ವಿನಯ್ ರಾಜ್‌ಕುಮಾರ್ ನಟನೆಯ 'ಗ್ರಾಮಾಯಣ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರಿದೆ. ಮೊದಲ ದಿನಕ್ಕಿಂತ 2 ಹಾಗೂ 3ನೇ ದಿನ ಸಿನಿಮಾ ಗಳಿಕೆ ಚೆನ್ನಾಗಿದೆ. ದೊಡ್ಡಮಟ್ಟದಲ್ಲಿ ಓಪನಿಂಗ್ ಸಿಗದೇ ಇದ್ರೂ ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಮೌತ್ ಟಾಕ್ ಚೆನ್ನಾಗಿದೆ. ಈಗಾಗಲೇ ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

Advertisement

ದೇವನೂರ್ ಚಂದ್ರು ನಿರ್ದೇಶನದ ಹಳ್ಳಿ ಸೊಗಡಿನ ಸಿನಿಮಾ ಇದು. ಮೇಘಾ ಶೆಟ್ಟಿ, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್, ಗೋಪಾಲ ದೇಶಪಾಂಡೆ, ಅಪರ್ಣ ವಸ್ತಾರೆ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಪೂರ್ಣ ಚಂದ್ರ ತೇಜಸ್ವಿ ಸಂಗೀತ ಚಿತ್ರಕ್ಕೆ ಪ್ಲಸ್ ಆಗಿದೆ. ವಿಮರ್ಶಕರಿಂದರೂ 'ಗ್ರಾಮಾಯಣ' ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬಂದಿದೆ.

Advertisement

'ಗ್ರಾಮಾಯಣ' ಚಿತ್ರಕ್ಕೆ ಕಾನೂನು ಸಮಸ್ಯೆ ಎದುರಾಗುವ ಸುಳಿವು ಸಿಕ್ಕಿದೆ. ಚಿತ್ರದ ಮೂಲ ನಿರ್ಮಾಪಕರಾದ ಎನ್‌. ಲಕ್ಷ್ಮಿನರಸಿಂಹ ಮೂರ್ತಿ ಮಕ್ಕಳು ಚಿತ್ರತಂಡದ ವಿರುದ್ಧ ಕಾನೂನು ಸಮರ ಸಾರಿದ್ದಾರೆ. ಇದೆಲ್ಲದರ ನಡುವೆ ಸಿನಿಮಾ 3ನೇ ದಿನ ಪ್ರದರ್ಶನ ಕಾಣುತ್ತಿದೆ. ಸಿನಿಮಾ ನೋಡಿದವರ ರಿವ್ಯೂ ಮುಂದೆ ಓದಿ.

ಸಿನಿಮಾ ನೋಡ್ಲೇಬೇಕು

'ಗ್ರಾಮಾಯಣ' ಹೃದಯ ಮುಟ್ಟುವ ಗ್ರಾಮೀಣ ಮನರಂಜನೆ ಸಿನಿಮಾ. ನೈಜ ಸಂಸ್ಕೃತಿ, ಸ್ಥಳೀಯ ಆಡುಭಾಷೆ ಮತ್ತು ಹಳ್ಳಿಯ ಹಿನ್ನೆಲೆಯನ್ನು ಚಿತ್ರದಲ್ಲಿ ಸುಂದರವಾಗಿ ಪ್ರಸ್ತುತಪಡಿಸಲಾಗಿದೆ. ವಿನಯ್ ರಾಜ್‌ಕುಮಾರ್ ತಮ್ಮ ವೃತ್ತಿ ಜೀವನದಲ್ಲಿ ಒಳ್ಳೆ ಪ್ರದರ್ಶನ ನೀಡಿರುವ ಸಿನಿಮಾ. ಇದಕ್ಕೆ ಉತ್ತಮ ಪೋಷಕ ಪಾತ್ರವರ್ಗ, ಭಾವಪೂರ್ಣ ಸಂಗೀತ ಮತ್ತು ಪರಿಣಾಮಕಾರಿ ಹಿನ್ನೆಲೆ ಸಂಗೀತದ ಬೆಂಬಲವಿದೆ. ಸಿನಿಮಾ ನೋಡಲೇಬೇಕು ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

Advertisement

ನಮ್ಮದೇ ಊರಿನ ಸಿನಿಮಾ

ಅಪ್ಪಟ ಹಳ್ಳಿ ಸೊಗಡಿನ ಸಿನಿಮಾ. ಸಿನಿಮಾ ನೋಡುವಾಗ ನಮ್ಮದೇ ಹಳ್ಳಿಯನ್ನು ದೊಡ್ಡ ಪರದೆಯ ಮೇಲೆ ನೋಡುವ ಅನುಭವವಾಯಿತು. ಅಲ್ಲಿನ ಸಂಸ್ಕೃತಿ, ಸ್ಥಳೀಯ ಆಡುಭಾಷೆ, ಹಾಡುಗಳು ಮತ್ತು ನಮ್ಮ ಗ್ರಾಮ ದೇವತೆ ಎಲ್ಲವನ್ನು ನಾನು ನಮ್ಮ ಊರಿನೊಂದಿಗೆ ಹೋಲಿಸಿಕೊಳ್ಳಬಹುದು ಎಂದು ಜೀವನ್ ರಾಜ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಮಿಸ್ ಮಾಡ್ಲೇಬೇಡಿ

ಈಗಷ್ಟೇ ಸಿನಿಮಾ ನೋಡಿದೆ. ಖಂಡಿತವಾಗಿಯೂ ನೋಡಲೇಬೇಕಾದ ಚಿತ್ರ. ರೆಗ್ಯುಲರ್ ಕಮರ್ಷಿಯಲ್ ಟೆಂಪ್ಲೇಟ್ ಅಲ್ಲ. ಇದು ತನ್ನದೇ ಆದ ಆತ್ಮವನ್ನು ಹೊಂದಿದೆ. ಆಳವಾಗಿ ಕಥೆ ಹೇಳಿದ್ದಾರೆ. ಕೊನೆಯವರೆಗೂ ನೀವು ಸಿನಿಮಾದೊಳಗೆ ಲೀನವಾಗಿಬಿಡುತ್ತೀರಿ. ವಿನಯ್ ರಾಜ್‌ಕುಮಾರ್ ಪ್ರಾಮಾಣಿಕ ಮತ್ತು ಪ್ರಭಾವಶಾಲಿ ಅಭಿನಯ ನೀಡಿದ್ದಾರೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.

Advertisement

ಒಳ್ಳೆ ಕಮರ್ಷಿಯಲ್ ಪ್ಯಾಕೇಜ್

'ಗ್ರಾಮಾಯಣ' ಸಿನಿಮಾ ನೋಡಿ ಮುಗಿಸಿದೆ. ನಾನು ನಿಜವಾಗಿಯೂ ಪ್ರಭಾವಿತನಾಗಿದ್ದೇನೆ. ಇದು ಸಾಮಾನ್ಯ ಸೂತ್ರದಿಂದ ಭಿನ್ನವಾಗಿದ್ದು ಹೃದಯ ಮುಟ್ಟುವ ಕಮರ್ಷಿಯಲ್ ಪ್ಯಾಕೇಜ್ ಸಿನಿಮಾ ಇದು.. ತಂಡಕ್ಕೆ ಅಭಿನಂದನೆಗಳು ಎಂದು ರೋಶಿನಿ ಎಂಬುವವರು ಬರೆದುಕೊಂಡಿದ್ದಾರೆ.

ಚಿತ್ರಮಂದಿರದಲ್ಲಿ ನೋಡಿ

'ಗ್ರಾಮಾಯಣ' ಒಂದು ಸಂಪೂರ್ಣ ಮಾಸ್ ಕಮರ್ಷಿಯಲ್ ಎಂಟರ್ಟೈನರ್. ಚಿತ್ರದಲ್ಲಿ ಸತ್ವ ಇದೆ. ಬಲವಾದ ಬರವಣಿಗೆ, ಪ್ರಭಾವಶಾಲಿ ಅಭಿನಯ ಮತ್ತು ಪ್ರಭಾವಶಾಲಿ ತಾಂತ್ರಿಕ ಗುಣಮಟ್ಟವು ಚಿತ್ರಮಂದಿರಗಳಲ್ಲಿ ನೋಡುವಂತೆ ಮಾಡಿದೆ ಎಂದು ದಿನೇಶ್ ಎಂಬುವವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ಲೈಮ್ಯಾಕ್ಸ್ ಫೈಟ್ ಸೂಪರ್

ಫಸ್ಟ್ ಹಾಫ್ 20 ನಿಮಿಷ ಕಥೆಗೆ ವೇದಿಕೆ ಸಿದ್ಧಪಡಿಸುವುದು ನಿಧಾನಗತಿಯಾಗಿದೆ. ವಿನಯ್ ರಾಜ್ ಕುಮಾರ್ ತಮ್ಮ ಪಾತ್ರಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ. ಸಂಪೂರ್ಣವಾಗಿ ಹಳ್ಳಿಗಾಡಿನ ವಾತಾವರಣ. ಯೋಗಿ ಮತ್ತು ವಿನಯ್ ಮುಖಾಮುಖಿ.. ಗೋಪಾಲ್ ದೇಶಪಾಂಡೆ ಖಡಕ್ ಡೈಲಾಗ್ಸ್. ಹಾಡುಗಳು ಚೆನ್ನಾಗಿದೆ. ಇಂಟರ್‌ವಲ್ ಫೈಟ್ ಸೂಪರ್ ಆಗಿದೆ. ಕುತೂಹಲಕಾರಿ ತಿರುವುಗಳ ಜೊತೆ ಎಮೋಷನಲ್‌ ಆಗಿ ಸೆಕೆಂಡ್ ಹಾಫ್ ವೇಗ ಪಡೆದುಕೊಳ್ಳುತ್ತದೆ. ಮೇಘಶೆಟ್ಟಿ ನಟನೆ ಚೆನ್ನಾಗಿದೆ. ಕೊನೆಯ 30-40 ನಿಮಿಷಗಳು ಚಿಂತನೆಗೆ ಹಚ್ಚುವಂತಿವೆ. ಕ್ಲೈಮ್ಯಾಕ್ಸ್ ಫೈಟ್ ಚೆನ್ನಾಗಿದೆ. ಕ್ಲೈಮ್ಯಾಕ್ಸ್ ಮತ್ತಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು. ಒಟ್ಟಾರೆ 3.75/5 ಅಂಕಗಳು ಎಂದು ಕೇಶವ ಎಂಬುವವರು ಬರೆದುಕೊಂಡಿದ್ದಾರೆ.