ತಮಿಳುನಾಡು ಸಿಎಂ ವಿಜಯ್ ನಟನೆಯ 'ಜನನಾಯಗನ್' ಸಿನಿಮಾ ಯಾವಾಗ ಬರುತ್ತೆ ಎಂದು ಕಾದು ಕಾದು ಅಭಿಮಾನಿಗಳು ಸುಸ್ತಾಗಿದ್ದಾರೆ. 6 ತಿಂಗಳಿಂದ ಸಿನಿಮಾ ಬಿಡುಗಡೆಗಾಗಿ ಎದುರು ನೋಡುವಂತಾಗಿದೆ. ಈಗಾಗಲೇ ಆನ್ಲೈನ್‌ನಲ್ಲಿ ಸಂಪೂರ್ಣ ಸಿನಿಮಾ ಲೀಕ್ ಆಗಿದೆ. ಆದರೂ ಫಸ್ಟ್ ಡೇ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

Advertisement

ಸೆನ್ಸಾರ್ ಸಮಸ್ಯೆಯಿಂದ ಪದೇ ಪದೆ ಸಿನಿಮಾ ಬಿಡುಗಡೆ ತಡವಾಗುವಂತಾಯಿತು. ಇದೀಗ ಸೆನ್ಸಾರ್ ಆಗಿದ್ದು ಸಿನಿಮಾ ತೆರೆಗೆ ಬರುವುದು ಖಚಿತ ಎಂದು ಕಾಲಿವುಡ್ ಅಂಗಳದಲ್ಲಿ ಚರ್ಚೆ ನಡೀತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳು ಖುಚಿಯಾಗಿದ್ದಾರೆ. ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ರೀಮೆಕ್ ಇದು. ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಸಾಂಗ್ಸ್ ಹಿಟ್ ಆಗಿದೆ. ಅಂದಹಾಗೆ ಇದು ವಿಜಯ್ ಕೊನೆಯ ಸಿನಿಮಾ ಎನ್ನುವಂತಾಗಿದೆ.

Advertisement

ಸಕ್ರಿಯ ರಾಜಕೀಯರಂಗದಲ್ಲಿ ವಿಜಯ್ ಬ್ಯುಸಿಯಾಗಿದ್ದಾರೆ. ಸ್ವಂತ ಪಕ್ಷ ಕಟ್ಟಿ ಗೆದ್ದು ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆ ಹಿಡಿದಿದ್ದಾರೆ. ತಮ್ಮ ಪಾರದರ್ಶಕ ಆಡಳಿತದ ಮೂಲಕ ಸುದ್ದಿಯಾಗಿದ್ದಾರೆ. ವಿಜಯ್ ಸಿಎಂ ಆಗಿಬಿಟ್ಟರೆ 'ಜನನಾಯಗನ್' ಸಿನಿಮಾ ಬಿಡುಗಡೆ ಹಾದಿ ಸುಗಮವಾಗುತ್ತದೆ ಎಂದು ಭಾವಿಸಲಾಗ್ತಿತ್ತು. ಎರಡೂ ತಿಂಗಳು ಕಳೆದರೂ ಯಾವುದೇ ಸುಳಿವು ಸಿಗುತ್ತಿಲ್ಲ. ಸಿನಿಮಾ ಬಿಡುಗಡೆಯಾದ 3 ವಾರಕ್ಕೆ ಓಟಿಟಿ ಸ್ಟ್ರೀಮಿಂಗ್ ಮಾಡಲು ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.

ಜುಲೈ 24ಕ್ಕೆ ಸಿನಿಮಾ ರಿಲೀಸ್?

'ಜನನಾಯಗನ್' ಸಿನಿಮಾ ಜುಲೈ 24ಕ್ಕೆ ತೆರೆಗಪ್ಪಳಿಸುವುದು ಖಚಿತ ಎಂದು ಹೇಳಲಾಗ್ತಿದೆ. ತಮಿಳು ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿದೆ. ಆದರೆ ಅಧಿಕೃತವಾಗಿ ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ಯಾವುದೇ ಮಾಹಿತಿ ನೀಡಿಲ್ಲ. ಒಟ್ಟಾರೆ ಇದೇ ತಿಂಗಳು ಸಿನಿಮಾ ಬಿಡುಗಡೆ ಆಗುತ್ತದೆ ಎನ್ನುವ ವಿಚಾರ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಈಗಾಗಲೇ ಬಹುತೇಕರ ಪೈರಸಿ ಕಾಪಿಯಲ್ಲಿ ಸಿನಿಮಾ ನೋಡಿಬಿಟ್ಟಿದ್ದಾರೆ. ಆದರೂ ದೊಡ್ಡಪರದೆಯಲ್ಲಿ ಸಿನಿಮಾ ನೋಡಲು ಕಾಯುತ್ತಿದ್ದಾರೆ.

Advertisement

ಸಿನಿಮಾದಲ್ಲಿ ಬದಲಾವಣೆ

ವಿಜಯ್ ತಮ್ಮ ರಾಜಕೀಯರಂಗ ಪ್ರವೇಶಕ್ಕೆ 'ಜನನಾಯಗನ್' ಸಿನಿಮಾ ಬಳಸಿಕೊಳ್ಳಲು ಮನಸ್ಸು ಮಾಡಿದ್ದರು. ಭ್ರಷ್ಟ ರಾಜಕಾರಣಿಗಳ ವಿರುದ್ಧದ ಹೋರಾಟದ ಸನ್ನಿವೇಶಗಳು ಚಿತ್ರದಲ್ಲಿತ್ತು. ಅದಕ್ಕೆ ಸಂಬಂಧಪಟ್ಟಂತೆ ಡೈಲಾಗ್ಸ್ ಸೇರಿಸಲಾಗಿತ್ತು. ಈಗ ವಿಜಯ್ ರಾಜಕೀಯಕ್ಕೆ ಬಂದು ಸಿಎಂ ಆಗಿಬಿಟ್ಟಿದ್ದಾರೆ. ಹಾಗಾಗಿ ಕೆಲ ದೃಶ್ಯಗಳನ್ನು ಬದಲಿಸುತ್ತಾರೆ ಎನ್ನಲಾಗ್ತಿದೆ. ಇನ್ನು ಟೈಟಲ್‌ ಕಾರ್ಡ್‌ನಲ್ಲಿ ದಳಪತಿ ವಿಜಯ್ ಬದಲು ತಮಿಳುನಾಡು ಸಿಎಂ ವಿಜಯ್ ಎಂದು ಹೆಸರು ಬದಲಿಸುತ್ತಾರೆ ಎನ್ನುವ ಮಾತುಗಳು ಕೇಳಿಬರ್ತಿದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.

'ಸಿಗ್ಮಾ' ರಿಲೀಸ್ ಡೇಟ್

ವಿಜಯ್ ಮಗ ಜೇಸನ್ ಸಂಜಯ್ ಕೂಡ ಚಿತ್ರರಂ ಪ್ರವೇಶಿಸಿದ್ದಾರೆ. ಹೀರೊ ಆಗಿ ಅಲ್ಲದೇ ಸಿನಿಮಾ ನಿರ್ದೇಶಕನಾಗಿ ಗುರ್ತಿಸಿಕೊಂಡಿದ್ದಾರೆ. ವಿಜಯ್ ಪತ್ನಿ ಸಂಗೀತಾ ಡಿವೋರ್ಸ್ ಕೋರಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಮಕ್ಕಳು ಅಮ್ಮನ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಜೇಸನ್ ನಿರ್ದೇನದ 'ಸಿಗ್ಮಾ' ಸಿನಿಮಾ ಜುಲೈ 31ಕ್ಕೆ ತೆರೆಗೆ ಬರುವುದು ಖಚಿತವಾಗಿದೆ. ಅದಕ್ಕಿಂತ ಒಂದು ವಾರ ಮುನ್ನ ತಂದೆ ನಟನೆಯ 'ಜನನಾಯಗನ್' ಸಿನಿಮಾ ಬಿಡುಗಡೆ ಆಗುತ್ತಾ ಕಾದು ನೋಡಬೇಕಿದೆ. ಸಂದೀಪ್ ಕಿಶನ್ ಚಿತ್ರದಲ್ಲಿ ಹೀರೊ ಆಗಿ ನಟಿಸಿದ್ದಾರೆ.

Advertisement

ವಿಜಯ್ ಕೊನೆ ಸಿನಿಮಾ

'ಜನನಾಯಗನ್' ವಿಜಯ್ ನಟನೆಯ ಕೊನೆ ಸಿನಿಮಾ ಎಂದೇ ಪ್ರಚಾರವಾಗ್ತಿದೆ. ರಾಜಕೀಯರಂಗದಲ್ಲಿ ಸೋತಿದ್ದರೆ ವಿಜಯ್ ಮತ್ತೆ ಸಿನಿಮಾಗಳಲ್ಲಿ ನಟಿಸುವ ಸಾಧ್ಯತೆಯಿತ್ತು. ಆದರೆ ಅಚ್ಚರಿ ಎನ್ನುವಂತೆ ಗೆದ್ದು ಬೀಗಿದ್ದಾರೆ. ಎರಡು ವರ್ಷದಲ್ಲಿ ಪಕ್ಷ ಕಟ್ಟಿ ಪ್ರಚಾರ ಮಾಡಿ ಅಧಿಕಾರ ವಹಿಸಿಕೊಂಡಿದ್ದಾರೆ. ವಿಜಯ್ ಸಿಎಂ ಆಗಿರುವುದು ಅಭಿಮಾನಿಗಳಿಗೆ ಖುಷಿಕೊಟ್ಟಿದೆ. ಮತ್ತೊಂದು ಕಡೆ ಮುಂದೆ ಸಿನಿಮಾಗಳಲ್ಲಿ ನಟಿಸಲ್ವಾ? ಎನ್ನುವ ಬೇಸರ ಮೂಡಿದೆ.