ಮನುಷ್ಯಕುಲದ ವ್ಯಾಕುಲಗಳನ್ನು ದೂರ ಮಾಡುವ ಶಕ್ತಿ ಸಂಗೀತಕ್ಕೆ ಇದೆ. ಅದರಲ್ಲಿಯೂ ಭಾರತದಲ್ಲಿ ಸಂಗೀತ ಪರಂಪರೆ ವಿಭಿನ್ನ. ವೈವಿಧ್ಯಮಯ ಸಂಗೀತ ಪ್ರಕಾರಗಳನ್ನು ಹೊಂದಿರುವ ಭಾರತದಲ್ಲಿ ಸಂಗೀತಕ್ಕೆ ಕುಣಿದು ಕುಪ್ಪಳಿಸುವ ಬಹುದೊಡ್ಡ ವರ್ಗವೇ ಇದೆ.

Advertisement

ಇಂತಹ ದೇಶದಲ್ಲಿ ಇಲ್ಲಿಯವರೆಗೆ ಹಲವಾರು ಗಾಯಕರು ಬಂದಿದ್ದಾರೆ. ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಜನಮಾನಸದಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಆ ಪೈಕಿ ಒಬ್ಬರಾಗಿದ್ದವರು ಎಸ್ ಜಾನಕಿ.

Advertisement

ಜಾನಕಿ ಅಮ್ಮ ಹಿನ್ನೆಲೆ

ಆಂಧ್ರಪ್ರದೇಶದ ಗುಂಟೂರು ಜಾನಕಮ್ಮನ ಜನ್ಮ ಸ್ಥಾನ. ಏಪ್ರಿಲ್ 23, 1938 ರಂದು ಜನಿಸಿದ ಎಸ್ ಜಾನಕಿ ನಾದಸ್ವರಂ ವಿದ್ವಾನ್ ಪೈದಿಸ್ವಾಮಿ ಅವರಿಂದ ಸಂಗೀತ ಕಲಿತರು.

ತಮ್ಮ 9ನೇ ವಯಸ್ಸಿನಲ್ಲೇ ವೇದಿಕೆ ಏರಿದರು. 1950ರ ದಶಕದ ಕೊನೆಯಲ್ಲಿ ಚಿತ್ರರಂಗಕ್ಕೆ ಬಂದ ಜಾನಕಿ ಆ ನಂತರ 20 ಭಾಷೆಗಳಲ್ಲಿ ತಮ್ಮ ಚಿನ್ನದ ಕಂಠ ಕುಣಿಸಿದ್ದರು.

ಎಸ್ ಜಾನಕಿ ಅವರ ದೇಹಕ್ಕೆ ವಯಸ್ಸಾಗಿತ್ತು ಅಷ್ಟೇ. ಆದರೆ ಅವರ ಕಂಠ ಮಾತ್ರ 20ರ ಹರೆಯದ ಗಾಯಕಿಯರಂತೆ ಇತ್ತು. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂನ ಸಾವಿರಾರು ಹಾಡುಗಳನ್ನು ಹಾಡಿದ್ದರು ಎಸ್ ಜಾನಕಿ.