twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ' ನಂತರ 1000 ಕೋಟಿ ಗಳಿಸಿದ ಭಾರತದ ಮತ್ತೊಂದು ಚಿತ್ರ

    By Bharath Kumar
    |

    ಎಸ್.ಎಸ್ ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ರಿಲೀಸ್ ಆದ 10 ದಿನಗಳಲ್ಲೇ 1000 ಕೋಟಿ ಗಳಿಸಿ ಯಾರು ಮಾಡಿರದ ದಾಖಲೆಯನ್ನ ನಿರ್ಮಾಣ ಮಾಡಿತ್ತು. ಈ ದಾಖಲೆಯನ್ನ ಮತ್ಯಾರು ಮುರಿಯವುದಕ್ಕೆ ಆಗುವುದಿಲ್ಲ ಎಂದೇ ಹೇಳಲಾಗ್ತಿತ್ತು. ಆದ್ರೆ, 'ಬಾಹುಬಲಿ' ಇನ್ನು ಚಿತ್ರಮಂದಿರದಲ್ಲಿ ಪ್ರದರ್ಶನವಾಗುತ್ತಿರುವಾಗಲೇ ಈ ದಾಖಲೆಯನ್ನ ಸರಿಗಟ್ಟಿದೆ ಮತ್ತೊಂದು ಚಿತ್ರ.

    ಹೌದು, ಮಿಸ್ಟರ್ ಫರ್ಫೆಕ್ಷನಿಸ್ಟ್ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸಿದೆ. ಈ ಮೂಲಕ ಭಾರತದ ಎರಡನೇ ದೊಡ್ಡ ಸಿನಿಮಾ ಎನಿಸಿಕೊಂಡಿದೆ.[ರಾಜಮೌಳಿ 'ಬಾಹುಬಲಿ'ಯಿಂದ ಅಮೀರ್ 'ದಂಗಲ್' ದಾಖಲೆ ಬ್ರೇಕ್! ]

    2015 ರಲ್ಲಿ ಬಿಡುಗಡೆಯಾಗಿದ್ದ 'ದಂಗಲ್' ಈಗ 1000 ಕೋಟಿ ಹೇಗೆ ಗಳಿಸಿದೆ ಎಂಬ ಕುತೂಹಲ ನಿಮ್ಮನ್ನ ಕಾಡುತ್ತಿದಿಯಾ? ಈ ಕುತೂಹಲ ತಿಳಿದುಕೊಳ್ಳಲು ಮುಂದೆ ಓದಿ.....

    1000 ಕೋಟಿ ಗಳಿಸಿದ 'ದಂಗಲ್'

    1000 ಕೋಟಿ ಗಳಿಸಿದ 'ದಂಗಲ್'

    ಅಮೀರ್ ಖಾನ್ ಅಭಿನಯದ 'ದಂಗಲ್' ಸಿನಿಮಾ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ 1000 ಕೋಟಿ ಗಳಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಹೀಗಾಗಿ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರವನ್ನ ಫಾಲೋ ಮಾಡ್ತಿದೆ.['ದಂಗಲ್' ನಂತರ ಹೊಸ ಸಾಹಸಕ್ಕೆ ರೆಡಿಯಾದ ಅಮೀರ್ ಖಾನ್ ]

    ಭಾರತದ ಎರಡನೇ ಸಿನಿಮಾ

    ಭಾರತದ ಎರಡನೇ ಸಿನಿಮಾ

    'ದಂಗಲ್' 1000 ಕೋಟಿ ದಾಖಲೆ ಮಾಡಿದ ಭಾರತದ ಎರಡನೇ ಚಿತ್ರ. ರಾಜಮೌಳಿ ನಿರ್ದೇಶನದ 'ಬಾಹುಬಲಿ-2' 1000 ಕೋಟಿ ಗಳಿಸಿದ ಮೊದಲ ಚಿತ್ರ.['ಬಾಹುಬಲಿ'ಯ 1000 ಕೋಟಿ ದಾಖಲೆಯನ್ನ ಬೆನ್ನತ್ತಿ ಹೊರಟಿರುವ 'ದಂಗಲ್' ]

    ಬಾಲಿವುಡ್ ನ ಮೊದಲ ಸಿನಿಮಾ

    ಬಾಲಿವುಡ್ ನ ಮೊದಲ ಸಿನಿಮಾ

    ಬಾಲಿವುಡ್ ಇಂಡಸ್ಟ್ರಿಯಲ್ಲಿ ಇದುವರೆಗೂ ಅತಿ ಹೆಚ್ಚು ಗಳಿಸಿದ ಸಿನಿಮಾಗಳ ಪೈಕಿ ಅಮೀರ್ ಖಾನ್ ಅಭಿನಯದ 'ದಂಗಲ್' ಚಿತ್ರ ಮೊದಲ ಸ್ಥಾನದಲ್ಲಿದೆ. ಈಗ 'ದಂಗಲ್' ಚಿತ್ರದ ಮೊತ್ತ 1000 ಕೋಟಿ ಗಳಿಸಿದೆ. ಎರಡನೇ ಸ್ಥಾನದಲ್ಲಿರುವ ಅಮೀರ್ ಖಾನ್ ಅಭಿನಯದ 'ಪಿ.ಕೆ' 792 ಕೋಟಿ ಕಲೆಕ್ಷನ್ ಮಾಡಿದೆ. ಮೂರನೇ ಸ್ಥಾನದಲ್ಲಿರುವ ರಾಜಮೌಳಿ ನಿರ್ದೇಶನದ 'ಬಾಹುಬಲಿ ಭಾಗ-1', 650 ಕೋಟಿ ಗಳಿಸಿದೆ.

    'ದಂಗಲ್' ಕಲೆಕ್ಷನ್ ಭಾರತದಲ್ಲಿ ಎಷ್ಟಿತ್ತು?

    'ದಂಗಲ್' ಕಲೆಕ್ಷನ್ ಭಾರತದಲ್ಲಿ ಎಷ್ಟಿತ್ತು?

    2016 ರಲ್ಲಿ ಬಿಡುಗಡೆಯಾಗಿದ್ದ 'ದಂಗಲ್' ಸಿನಿಮಾ ಭಾರತದಲ್ಲಿ 387 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದರೇ, ಒಟ್ಟು 542 ಕೋಟಿ ಕಲೆಕ್ಷನ್ ಮಾಡಿತ್ತು. ಮತ್ತು ವರ್ಲ್ ವೈಡ್ ಸುಮಾರು 780ಕ್ಕೂ ಹೆಚ್ಚು ಕೋಟಿ ಗಳಿಸಿತ್ತು.

    ಮತ್ತೆ ಚೀನಾದಲ್ಲಿ 200 ಕೋಟಿ

    ಮತ್ತೆ ಚೀನಾದಲ್ಲಿ 200 ಕೋಟಿ

    ಇದೀಗ, ಒಂದು ವರ್ಷದ ಬಳಿಕ ಚೀನಾದಲ್ಲಿ 'ದಂಗಲ್' ಸಿನಿಮಾ ತೆರೆಕಂಡಿದ್ದು, ಮತ್ತೆ ತನ್ನ ಅಕೌಂಟ್ ಗೆ 289 ಕೋಟಿ ತುಂಬಿಕೊಂಡಿದೆ. ಈ ಮೂಲಕ 780 ಕೋಟಿ ಇದ್ದ ಒಟ್ಟಾರೆ ಕಲೆಕ್ಷನ್ ಈಗ 1000 ಕೋಟಿ ಗಡಿ ದಾಟಿದೆ.[ಚೀನಾದಲ್ಲಿ 'ಪಿ.ಕೆ' ದಾಖಲೆ ಉಡೀಸ್: ಹೊಸ ಇತಿಹಾಸ ಸೃಷ್ಟಿಸಿದ 'ದಂಗಲ್' ]

    1500 ಕೋಟಿ ನಿರೀಕ್ಷೆಯಿದೆ!

    1500 ಕೋಟಿ ನಿರೀಕ್ಷೆಯಿದೆ!

    ಸದ್ಯ, ಚೀನಾದಲ್ಲಿ 'ದಂಗಲ್' ಚಿತ್ರಕ್ಕೆ ಅತ್ಯುತ್ತಮ ರೆಸ್ ಪಾನ್ಸ್ ಸಿಕ್ಕಿದ್ದು, ಮತ್ತಷ್ಟು ಹೆಚ್ಚಾಗಲಿದೆ. ಮತ್ತೊಂದೆಡೆ 'ಬಾಹುಬಲಿ' ಚಿತ್ರ 1500 ಕೋಟಿಯತ್ತ ಹೆಜ್ಜೆ ಹಾಕಿದ್ದು, 'ದಂಗಲ್' ಚಿತ್ರವೂ 'ಬಾಹುಬಲಿ'ಯನ್ನ ಫಾಲೋ ಮಾಡುತ್ತಿದೆ.['ಮಹಾಭಾರತ'ದಲ್ಲಿ ಅಮೀರ್ ಖಾನ್: ರಾಜಮೌಳಿ ಎಕ್ಸ್ ಕ್ಲೂಸಿವ್ ಮಾಹಿತಿ ]

    English summary
    Aamir Khan’s Dangal has crossed the 1000 crore mark worldwide and has now become the second Indian film to do so after Baahubali 2. The film is enjoying a great buzz in China and hence has now managed to become the first ever Bollywood film to achieve this feat.
    Monday, May 15, 2017, 9:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X