ಕಣ್ಣಿಗೆ ಮಣ್ಣೆರಚಿ ಓಡಿ ಬಂದರೂ ಸಿತಾರ ದೇವಿಯಿಂದ ರಾಣಿ ತಪ್ಪಿಸಿಕೊಳ್ಳಲು ಆಗಲಿಲ್ಲ.!


''ಇಷ್ಟು ದಿನ ನಾಟಕ ಮಾಡಿದ್ದು ಸಾಕು. ಸಿತಾರ ದೇವಿ ಕೊಡುವ ಚಿಲ್ಲರೆ ಕಾಸಿನ ಬದಲು ರಮಣ್ ಕೊಟ್ಟಿರುವ ಕ್ರೆಡಿಟ್ ಕಾರ್ಡ್ ನಲ್ಲಿ ಲೈಫ್ ಸೆಟಲ್ ಮಾಡಿಕೊಳ್ಳಬಹುದು'' ಎಂದು ಪ್ಲಾನ್ ಮಾಡಿ ರಮಣ್ ಮನೆಯಿಂದ ರಾಣಿ ಎಸ್ಕೇಪ್ ಆದಳು.

ಗಂಟು-ಮೂಟೆ ಕಟ್ಟಿಕೊಂಡು ಯಾರಿಗೂ ಗೊತ್ತಾಗದ ಹಾಗೆ ಮನೆಯಿಂದ ಆಚೆ ಬಂದಳು ರಾಣಿ. ಇನ್ನೇನು ರಾಣಿ ಮತ್ತು ಮಾದ ಕಾರು ಹತ್ತಿ ಊರು ಬಿಟ್ಟು ಹೋಗಬೇಕು... ಅಷ್ಟರಲ್ಲಿ ಸಿತಾರ ದೇವಿಯ ಚೇಲ ಮಂಜ ಹಾಜರ್.

ಸಿತಾರ ದೇವಿ ಚೇಲ ಮಂಜನ ಕಣ್ಣಿಗೆ ಮಣ್ಣೆರಚಿ ಮಾದ ಮತ್ತು ರಾಣಿ ಓಡಿ ಹೋಗಲು ಪ್ರಯತ್ನ ಪಟ್ಟರು. ಆದ್ರೆ, ಅದೂ ಸಫಲ ಆಗಲಿಲ್ಲ. ಯಾಕಂದ್ರೆ, ಮಾದ ಮತ್ತು ರಾಣಿ ಮುಂದೆ ಸಿತಾರ ದೇವಿ ಪ್ರತ್ಯಕ್ಷ ಆಗ್ಬಿಟ್ರು.

ಅಂತೂ ಪರಾರಿ ಆಗಲು ರಾಣಿ ತಯಾರಿ: ಇವತ್ತು ಉಲ್ಟಾ-ಪಲ್ಟಾ ಆಗಬಹುದೇನೋ.?

''ಮತ್ತೆ ನನ್ನನ್ನ ಮನೆಗೆ ಕರ್ಕೊಂಡು ಹೋದರೆ, ರಮಣ್ ಗೆ ಎಲ್ಲಾ ಸತ್ಯ ಹೇಳುವೆ'' ಎಂದು ಸಿತಾರ ದೇವಿಗೆ ರಾಣಿ ಧಮ್ಕಿ ಹಾಕಿದ್ದಾಳೆ. ಇತ್ತ ಮಾದನನ್ನ ಮಂಜ ಲಾಕ್ ಮಾಡಿಕೊಂಡಿದ್ದಾನೆ.

ಗಂಟು-ಮೂಟೆ ಕಟ್ಟಿಕೊಂಡು ಮನೆಯಿಂದ ಆಚೆ ಕಾಲಿಟ್ಟ 'ಕಳ್ಳಿ' ರಾಣಿ.!

ಮಾದನನ್ನ ಕೂಡಿ ಹಾಕಿ, ಟಾರ್ಚರ್ ಕೊಡುತ್ತಾ ರಾಣಿಯನ್ನ ತಾಳಕ್ಕೆ ತಕ್ಕ ಹಾಗೆ ಕುಣಿಸುವುದು ಸಿತಾರ ದೇವಿ ಪ್ಲಾನ್ ಆಗಿರಬಹುದು. ಇಲ್ಲಾಂದ್ರೆ, ಇಬ್ಬರನ್ನೂ ಕೂಡಿ ಹಾಕಿ, ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡು 'ಅವನಿ' ಕಥೆಗೆ ಸಿತಾರ ಶುಭಂ ಹಾಡಲೂ ಬಹುದು. ಸಿತಾರ ದೇವಿ ಕೈಯಲ್ಲಿ ನಿರ್ದೇಶಕರು ಇನ್ನೂ ಏನೇನ್ ಮಾಡಿಸುತ್ತಾರೋ, ಏನೋ.?

Have a great day!
Read more...

English Summary

Radha Ramana serial written update: Sitara Devi Catch hold of Rani.