ಒಂದೂವರೆ ವರ್ಷದ ಹಿಂದೆ ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಕೇಳಿಬಂದಿತ್ತು. ಶಿವಣ್ಣ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾರೆ ಎನ್ನುವ ಸುದ್ದಿ ಆಪ್ತರಿಗೆ ಅಭಿಮಾನಿಗಳಿಗೆ ಆತಂಕ ತಂದಿತ್ತು. ಆದರೆ ವಿದೇಶದಲ್ಲಿ ಚಿಕಿತ್ಸೆ ಪಡೆದು ಶಿವಣ್ಣ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು. ಈ ಹೋರಾಟದ ಜರ್ನಿಯನ್ನು 'ಸರ್ವೈವರ್' ಎಂಬ ಡಾಕ್ಯುಮೆಂಟರಿ ಮೂಲಕ ಕಟ್ಟಿಕೊಡಲಾಗುತ್ತಿದೆ.

Advertisement

ಶೀಘ್ರದಲ್ಲೇ 'ಸರ್ವೈವರ್' ಡಾಕ್ಯುಮೆಂಟರಿ ಬಿಡುಗಡೆ ಆಗಲಿದೆ. ಶಿವಣ್ಣನ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ ಡಾಕ್ಯುಮೆಂಟರಿ ಪ್ರೋಮೊ ಹೊರಬಂದಿದೆ. ಶಿವಣ್ಣ ವಿದೇಶದಲ್ಲಿ ಚಿಕಿತ್ಸೆ ಪಡೆದ ಒಂದಷ್ಟು ದೃಶ್ಯಗಳು ಅದರಲ್ಲಿದೆ. ಸುದೀಪ್, ನಾಗಾರ್ಜುನ್, ಕಮಲ್ ಹಾಸನ್ ಸೇರಿ ಸಾಕಷ್ಟು ಕಲಾವಿದರು ಶಿವಣ್ಣನ ಬಗ್ಗೆ ಈ ಡಾಕ್ಯುಮೆಂಟರಿಯಲ್ಲಿ ಮಾತನಾಡಿದ್ದಾರೆ. ಶಿವಣ್ಣನ ಧೈರ್ಯ, ಹೋರಾಟ ಮನೋಭಾವದ ಬಗ್ಗೆ ಹಂಚಿಕೊಂಡಿದ್ದಾರೆ. ಸೆಂಚುರಿ ಸ್ಟಾರ್ ಸ್ವತಃ ತಮ್ಮ ಕ್ಯಾನ್ಸರ್ ವಿರುದ್ಧ ಹೋರಾಟದ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ.

Advertisement

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಶಿವಣ್ಣನಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರ್ತಿದೆ. ಈ ಬಾರಿ ಅರ್ಥಪೂರ್ಣವಾಗಿ ಅಭಿಮಾನಿಗಳ ಜೊತೆ ಶಿವಣ್ಣ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಒಂದಷ್ಟು ಹೊಸ ಚಿತ್ರಗಳ ಅಪ್‌ಡೇಟ್ ಸಿಕ್ಕಿದೆ.