ಅವಳು ಮನೆಯಲ್ಲಿ ಇಂದು ಗಣಪನ ಹಬ್ಬ


ಉದಯ ಟಿವಿಯಲ್ಲಿ ಈಗಾಗಲೇ ಹೊಸ ರೂಪದಲ್ಲಿ ಬರುತ್ತಿರುವ 'ಅವಳು' ಧಾರಾವಾಹಿ ಗಣೇಶನ ಹಬ್ಬ ಮಾಡುವುದರ ಮೂಲಕ ಈ ಹಬ್ಬಕ್ಕೆ ಮತ್ತಷ್ಟು ಮೆರುಗು ತರಲು ಸಜ್ಜಾಗಿದೆ.

ಇಂದು ಸಂಜೆ 6 ಗಂಟೆಗೆ 'ಅವಳು' ಗಣಪನ ವಿಶೇಷ ಸಂಚಿಕೆ ನಿಮ್ಮ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

ಸಾಮಾನ್ಯ ಹಳ್ಳಿ ಹುಡುಗಿ ಪದ್ಮಾ ಮತ್ತು ಸೂಪರ್ ಸ್ಟಾರ್ ಡಿ.ಜೆ ನಡುವಿನ ಪ್ರೇಮಕಥೆಯೇ 'ಅವಳು'. ಮಾನಸಾಳ ಕುಟುಂಬವನ್ನ ಕೊಂದು ಅವಳ ಇಡೀ ಆಸ್ತಿಯನ್ನ ಮೋಸದಿಂದ ತನ್ನದಾಗಿಸಿಕೊಂಡಿರುವ ಭುವನೇಶ್ವರಿಯ ಮಗನೇ ಸೂಪರ್ ಸ್ಟಾರ್ ಡಿ.ಜೆ.

ಈಗಾಗಲೇ ಭುವನೇಶ್ವರಿಗೆ ಮಾನಸಾಳ ಮಗಳು ಪದ್ಮಾ ಬದುಕಿರುವ ಸತ್ಯ ಗೊತ್ತಾಗಿದೆ. ಹಾಗಾಗಿ ಅವಳನ್ನ ಹುಡುಕುತ್ತಿರುವ ಭುವನಾಳಿಗೆ ಪದ್ಮಾಳೇ ಎದುರಾದರೇ ಏನಾಗಬಹುದು?

ಬ್ರೇಕಿಂಗ್ ನ್ಯೂಸ್ ಮಾಡುವ ಪದ್ಮಾ

ಸಿನಿಮಾ ಚಿತ್ರೀಕರಣದಲ್ಲಿ ಡಿ.ಜೆ ಜೊತೆ ನಟಿಸುವ ಸಣ್ಣ ಪಾತ್ರ ಪದ್ಮಾಳಿಗೆ ಆಕಸ್ಮಿಕವಾಗಿ ಸಿಗುತ್ತದೆ. ಆದರೆ ಡಿ.ಜೆ ನ ಅಪ್ಪಿಕೊಳ್ಳಲು ಹಾಗೂ ಮುತ್ತು ಕೊಡಲು ನಿರಾಕರಿಸುತ್ತಾಳೆ. ಇದರಿಂದಾಗಿ ಡಿ.ಜೆ ಅವಮಾನಿತನಾಗುತ್ತಾನೆ. ಸಿನಿಮಾ ಇಂಡಸ್ಟ್ರಿಯಲ್ಲಿ ಪದ್ಮಾ ದೊಡ್ಡ ಸುದ್ದಿಯಾಗುತ್ತಾಳೆ.

ನಿಮ್ಮ ಉದಯ ಟಿವಿಯಲ್ಲಿ 'ಅವಳು' ಮಹಾ ಸಂಚಿಕೆ

ಡಿ.ಜೆ ಮನೆಯಲ್ಲಿ ಗಣೇಶ ಹಬ್ಬ

ತನ್ನ ಮಗನ ಸ್ಟಾರ್ ಇಮೇಜ್ ನ ಹಾಳು ಮಾಡಿರುವ ಪದ್ಮಾ ತನ್ನ ಶತ್ರು ಮಾನಸಾಳ ಮಗಳೆಂಬುವುದು ಗೊತ್ತಿಲ್ಲ. ಆದರೆ ಡಿ.ಜೆ ಮನೆಯಲ್ಲಿ ನಡೆಯುವ ಗಣೇಶ ಹಬ್ಬಕ್ಕೆ ಪದ್ಮಾ ಬಂದಿದ್ದಾಳೆ.

'ಬ್ರಹ್ಮಾಸ್ತ್ರ': ತಂಗಿಗಾಗಿ ಮದುವೆ ನಿರಾಕರಿಸುವನೇ ಸಂತು.?

ಪದ್ಮಾ ಜನ ರಹಸ್ಯ ಬಯಲು.?

ಗಣೇಶ ಹಬ್ಬದ ದಿನದಂದೇ ಪದ್ಮಾಳಿಗೆ ಗೊತ್ತಿರದ ಜನ್ಮ ರಹಸ್ಯ ತಿಳಿಯುತ್ತದೆಯೇ? ಮಾನಸಾಳಂತಿರುವ ಪದ್ಮಾಳನ್ನ ನೋಡಿ ಭುವನಾ ಸುಮ್ಮನಿರುವಳೇ? ಡಿ.ಜೆ ಮೆರೆಯುತ್ತಿರುವ ಆಸ್ತಿಯ ನಿಜವಾದ ವಾರಸ್ದಾರ ಪದ್ಮಾಳೆಂದು ಗೊತ್ತಾಗುವುದೇ?

'ಅವಳು' ವಿಶೇಷ ಸಂಚಿಕೆ

ಇವೆಲ್ಲವುಗಳ ಕುತೂಹಲಕಾರಿ ಸಂಚಿಕೆ ಇಂದಿನ ಗಣೇಶ ಹಬ್ಬದ 'ಅವಳು' ವಿಶೇಷ ಸಂಚಿಕೆ ಉದಯ ಟಿವಿಯಲ್ಲಿ ಸಂಜೆ 6ಕ್ಕೆ ಪ್ರಸಾರವಾಗುತ್ತದೆ.

Have a great day!
Read more...

English Summary

Udaya TV's 'Avalu' serial special episode on Ganesh Chaturthi.