ಲವ್, ಮದುವೆ, ಡಿವೋರ್ಸ್ ಬಳಿಕ ಮತ್ತೆ ಲವ್, ಮತ್ತೆ ಮದುವೆ ಎನ್ನುವುದು ಈಗ ಕಾಮನ್ ಎನ್ನುವಂತಾಗಿಬಿಟ್ಟಿದೆ. ಸಿನಿಮಾ ತಾರೆಯರ ಮ್ಯಾರೇಜ್, ಡಿವೋರ್ಸ್ ಹಾಗೂ 2ನೇ ಮದುವೆ ವಿಚಾರಗಳು ಭಾರೀ ಸುದ್ದಿ ಆಗುತ್ತಿದೆ. ಇದೀಗ ತೆಲುಗು ನಟಿ ಕಲರ್ಸ್ ಸ್ವಾತಿ 2ನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದಾರೆ. ನಿರ್ದೇಶಕ ಶ್ರೀಕಾಂತ್ ನಾಗೋತಿ ಜೊತೆ ಸರಳವಾಗಿ ಮದುವೆ ನಡೆದಿದೆ.
ವಿಶಾಖಪಟ್ಟಣಂ ಮೂಲದ ಸ್ವಾತಿ ರೆಡ್ಡಿ ಒಂದಷ್ಟು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆ ನಿರೂಪಕಿಯಾಗಿ ಕೂಡ ಮಿಂಚಿದವರು. 'ಕಲರ್ಸ್' ಎನ್ನುವ ಕಾರ್ಯಕ್ರಮ ನಿರೂಪಣೆ ಮಾಡಿ ಗಮನ ಸೆಳೆದಿದ್ದರು. ಮುಂದೆ ಕಲರ್ಸ್ ಸ್ವಾತಿ ಎಂದೇ ಜನಪ್ರಿಯರಾಗಿಬಿಟ್ಟರು. ವೃತ್ತಿಯಲ್ಲಿ ಪೈಲೆಟ್ ಆಗಿದ್ದ ವಿಕಾಸ್ ವಾಸು ಎಂಬುವವರನ್ನು ಸ್ವಾತಿ ಪ್ರೀತಿಸಿ 8 ವರ್ಷಗಳ ಹಿಂದೆ ಮದುವೆ ಆಗಿದ್ದರು. ಕೆಲ ಭಿನ್ನಾಭಿಪ್ರಾಯಗಳಿಂದ ಜೋಡಿ 2022ರಲ್ಲಿ ಡಿವೋರ್ಸ್ ಪಡೆದು ದೂರಾಗಿದ್ದರು.
3 ವರ್ಷಗಳ ಹಿಂದೆ 'ಮಂಥ್ ಆಫ್ ಮಧು' ಎಂಬ ಚಿತ್ರದಲ್ಲಿ ಸ್ವಾತಿ ನಟಿಸಿದ್ದರು. ಶ್ರೀಕಾಂತ್ ನಾಗೋತಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಇದೇ ಸಮಯದಲ್ಲಿ ಸ್ವಾತಿ ಹಾಗೂ ಶ್ರೀಕಾಂತ್ ನಡುವೆ ಶುರುವಾಗಿದ್ದ ಪರಿಚಯ ಸ್ನೇಹವಾಗಿ ಬಳಿಕ ಇಬ್ಬರೂ ಪ್ರೀತಿಲಿ ಬಿದ್ದಿದ್ದರು. ಇದೀಗ ಸರಳವಾಗಿ ಇಬ್ಬರು ಮದುವೆಯಾಗಿದ್ದಾರೆ. ಸ್ವಾತಿ ತಮ್ಮ ಮದುವೆ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ(ಜುಲೈ 8) ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿದೆ. ಕೆಲವೇ ಆಪ್ತರು ಈ ಸಮಾರಂಭದಲ್ಲಿ ಭಾಗಿ ಆಗಿದ್ದರು ಎಂದು ವರದಿಯಾಗಿದೆ.More Articles