ಸೀರಿಯಲ್ ಹಬ್ಬ: ಮಾನಸ ಸರೋವರ ಮತ್ತು ಅವಳು ತಂಡದಿಂದ ಮಸ್ತ್ ಮನರಂಜನೆ


ಕನ್ನಡದ ಪ್ರಮುಖ ವಾಹಿನಿಗಳಲ್ಲೊಂದಾದ ಉದಯ ಟಿವಿ ಗೌರಿ ಗಣೇಶ ಹಬ್ಬವನ್ನು ತನ್ನ ವೀಕ್ಷಕರ ಮುಂದೆಯೇ ಆಚರಿಸಿದ್ದು ವಿಶೇಷ. ಹಾಸನದ ಜನತೆಯ ಮುಂದೆ ಉದಯ ಸಂಸಾರದ ಕಲಾವಿದರೆಲ್ಲರೂ ಕುಣಿದು ಕುಪ್ಪಳಿಸಿ ಮನರಂಜಿಸುವ ಮೂಲಕ ಗಣೇಶನನ್ನು ಆರಾಧಿಸಿದರು.

ಉದಯ ವಾಹಿನಿಯ ಸೂಪರ್ ಹಿಟ್ ಧಾರಾವಾಹಿಗಳಾದ 'ಮಾನಸ ಸರೋವರ' ಮತ್ತು 'ಅವಳು' ತಂಡ 'ಸೀರಿಯಲ್ ಹಬ್ಬ'ಕ್ಕಾಗಿ ಭಾಗವಹಿಸಿದ್ದು ವಿನೂತನವಾಗಿತ್ತು.

ಸೆಪ್ಟೆಂಬರ್ 13 (ನಾಳೆ) ರಂದು ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗುವ 'ಸೀರಿಯಲ್ ಹಬ್ಬ'ದಲ್ಲಿ ಕನ್ನಡದ ಪ್ರಖ್ಯಾತ ನಟರಾದ ಪ್ರಣಯರಾಜ ಶ್ರೀನಾಥ್, ರಾಮಕೃಷ್ಣ ಮತ್ತು ಪದ್ಮಾ ವಾಸಂತಿಯವರ ಸಾನಿಧ್ಯ ಇರಲಿದೆ. ಮುಂದೆ ಓದಿರಿ...

ನೀನೇ ಸಾಕಿದ ಗಿಣಿ ಹಾಡಿಗೆ ಸ್ಟೆಪ್

ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ಮಾನಸ ಸರೋವರ' ಸಿನಿಮಾದ ಮುಂದುವರಿದ ಭಾಗವಾದ 'ಮಾನಸ ಸರೋವರ' ಧಾರಾವಾಹಿಯನ್ನು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ನಿರ್ಮಿಸುತ್ತಿರುವುದು ಗಮನಾರ್ಹ. 1982 ರಲ್ಲಿ ಮನೆಮಾತಾಗಿದ್ದ 'ನೀನೇ ಸಾಕಿದಾ ಗಿಣಿ' ಗೀತೆಗೆ 35 ವರ್ಷಗಳ ನಂತರ 'ಸೀರಿಯಲ್ ಹಬ್ಬ'ಕ್ಕಾಗಿ ಅದೇ ಕಲಾವಿದರು ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

'ಅವಳು' ಮನೆಯಲ್ಲಿ ಇಂದು 'ಗಣಪ'ನ ಹಬ್ಬ

'ಸೀರಿಯಲ್ ಹಬ್ಬ'ದಲ್ಲಿ 'ಅವಳು'

300 ಸಂಚಿಕೆಗಳನ್ನು ದಾಟಿ ಕನ್ನಡದ ವೀಕ್ಷಕರನ್ನು ಸೆಳೆದಿರುವ 'ಅವಳು' ಇದೀಗ ಹೊಸ ರೂಪದಲ್ಲಿ ಬರುತ್ತಿದ್ದು, ಆ ತಂಡದ ಕಲಾವಿದರೂ ಸೀರಿಯಲ್ ಹಬ್ಬದಲ್ಲಿ ಪಾಲ್ಗೊಂಡಿದ್ದಾರೆ.

'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?

ಗಣೇಶ ಹಬ್ಬ ಆಚರಿಸಿದ 'ಅವಳು' ತಂಡ

ಸಾಮಾನ್ಯ ಹುಡುಗಿಯೊಬ್ಬಳು ಸೂಪರ್ ಸ್ಟಾರ್ ಒಬ್ಬನನ್ನು ಪ್ರೀತಿಸಿದರೆ ಏನಾಗಬಹುದು ಎಂಬ ಕಥಾ ತಿರುಳನ್ನು ಹೊಂದಿರುವ ಅವಳು ತನ್ನ ಹೊಸ ಅವತರಣಿಕೆಯನ್ನು ಗಣೇಶ ಹಬ್ಬದಂದೇ ಶುರು ಮಾಡುತ್ತಿರುವುದು ವಿಶೇಷ. ಗಣೇಶ ಹಬ್ಬವನ್ನು ಬರಿ ಪೂಜೆ ಪುನಸ್ಕಾರಕ್ಕಷ್ಟೇ ಸೀಮಿತವಾಗಿಸದೇ ದೇಶದ ಬೆನ್ನೆಲುಬಾಗಿರುವ ರೈತನಿಗೆ ತನ್ನ ಕೈಲಾದ ಸಹಾಯ ಮಾಡುವ ಮೂಲಕ ಅವರ ಮನೆಯಲ್ಲೇ ಪ್ರಸಾದ ಸ್ವೀಕರಿಸಿ ಹಬ್ಬ ಆಚರಿಸಲಾಯಿತು.

ಪ್ರಸಾರ ಯಾವಾಗ.?

'ಮಾನಸ ಸರೋವರ', 'ಅವಳು' ಸೀರಿಯಲ್ ಹಬ್ಬ ಇದೇ ಗಣೇಶ ಹಬ್ಬದ ದಿನ(ಸೆ. 13) ಮಧ್ಯಾಹ್ನ 3 ಗಂಟೆಗೆ ಪ್ರಸಾರವಾಗಲಿದೆ.

Have a great day!
Read more...

English Summary

Avalu and Manasa Sarovara serial team in Udaya TV's serial habba on Ganesh Chaturthi.