ಹೆಣ್ಣಿನ ಮೇಲೆ ಗಂಡಿನ ಶೋಷಣೆ, ಅತ್ಯಾಚಾರದ ಕುರಿತ ಸುದ್ದಿಗಳನ್ನು ನಾವು ಓದುತ್ತಲೇ ಇದ್ದೇವೆ, ಕೇಳುತ್ತಲೇ ಇದ್ದೇವೆ. ಪ್ರಪಂಚದಾದ್ಯಂತ ಲಕ್ಷಾಂತರ ಮಹಿಳೆಯರು, ಹುಡುಗಿಯರು, ದೈಹಿಕ, ಲೈಂ*ಗಿಕ ಹಿಂಸೆ ಅನುಭವಿಸುತ್ತಲೇ ಇದ್ಧಾರೆ. ಬದಲಾದ ಈ ಕಾಲದಲ್ಲಿ ಮಹಿಳಾ ಸಬಲೀಕರಣದ ಕುರಿತು ಭಾಷಣಗಳನ್ನು ಮಾಡಲಾಗುತ್ತೆ ಆದರೂ, ವಾಸ್ತವದಲ್ಲಿ ಮಹಿಳೆಯ ಸಾಧನೆ.. ಶ್ರಮ ಮತ್ತು ಪ್ರತಿಭೆಗಿಂತ ಭೋಗದ ವಸ್ತು ಎಂದುಕೊಂಡ ವಿಕೃತ ಮನಸ್ಥಿತಿಗಳು ಇಂದಿಗೂ ಕೂಡ ಇವೆ.

Advertisement

ಕೇವಲ ಚಿತ್ರರಂಗ ಮಾತ್ರ ಅಲ್ಲ, ಪ್ರತಿಯೊಂದು ಕ್ಷೇತ್ರದಲ್ಲಿಯೂ ಮಾನಸಿಕ ನೆಮ್ಮದಿ ಹಾಳು ಮಾಡಲು ಈ ಕಾ*ಮಾಂಧರು ಇದ್ದೇ ಇರುತ್ತಾರೆ. ಆದರೆ ಚಿತ್ರರಂಗದಲ್ಲಿ ಈ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಮತ್ತೊಂದು ಪುರಾವೆ ಎಂಬಂತೆ ಹಿಂದಿ ಕಿರುತೆರೆಯ ಖ್ಯಾತ ನಟ ರೋಹಿತ್ ಚಾಂದೆಲ್ ಅವರನ್ನು ಪೊಲೀಸರು ಪೋಕ್ಸೊ ಕಾಯ್ದೆಯಡಿ ಬಂಧಿಸಿದ್ದಾರೆ.

Advertisement

ಯಾರು ಈ ರೋಹಿತ್ ಚಾಂದೆಲ್ ?


''ಹರ್ ಮುಷ್ಕಿಲ್ ಕಾ ಹಲ್ ಅಕ್ಬರ್ ಬೀರಬಲ್'' ಧಾರಾವಾಹಿಯಲ್ಲಿ ಚಿಕ್ಕ ಪಾತ್ರ ನಿರ್ವಹಿಸುವ ಮೂಲಕ ಕಿರುತೆರೆಗೆ ಬಂದ ರೋಹಿತ್ ''ಯಮ್ ಹೈ ಹಮ್''.. ''ತಮನ್ನಾ''.. ''ಯೇ ಉನ್ ದಿನೋ ಕಿ ಬಾತ್ ಹೈ''.. ''ಚಂದ್ರಗುಪ್ತ ಮೌರ್ಯ.. ಹೀಗೆ ಹಲವು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಆದರೆ ಇವರ ಬದುಕು ಬದಲಿಸಿದ್ದು ಮಾತ್ರ ''ಕಾಶಿಬಾಯಿ ಬಾಜಿರಾವ್ ಬಲ್ಲಾಳ್'' ಧಾರಾವಾಹಿ. ಈ ಐತಿಹಾಸಿಕ ಸೀರಿಯಲ್‌ನಲ್ಲಿ ಬಾಜಿರಾವ್ ಪಾತ್ರವನ್ನು ನಿರ್ವಹಿಸುವ ಮೂಲಕ ಮನೆ ಮಾತಾದರು. ''ಪಾಂಡ್ಯ ಸ್ಟೋರ್'' ಇವರ ಮತ್ತೊಂದು ಕೆಲ ಜನಪ್ರಿಯ ಧಾರಾವಾಹಿ. ಸದ್ಯ ''ಸೈರಾಬ್'' ಎಂಬ ಸೀರಿಯಲ್ ನಲ್ಲಿ ಇವರು ಆಕ್ಟ್ ಮಾಡುತ್ತಿದ್ದಾರೆ. ಇಂಥಾ ರೋಹಿತ್ ಚಾಂದೆಲ್ ಸದ್ಯ ಜೈಲು ಪಾಲಾಗಿದ್ದಾರೆ.

Advertisement

ಅಪ್ರಾಪ್ತೆಯ ಹಿಂದೆ ಬಿದ್ದ ರೋಹಿತ್


ನೋಡಲು ತುಂಬಾ ಸುಂದರವಾಗಿರುವ ರೋಹಿತ್, 16 ವರ್ಷದ ಅಪ್ರಾಪ್ತ ಬಾಲಕಿ ಹಿಂದೆ ಬಿದ್ದಿದ್ದರು. ಬಾಲಕಿಯನ್ನು ಹಿಂಬಾಲಿಸುತ್ತಿದ್ದ ರೋಹಿತ್ ಆ ಬಾಲಕಿಗೆ ಕಿರುಕುಳ ನೀಡಿದ್ದರು. ಹಲ್ಲೆ ಕೂಡ ಮಾಡಿದ್ದರು. ಈ ಹಿನ್ನೆಲೆ ಬಾಲಕಿ ಪೊಲೀಸರಿಗೆ ದೂರನ್ನು ನೀಡಿದ್ದು ದೂರಿನ ಅನ್ವಯ ರೋಹಿತ್ ತನ್ನ ನಂಬರದಿಂದ ನಿರಂತರವಾಗಿ ಕರೆ ಮಾಡಿ ಪೀಡಿಸುತ್ತಿದ್ದರು. ನಂಬರ್ ಬ್ಲಾಕ್ ಮಾಡಿದರು ಕೂಡ ಬೇರೆ ಬೇರೆ ನಂಬರ್ ಗಳಿಂದ ಕರೆ ಮಾಡಿ ಮಾನಸಿಕ ಕಿರುಕುಳ ಕೊಡುತ್ತಿದ್ದ ರೋಹಿತ್ ಜುಲೈ 5ರಂದು ಬಾಲಕಿ ಮನೆ ಹತ್ತಿರ ಬಂದು ಅಡ್ಡಗಟ್ಟಿದ್ದಾರೆ. ಜಗಳ ಶುರು ಮಾಡಿ, ಬಾಯಿಗೆ ಬಂದಂತೆ ಬೈದು, ಹಲ್ಲೆಯನ್ನು ಕೂಡ ಮಾಡಿದ್ದಾರೆ.

Advertisement

ಬಾಲಕಿ ನೀಡಿದ ದೂರನ್ನು ಸ್ವೀಕರಿಸಿರುವ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78, 115(2), 352 ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 12 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ರೋಹಿತ್ ಚಾಂದೆಲ್‌ ಅವರನ್ನು ಘಾಟ್‌ಕೋಪರ್ ಪೊಲೀಸರು ಜುಲೈ 10ರಂದು ಅರೆಸ್ಟ್ ಮಾಡಿದ್ದಾರೆ.

ಘಾಟ್‌ಕೋಪರ್ ಪೊಲೀಸ್ ಠಾಣೆಯ ಸೀನಿಯರ್ ಪಿಐ ವಿಠ್ಠಲ್ ಲಕ್ಷ್ಮಣ್ ಆರ್ಡೇಕರ್ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಕೋರ್ಟ್‌ ರೋಹಿತ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ರೋಹಿತ್ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

Advertisement

ಕಿರುಕುಳಕ್ಕೊಳಗಾದ ಅಪ್ರಾಪ್ತ ಬಾಲಕಿ ಬಂಧಿತ ರೋಹಿತ್ ಜೊತೆ ಅಭಿನಯಿಸಿದ್ದರು. ಆ ಸಮಯದಲ್ಲಿ ಪರಿಚಯವಾಗಿದ್ದು, ಇಲ್ಲಿಂದ ಬಾಲಕಿಗೆ ರೋಹಿತ್ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾರೆ. ರೋಹಿತ್ ದಹಿಸರ್‌ನಲ್ಲಿ ವಾಸ ಮಾಡುತ್ತಿದ್ದರೂ ಕೂಡ ಹುಡುಗಿಗಾಗಿ ಘಾಟ್‌ಕೋಪರ್‌ಗೆ ಟ್ರಾವೆಲ್ ಮಾಡ್ತಿದ್ದರು ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ''ಟೈಮ್ಸ್ ಆಫ್ ಇಂಡಿಯಾ'' ವರದಿ ಮಾಡಿದೆ.