ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಹೊಸ ಟೀಸರ್ ಧೂಳೆಬ್ಬಿಸಿದೆ. ಚಿತ್ರದ ಮಹಿಳಾ ಪಾತ್ರಗಳನ್ನು ಪರಿಚಯಿಸಿ ಸಣ್ಣ ಝಲಕ್ ರಿವೀಲ್ ಮಾಡಿದ್ದಾರೆ. ನಯನತಾರಾ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಹಾಗೂ ಕಿಯಾರಾ ಅದ್ವಾನಿ ಒಬ್ಬರಿಗಿಂತ ಒಬ್ಬರ ಸಿಕ್ಕಾಪಟ್ಟೆ ಪವರ್‌ಫುಲ್ ಪಾತ್ರಗಳಲ್ಲಿ ಅಬ್ಬರಿಸಿದ್ದಾರೆ. ಟೀಸರ್ ನೋಡಿದ್ಮೇಲೆ ಅಭಿಮಾನಿಗಳಿಗೆ ಹೊಸ ಆತಂಕ ಶುರುವಾಗಿದೆ.

Advertisement

'ಟಾಕ್ಸಿಕ್' ಟೀಸರ್ ಆರಂಭದಲ್ಲೇ ಮಕ್ಕಳು ಇದನ್ನು ನೋಡಬೇಡಿ. ಮಕ್ಕಳು ದೂರ ಇರುವಂತೆ ಪೋಷಕರು ನೋಡ್ಕೊಳ್ಳಿ. ವಯಸ್ಸಾದವರು ನಿಮ್ಮ ಮಕ್ಕಳನ್ನು ಬಗ್ಗೆ ಗಮನ ಇರಲಿ. ನೀವು ನೋಡುವುದು ನಿಮ್ಮ ರಿಸ್ಕ್ ಎಂದು ಹೇಳಿ ಟೀಸರ್ ಆರಂಭಿಸಲಾಗಿದೆ. ಒಂದೊಂದಾಗಿ ಮಹಿಳಾ ಪಾತ್ರಗಳನ್ನು ಪರಿಚಯಿಸುತ್ತಾ ಹೋಗಿದ್ದಾರೆ. ಆದರೆ ಹಿಂದಿನ ಮೂರು ಟೀಸರ್‌ಗಳಲ್ಲಿ ಇದ್ದಂತೆ ಇದರಲ್ಲಿ ಕೂಡ ಹಸಿಬಿಸಿ ದೃಶ್ಯಗಳು ಹೆಚ್ಚಾಗಿದೆ. ಇದರಿಂದ ಸೆನ್ಸಾರ್ ಸಮಸ್ಯೆ ಎದುರಾಗಬಹುದಾ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ.

Advertisement

ಹಾಲಿವುಡ್ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಯಶ್ ಮತ್ತವರ ತಂಡ 'ಟಾಕ್ಸಿಕ್' ಸಿನಿಮಾ ಕಟ್ಟಿಕೊಡುತ್ತಿದ್ದಾರೆ. ಚಿತ್ರದ ಸ್ಯಾಂಪಲ್‌ಗಳಲ್ಲಿ ಮಾದಕ ದೃಶ್ಯಗಳು ಕಣ್ಣಿಗೆ ರಾಚುತ್ತಿವೆ. ಯಾಕೋ ಅತಿ ಆಯ್ತಲ್ಲ ಎನ್ನುವವರಿಗೆ ಯಶ್ ಅಭಿಮಾನಿಗಳು ತಮ್ಮದೇ ಶೈಲಿಯಲ್ಲಿ ಉತ್ತರ ಕೊಡುತ್ತಿದ್ದಾರೆ. ನೀವು ನೋಡಬೇಡಿ, ಇದು ದೊಡ್ಡವರಿಗೆ ಮಾಡಿದ ಸಿನಿಮಾ. ಹಾಲಿವುಡ್ ಪ್ರೇಕ್ಷಕರಿಗೆ ಮಾಡಿರುವ ಸಿನಿಮಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಎರಡು ವರ್ಷನ್‌ಗಳಲ್ಲಿ 'ಟಾಕ್ಸಿಕ್' ಸಿನಿಮಾ ತೆರೆಗೆ ಬರುತ್ತದೆ ಎನ್ನಲಾಗ್ತಿದೆ. ಇಂಗ್ಲೀಷ್ ವರ್ಷನ್‌ನಲ್ಲಿ ಹೆಚ್ಚು ಹಸಿಬಿಸಿ ದೃಶ್ಯಗಳು ಇರಲಿವೆ. ಭಾರತದಲ್ಲಿ ಬಿಡುಗಡೆ ಆಗುವ ಕನ್ನಡ ಸೇರಿದಂತೆ ಇನ್ನುಳಿದ ಭಾಷೆಗಳಲ್ಲಿ ಒಂದಷ್ಟು ದೃಶ್ಯಗಳಿಗೆ ಕತ್ತರಿ ಬೀಳುತ್ತದೆ ಎನ್ನುವ ಲೆಕ್ಕಾಚಾರ ಶುರುವಾಗಿದೆ. ಇದೆಲ್ಲದರ ನಡುವೆ ಸೆನ್ಸಾರ್ ಮಂಡಳಿಯಿಂದ ಚಿತ್ರಕ್ಕೆ 'ಎ' ಸರ್ಟಿಫಿಕೇಟ್ ಪಕ್ಕಾ ಎನ್ನುವ ಮಾತುಗಳು ಕೇಳಿಬರ್ತಿದೆ. ಸೆನ್ಸಾರ್ ಸರ್ಟಿಫಿಕೇಟ್ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲ್ಲ. ಸಿನಿಮಾ ಚೆನ್ನಾಗಿದ್ದರೆ ಜನ ನೋಡ್ತಾರೆ. ನೋಡುವವರು ನೋಡ್ತಾರೆ ಬಿಡಿ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿದೆ.

Advertisement

ಯಶ್ ಹಾಗೂ ಕಿಯಾರಾ ನಡುವೆ ಮಾತ್ರವಲ್ಲ ಯಶ್ ಹಾಗೂ ತಾರಾ ಸುತಾರಿಯಾ ನಡುವೆ ಕೂಡ ಸಾಕಷ್ಟು ಬಿಂದಾಸ್ ದೃಶ್ಯಗಳಿವೆ. ಟೀಸರ್‌ನಲ್ಲಿ ತಾರಾ ಝಲಕ್ ನೋಡಿ ಸಿನಿರಸಿಕರು ಫಿದಾ ಆಗಿದ್ದಾರೆ. ಯಶ್ ಹಾಗೂ ತಾರಾ ಕೆಮೆಸ್ಟ್ರಿ ಹೈಲೆಟ್ ಆಗುತ್ತದೆ ಎನ್ನುವವರು ಇದ್ದಾರೆ. ಕಿಯಾರಾ ಕೂಡ ಹಿಂದೆಂದೂ ಕಾಣಿಸಿಕೊಳ್ಳದ್ದಷ್ಟು ಮಾದಕವಾಗಿ ಚಿತ್ರದಲ್ಲಿ ದರ್ಶನ ಕೊಟ್ಟಿದ್ದಾರೆ. ಚಿತ್ರದಲ್ಲಿ ಒಂದೆರಡು ಹಸಿಬಿಸಿ ದೃಶ್ಯ ಇರುತ್ತದೆ ಎಂದು ಕೆಲವರು ಹೇಳ್ತಾ ಬರ್ತಿದ್ದಾರೆ. ಆದರೆ ಹೊಸ ಟೀಸರ್‌ನಲ್ಲಿ ಆ ಡೋಸ್ ಹೆಚ್ಚಿಸಿರುವುದು ಗೊತ್ತಾಗುತ್ತಿದೆ.

'ಟಾಕ್ಸಿಕ್' ಚಿತ್ರದ ಹಿಂದಿನ ಟೀಸರ್‌ಗಳಲ್ಲಿ ಹಸಿಬಿಸಿ ದೃಶ್ಯಗಳನ್ನು ತೋರಿಸಿದ್ರು, ಕೊನೆ ಪಕ್ಷ ಈ ಟೀಸರ್‌ನಲ್ಲಿ ಬೇರೆ ಏನಾದ್ರು ಕಂಟೆಂಟ್ ಇದ್ದಿದ್ರೆ ಚೆನ್ನಾಗಿರ್ತಿತ್ತು. ಮತ್ತೆ ಮತ್ತೆ ಅದನ್ನೇ ತೋರಿಸಿ ಪ್ರೇಕ್ಷಕರನ್ನು ಸೆಳೆಯುವ ಅವಶ್ಯಕತೆ ಇರಲಿಲ್ಲ. ಆಕ್ಷನ್, ಹಸಿಬಿಸಿ ದೃಶ್ಯ ಬಿಟ್ರೆ ಬೇರೆ ಏನೂ ಸಿನಿಮಾದಲ್ಲಿ ಇಲ್ವಾ ಎಂದು ಕೇಳುತ್ತಿದ್ದಾರೆ.

Advertisement

ಆಗಸ್ಟ್ 26ಕ್ಕೆ 'ಟಾಕ್ಸಿಕ್' ಸಿನಿಮಾ ತೆರೆಗೆ ಬರ್ತಿದೆ. ಕೆವಿಎನ್ ಪ್ರೊಡಕ್ಷನ್ಸ್ ಜೊತೆ ಸೇರಿ ಯಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಗೀತು ಮೋಹನ್ ದಾಸ್ ಜೊತೆಗೆ ಕಥೆ, ಚಿತ್ರಕಥೆ ತಿದ್ದಿದ್ದಾರೆ. ವಿಶ್ವದಾದ್ಯಂತ ಏಕಕಾಲಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಟ್ರೈಲರ್, ಸಾಂಗ್ಸ್ ರಿಲೀಸ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ಓವರ್‌ಸೀಸ್ ಡಿಸ್ಟ್ರಿಬ್ಯೂಟರ್ ಯಾರು ರನ್ನುವ ಕುತೂಹಲ ಮೂಡಿದೆ. ವಿದೇಶಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸಲಿದೆ.