆಗೆಡುಕೊಂಡಿದ್ದಾರೆ. ಮುಂದೆ ಓದಿ....

ಸಚಿನ್ ಬಗ್ಗೆ ಶ್ರೀರೆಡ್ಡಿ ಹೇಳಿರುವುದೇನು.?

''ರೋಮ್ಯಾಂಟಿಕ್ ಕ್ರಿಕೆಟರ್ ಎಂದೇ ಗುರುತಿಸಿಕೊಂಡಿರುವ ಸಚಿನ್ ತೆಂಡೂಲ್ಕರ್ ಅವರು, ಹೈದರಾಬಾದ್ ಗೆ ಬಂದಿದ್ದಾಗ ಅವರ ಜೊತೆ ಚಾರ್ಮಿಂಗ್ ಹುಡುಗಿ ರೋಮ್ಯಾನ್ಸ್ ಮಾಡಿದ್ದರು. ಚಾಮುಂಡೇಶ್ವರ್ ಸ್ವಾಮಿ ಇವರಿಗೆ ಮಧ್ಯವರ್ತಿಯಾಗಿದ್ದರು. ಗ್ರೇಟ್ ವ್ಯಕ್ತಿಗಳು ಅದ್ಭುತವಾಗಿ ಆಟವಾಡ್ತಾರೆ, ಅಂದ್ರೆ ರೋಮ್ಯಾನ್ಸ್ ಚೆನ್ನಾಗಿ ಮಾಡ್ತಾರೆ'' ಎಂದು ವ್ಯಂಗ್ಯ ಮಾಡಿದ್ದಾರೆ'' ಎಂದು ಬರೆದುಕೊಂಡಿದ್ದಾರೆ.

ಎ.ಆರ್ ಮುರುಗದಾಸ್ ವಿರುದ್ಧ ಬಾಂಬ್ ಸಿಡಿಸಿದ ಶ್ರೀರೆಡ್ಡಿ

ಶ್ರೀರೆಡ್ಡಿ ಮುಖಕ್ಕೆ ಮಂಗಳಾರತಿ

ಸಚಿನ್ ಅವರ ಬಗ್ಗೆ ಈ ರೀತಿ ಕಾಮೆಂಟ್ ಮಾಡಿದ ಶ್ರೀರೆಡ್ಡಿ ಕ್ರಿಕೆಟ್ ದೇವರ ಅಭಿಮಾನಿಗಳು ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. 'ನಿನ್ನ ಪಬ್ಲಿಸಿಟಿಗೋಸ್ಕರ ಸಚಿನ್ ಅಂತಹ ದಿಗ್ಗಜನ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಸರಿಯಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇಷ್ಟು ದಿನ ನೀನು ಆರೋಪ ಮಾಡಿದ್ದಾಗ ಅದರಲ್ಲಿ ಏನೋ ವಿಷ್ಯವಿದೆ ಎಂದು ಕೊಂಡಿದ್ದೆ. ಆದ್ರೆ, ಇಂದು ನೀನು ಬರಿ ಸುಳ್ಳು ಎಂದು ಗೊತ್ತಾಗಿದೆ' ಎಂದು ಮುಖಕ್ಕೆ ಮಂಗಳಾರತಿ ಎತ್ತಿದ್ದಾರೆ.

ಅಲ್ಲು ಅರ್ಜುನ್ ಅಣ್ಣನ 'ಸ್ವಿಮ್ಮಿಂಗ್ ಪೂಲ್' ರಹಸ್ಯ ಬಿಚ್ಚಿಟ್ಟ ಶ್ರೀರೆಡ್ಡಿ

ಸಚಿನ್ ಬಗ್ಗೆ ಮಾತನಾಡಲು ನಾಚಿಕೆಯಾಗಬೇಕು

'ನೀನು ಯಾರ ಬಗ್ಗೆ ಬೇಕಾದರೂ ಮಾತಾಡು. ಅದು ನಿನ್ನ ಹಕ್ಕು. ಆದ್ರೆ, ನಮ್ಮ ಸಚಿನ್ ಬಗ್ಗೆ ಮಾತನಾಡುವ ಹಕ್ಕಿಲ್ಲ ನಿನಗೆ. ಅವರು ನಮ್ಮ ಹೃದಯದಲ್ಲಿದ್ದಾರೆ. ಅವರ ಬಗ್ಗೆ ನಿನಗೆ ಗೊತ್ತಿಲ್ಲ. ನಿಮ್ಮ ರಾಜ್ಯದಲ್ಲೂ ಅವರೊಂದು ಗ್ರಾಮವನ್ನ ದತ್ತು ಪಡೆದಿದ್ದಾರೆ. ಹೋಗಿ ಆ ಊರನ್ನ ನೋಡಿ. ಸಚಿನ್ ಅವರ ಬಗ್ಗೆ ಮಾತನಾಡಲು ನಿಮಗೆ ನಾಚಿಕೆಯಾಗಬೇಕು. ನೀವು ನಿಜವಾದ ಭಾರತೀಯರಾಗಿದ್ದರೇ ಸಚಿನ್ ಬಗ್ಗೆ ಹೀಗೆ ಮಾತನಾಡುತ್ತಿರಲಿಲ್ಲ'' ಎಂದು ಬೈಯುತ್ತಿದ್ದಾರೆ.

ಬಹುಭಾಷಾ ನಟಿ ಖುಷ್ಬೂ ಪತಿ ಸುಂದರ್ ವಿರುದ್ಧ ಶ್ರೀರೆಡ್ಡಿ ಫೈರ್

ಇಂತವರನ್ನ ಪ್ರೋತ್ಸಾಹಿಸಬೇಡಿ

'ಸಚಿನ್ ಅವರು 18 ವರ್ಷವಿದ್ದಾಗಲೇ ಅವರ ಹಿಂದೆ ಎಷ್ಟೋ ಹುಡುಗಿಯರು ಬಿದ್ದಿದ್ದರು. ಅವರು ಮನಸ್ಸು ಮಾಡಿದ್ರೆ ಅಂದೇ ಬೇರೆ ಜೀವನ ಮಾಡಬಹುದಿತ್ತು. ಆದ್ರೆ, ಅವರೊಬ್ಬ ಜಂಟಲ್ ಮ್ಯಾನ್. ಇಂತವ ಕ್ರೂರ ಮನಸ್ಸಿನ ವ್ಯಕ್ತಿಗಳನ್ನ ಯಾರೂ ಪ್ರೋತ್ಸಾಹಿಸಬೇಡಿ'' ಎಂದು ಮನವಿ ಮಾಡುತ್ತಿದ್ದಾರೆ.

ತಮಿಳು 'ಸ್ಟಾರ್' ನಟನ ಮೇಲೆ ಶ್ರೀರೆಡ್ಡಿ ಎನ್ ಕೌಂಟರ್.!

ದೂರು ನೀಡಲು ನಿರ್ಧಾರ

'ಸಚಿನ್ ತೆಂಡೂಲ್ಕರ್ ಅವರ ಬಗ್ಗೆ ಶ್ರೀರೆಡ್ಡಿ ನೀಡಿರುವ ಈ ಹೇಳಿಕೆಯನ್ನ ಖಂಡಿಸಿ, ವ್ಯಕ್ತಿಯೊಬ್ಬ ಮುಂಬೈನಲ್ಲಿ ದೂರು ನೀಡಲು ನಿರ್ಧರಿಸಿರುವುದಾಗಿ ಹೇಳಿದ್ದಾನೆ. ಯಾವಾಗಲೂ ಪ್ರಚಾರಕ್ಕಾಗಿ ಹೀಗೆ ಮಾಡ್ತಾರೆ. ಈ ಸಲ ಈಕೆಗೆ ಬುದ್ದಿಕಲಿಸಬೇಕಾಗಿದೆ'' ಎಂದಿದ್ದಾರೆ.

ಶ್ರೀರೆಡ್ಡಿ-ನಾನಿ ವಿವಾದಕ್ಕೆ ನಟ ವಿಶಾಲ್ ಎಂಟ್ರಿ: ನಟಿಯ ವಿರುದ್ಧ ಬೇಸರ

Have a great day!
Read more...

English Summary

Actress Sri Reddy is back in the news with another sensation that cricketer Sachin Tendulkar allegedly had romance with Charmi'ng girl in Hyderabad. But she is facing the wrath of his fans, who call it a cheap publicity stunt.