Birbal Review : ಅದೇ ತರ..ಆದರೆ ಇದು ಅದಲ್ಲ..


ಒಂದು ಕೊಲೆಯ ಸುತ್ತ ನಡೆಯುವ ಕ್ರೈಮ್ ಥ್ರಿಲ್ಲರ್ ಸಿನಿಮಾಗಳು ಕನ್ನಡದಲ್ಲಿ ಹೊಸತೇನು ಅಲ್ಲ. ಆದರೂ, 'ಬೀರ್ ಬಲ್' ಸಿನಿಮಾ ನೋಡುವಾಗ ಹೊಸತು ಅನಿಸುತ್ತದೆ. ಸಿನಿಮಾದ ನಿರೂಪಣೆ ಹಾಗೂ ಮೇಕಿಂಗ್ ಸ್ಟೈಲ್ ಇಷ್ಟ ಆಗುತ್ತದೆ. ಕ್ಷಣ ಕ್ಷಣಕ್ಕೂ ಕುತೂಹಲ ಮೂಡಿಸುವ ಒಂದು ಪಕ್ಕಾ ಸಸ್ಪೆನ್ಸ್ ಸಿನಿಮಾವೇ 'ಬೀರ್ ಬಲ್'.

Advertisement

Rating:
3.5/5
Star Cast: ಶ್ರೀನಿ, ವಿನೀತ್, ರುಕ್ಮಿನಿ ವಸಂತ್
Director: ಶ್ರೀನಿ

ಒಂದು ಕೊಲೆ, ಒಬ್ಬ ಅಮಾಯಕ

ಸಿನಿಮಾ ಶುರು ಆಗುವುದು ಕೆಲ ಸಣ್ಣ ಪುಟ್ಟ ದೃಶ್ಯಗಳ ಮೂಲಕ. ಪ್ರೇಕ್ಷಕ ಸೀಟ್ ಮೇಲೆ ಕುಳಿತು ಸೆಟಲ್ ಆಗುವ ಹೊತ್ತಿಗೆನೇ ತೆರೆ ಮೇಲೆ ಒಂದು ಸಣ್ಣ ಅಪಘಾತ ನಡೆಯುತ್ತದೆ. ರಸ್ತೆಗೆ ಬಿದ್ದ ಹುಡುಗ ಮೇಲೆಳುವ ಹೊತ್ತಿಗೆ ಒಂದು ಕೊಲೆ ಆಗಿದ್ದನ್ನು ನೋಡುತ್ತಾನೆ. ಬಳಿಕ ಪೊಲೀಸರಿಗೆ ಪೋನ್ ಮಾಡುತ್ತಾನೆ. ಕಟ್ ಮಾಡಿದರೆ, ಪೊಲೀಸರು ಅದೇ ಹುಡುಗನ ಮೇಲೆ ಕೋಲೆ ಕೇಸ್ ಕಟ್ಟಿ ಜೈಲಿಗೆ ಹಾಕುತ್ತಾರೆ.

Advertisement
Advertisement
8 ವರ್ಷದ ಕೇಸ್ ಓಪನ್

ಆ ಅಮಾಯಕ ಹುಡುಗನಿಗೆ ಶಿಕ್ಷೆ ಆಗುತ್ತದೆ. ಆದರೆ, 8 ವರ್ಷದ ಬಳಿಕ ಕೇಸ್ ಓಪನ್ ಮಾಡಲಾಗುತ್ತದೆ. ಲಾಯರ್ ಮಹೇಶ್ ದಾಸ್ (ಶ್ರೀನಿ) ಆ ಹುಡುಗನನ್ನು ನಿರಪರಾಧಿ ಎಂದು ಸಾಬೀತು ಮಾಡಲು ಹೊರಡುತ್ತಾನೆ. ಹೀಗಿರುವಾಗ, ಹೇಗೆ ಆ ಹುಡುಗ ತಪ್ಪು ಮಾಡಿಲ್ಲ ಎಂದು ಮಹೇಶ್ ದಾಸ್ ನಿರೂಪಿಸುತ್ತಾನೆ. ಹಾಗಾದ್ರೆ, ನಿಜವಾಗಿಯೂ ಆ ಕೊಲೆ ಮಾಡಿದವರು ಯಾರು?, ಮಹೇಶ್ ದಾಸ್ ಯಾಕೆ ಈ ಕೇಸ್ ತೆಗೆದುಕೊಳ್ಳುತ್ತಾನೆ ಎನ್ನುವುದು ಚಿತ್ರದ ಜೀವಾಳವಾಗಿದೆ.

Advertisement
ಅದೇ ತರ.. ಆದರೆ ಅದಲ್ಲ..

ಒಂದು ಕೊಲೆಯ ಸುತ್ತ ನಡೆಯುವ ಕಥೆಗಳ ಅನೇಕ ಸಿನಿಮಾಗಳು ಈಗಾಗಲೇ ಅನೇಕ ಭಾಷೆಗಳಲ್ಲಿ ಬಂದಿವೆ. ಮೇಲ್ನೋಟಕ್ಕೆ 'ಬೀರ್ ಬಲ್' ಕೂಡ ಅದೇ ರೀತಿ ಎನಿಸಬಹುದು. ಆದರೆ, ಸಿನಿಮಾದ ಮೇಕಿಂಗ್ ಶೈಲಿ ಹಾಗೂ ನಿರೂಪಣೆ ಹೊಸತರ ಇದೆ. ಅದೇ ಕಾರಣಕ್ಕೆ ಸಿನಿಮಾ ನೋಡುಗರಿಗೆ ಹೊಸ ಅನುಭವ ನೀಡುತ್ತದೆ.

ನಟನೆ ಹೇಗಿದೆ?

ಲಾಯರ್ ಆಗಿರೋ ನಟ ಶ್ರೀನಿ ನಟನೆ ಆ ಪಾತ್ರಕ್ಕೆ ತಕ್ಕಂತೆ ಇದೆ. ಅವರು ಚೆನ್ನಾಗಿ ಕಾಣುವುದು ಮಾತ್ರವಲ್ಲದೆ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾದ ಕೇಂದ್ರ ಬಿಂದು ಆಗಿರುವ ವಿಷ್ಣು ಪಾತ್ರದಲ್ಲಿ ಕಾಣಿಸಿಕೊಂಡಿರುವ ವಿನೀತ್ ಗಮನ ಸೆಳೆಯುತ್ತಾರೆ. ಅವರ ಸರಳ ನಟನೆ ಪಾತ್ರದ ತೂಕ ಹೆಚ್ಚಿಸಿದೆ. ನಟಿ ರುಕ್ಮಿನಿ ವಸಂತ್ ಪರದೆಗೆ ಅಂದ ತುಂಬಿದ್ದಾರೆ. ಸುಜಯ್ ಶಾಸ್ತ್ರಿ ನಗಿಸುತ್ತಾರೆ. ಉಳಿದ ಪಾತ್ರಗಳ ನಟನೆ ಸೂಕ್ತವಾಗಿವೆ.

ಕೆಲವು ಗೊಂದಲಗಳು

ಸಿನಿಮಾದಲ್ಲಿ ಎಲ್ಲ ಸರಿ ಇದೆ ಎನ್ನುವುದು ಕಷ್ಟ. ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುವ ನಿರ್ದೇಶಕರು ಅಲ್ಲಲ್ಲಿ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುವಂತೆ ಮಾಡುತ್ತಾರೆ. ಮಹೇಶ್ ದಾಸ್ ಪಾತ್ರ ನೀಡುವ ದೊಡ್ಡ ತಿರುವಿನಲ್ಲಿಯೂ ಕೆಲ ಗೊಂದಲ ಬರುತ್ತದೆ. ಅದನೆಲ್ಲ ಮರೆತು ಸಿನಿಮಾ ನೋಡಿದರೆ ಇದೊಂದು ಒಳ್ಳೆಯ ಸಸ್ಪೆನ್ಸ್ ಚಿತ್ರ.

ಹಿತ ಅನಿಸದ ಸಂಗೀತ

ಸಿನಿಮಾದ ಸಂಗೀತ ಅಷ್ಟು ಹಿತ ಅನಿಸುವುದಿಲ್ಲ. ಹಾಡು ಇಷ್ಟ ಆಗುವಂತೆ ಇಲ್ಲ. ಆದರೆ, ಹಿನ್ನಲೆ ಸಂಗೀತ ಕೆಲವು ದೃಶ್ಯಗಳ ತೀವ್ರತೆ ಹೆಚ್ಚು ಮಾಡಲು ಸಹಾಯ ಮಾಡಿದೆ. ಜೊತೆಗೆ ಕೆಲವು ಕಡೆ ಸಿನಿಮಾ ಕೊಂಚ ಬೋರ್ ಎನಿಸುತ್ತದೆ. ಟ್ವಿಸ್ಟ್ ಗಳು ಜಾಸ್ತಿಯಾದ ಕಾರಣ ಸಿನಿಮಾದ ಅವಧಿ ಕೂಡ ಹೆಚ್ಚಾಗಿರಬಹುದು.

ನೋಡಬಹುದು, ಥ್ರಿಲ್ ಆಗಬಹುದು

'ಬೀರ್ ಬಲ್' ಸಿನಿಮಾವನ್ನು ಆರಾಮಾಗಿ ನೋಡಬಹುದು. ಸಿನಿಮಾಗೆ ಬಂದ ಪ್ರೇಕ್ಷಕರಿಗೆ ಕಥೆ ಥ್ರಿಲ್ ನೀಡುತ್ತದೆ. ಫ್ಯಾಮಿಲಿಗಳಿಗೆ ಕೂಡ ಸಿನಿಮಾ ಯಾವುದೇ ಮುಚುಗರ ನೀಡುವುದಿಲ್ಲ. ಸಸ್ಪೆನ್ಸ್, ಕ್ರೈಮ್ ಥ್ರಿಲ್ಲರ್ ರೀತಿಯ ಸಿನಿಮಾಗಳನ್ನು ಇಷ್ಟ ಪಡುವವರು ಮಿಸ್ ಮಾಡದೆ ಈ ಚಿತ್ರ ನೋಡಿ.

English Summary

Birbal kannada movie review. Birbal is a good suspense thriller movie.