ಕೋವಿಡ್‌ಗೆ ಸುನೇತ್ರ ಪಂಡಿತ್ ಸಹೋದರಿ ಬಲಿ: ಬಿಬಿಎಂಪಿಗೆ ತಿವಿದ ನಟಿ


ನಟಿ ಸುನೇತ್ರ ಪಂಡಿತ್ ಅವರ ಅಕ್ಕ ಇಂದು ಕೊರೊನಾಕ್ಕೆ ಬಲಿಯಾಗಿದ್ದಾರೆ. ಒಂದು ವಾರಕ್ಕೆ ಮುನ್ನ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಈ ಬಗ್ಗೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಸುನೇತ್ರ, ಕೆಟ್ಟ ವ್ಯವಸ್ಥೆಯಿಂದಾಗಿ ನನ್ನ ಅಕ್ಕ ಸತ್ತಿದ್ದಾಳೆ. ಬಿಬಿಎಂಪಿಯವರು ಕೋವಿಡ್ ರೋಗಿಗಳಿಗೆ ಆಸ್ಪತ್ರೆಗಳನ್ನು ಅಲಾಟ್‌ ಮಾಡುವಾಗ ಅಲ್ಲಿ ಐಸಿಯು ಇದೆಯೇ ಇಲ್ಲವೆ ಎಂಬುದನ್ನು ಖಚಿತಪಡಿಸಿಕೊಂಡು ಅಲಾಟ್ ಮಾಡಲಿ. ಐಸಿಯು ಇಲ್ಲದ ಆಸ್ಪತ್ರೆಗೆ ಅಕ್ಕನನ್ನು ಸೇರಿಸಿದ್ದರಿಂದ ಅಕ್ಕ ಸಾಯುವ ಸ್ಥಿತಿ ಬಂತು' ಎಂದು ಕಣ್ಣೀರು ಹಾಕಿದ್ದಾರೆ ಸುನೇತ್ರ.

'ವಾರದ ಹಿಂದೆ ಬಿಬಿಎಂಪಿ ಹೇಳಿದಂತೆ ಅಕ್ಕನನ್ನು ಮಹಾವೀರ್ ಆಸ್ಪತ್ರೆಗೆ ಸೇರಿಸಿದ್ದೆವು. ಅಕ್ಕನಿಗೆ ಡಯಾಬಿಟೀಸ್ ಇತ್ತು. ಯುಗಾದಿ ಹಬ್ಬದ ವರೆಗೆ ಅಕ್ಕ ಚೆನ್ನಾಗಿ ಇದ್ದಳು. ಆದರೆ ಅದೇ ದಿನ ಬೆಳಿಗ್ಗೆ ಕರೆ ಮಾಡಿ ಐಸಿಯುಗೆ ಶಿಫ್ಟ್ ಮಾಡಬೇಕು ಎಂದರು' ನಡೆದ ಘಟನೆ ವಿವರಿಸಿದರು ಸುನೇತ್ರ.

Advertisement
Advertisement

'ಆದರೆ ಮಹಾವೀರ್‌ ಆಸ್ಪತ್ರೆಯಲ್ಲಿ ಐಸಿಯು ಇರಲಿಲ್ಲ. ಅಲ್ಲಿ ಆಕ್ಸಿಜನ್ ಸಹ ಇರಲಿಲ್ಲ. ನಂತರ ನಾವೇ ಅಲ್ಲಿ ಇಲ್ಲಿ ಹುಡುಕಿ ಐಸಿಯು ಇರುವ ಆಸ್ಪತ್ರೆಗೆ ದಾಖಲಿಸಿದೆವು ಆದರೆ ಅಷ್ಟರಲ್ಲಿ ಸಮಯ ಮೀರಿ ಆಗಿತ್ತು' ಎಂದು ಕಣ್ಣೀರು ಹಾಕಿದರು.

'ಸರ್ಕಾರಕ್ಕೆ, ಬಿಬಿಎಂಪಿಗೆ, ಕೂಲಿ ಕಾರ್ಮಿಕನಿಗೆ, ಮಾಧ್ಯಮಗಳಿಗೆ, ಕಲಾವಿದರಿಗೆ ಎಲ್ಲರಿಗೂ ಒತ್ತಡ ಇದೆ ಆದರೆ ಅಧಿಕಾರ ಸ್ಥಾನದಲ್ಲಿರುವವರು ರೋಗಿಗಳ ಜೀವವನ್ನು ನಿರ್ಲಕ್ಷ್ಯ ಮಾಡುವುದು ಬೇಡ. ಮೊದಲ ದಿನ ಅಕ್ಕನನ್ನು ಐಸಿಯು ಇರುವ ಆಸ್ಪತ್ರೆಗೆ ಅಡ್ಮಿಟ್ ಮಾಡಿಸಲು ಸೂಚಿಸಿದ್ದರೆ. ಅಥವಾ ಐಸಿಯು ಇರುವ ಆಸ್ಪತ್ರೆಗಳನ್ನಷ್ಟೆ ಕೋವಿಡ್ ರೋಗಿಗಳಿಗೆ ಮೀಸಲಾಗಿಟ್ಟಿದ್ದಿದ್ದರೆ ಇಂದು ಅಕ್ಕ ಬದುಕಿರುತ್ತಿದ್ದಳು' ಎಂದಿದ್ದಾರೆ ಸುನೇತ್ರ ಪಂಡಿತ್.

ಚಿಕ್ಕಮಗಳೂರಿನ ಮುತ್ತೋಡಿ ಅರಣ್ಯದಲ್ಲಿ ದರ್ಶನ್ ಸಫಾರಿ | Filmibeat Kannada

ಸುನೇತ್ರ ಪತಿ ರಮೇಶ್ ಪಂಡಿತ್ ಮಾತನಾಡಿ ''ಯಾರೋ ಏನೋ ಸಹಾಯ ಮಾಡ್ತಾರೆ. ಏನೂ ಆಗೊಲ್ಲ ಬಿಡು''. ಇಂಥಹಾ ಬೇಜವಾಬ್ದಾರಿಯನ್ನು ಬಿಟ್ಟು ಎಲ್ಲರೂ ಎಚ್ಚರಿಕೆಯಿಂದಿರಿ, ನಿಲಕ್ಷ್ಯ ಬೇಡವೇ ಬೇಡ. ಕೆಲವರು ಕೊರೊನಾ ಇಲ್ಲ ಎನ್ನುತ್ತಿದ್ದಾರೆ ಅವರಿಗೆ ಕಪಾಳಕ್ಕೆ ಹೊಡೀರಿ. ಅದರ ನೋವು ಅನುಭವಿಸಿದವರಿಗಷ್ಟೆ ಗೊತ್ತು' ಎಂದು ಕೈಮುಗಿದು ಕಣ್ಣೀರು ಹಾಕಿದರು ರಮೇಶ್ ಪಂಡಿತ್.

Read more...

English Summary

Actress Sunetra Pandith's sister died of COVID 19 today. Actress blames BBMP.