twitter
    For Quick Alerts
    ALLOW NOTIFICATIONS  
    For Daily Alerts

    ಜೈಲು ಶಿಕ್ಷೆಯ ಭೀತಿಯಲ್ಲಿ ಸಲ್ಮಾನ್ ಖಾನ್

    |

    ನವದೆಹಲಿ, ಜ. 9: ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಹೊತ್ತಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ವಿರುದ್ಧದ ಪ್ರಕರಣದ ತೀರ್ಪು ಜ. 18ರಂದು ಹೊರಬೀಳಲಿದೆ. ಈ ಪ್ರಕರಣದಲ್ಲಿ ಸಲ್ಮಾನ್ ದೋಷಿಯೆಂದು ಸಾಬೀತಾದರೆ ಅವರಿಗೆ ಏಳು ವರ್ಷ ಜೈಲು ಶಿಕ್ಷೆಯಾಗಲಿದೆ.

    ಪ್ರಕರಣದ ಅಂತಿಮ ಹಂತದ ವಿಚಾರಣೆ ಡಿ. 9ರಂದು ಆರಂಭವಾಗಿತ್ತು. ಸೋಮವಾರ ಪ್ರಕರಣದ ವಾದ, ಪ್ರತಿವಾದಿಗಳ ವಿಚಾರಣೆ ಆಲಿಸಿದ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ನ್ಯಾ. , ಜ. 18ರಂದು ಪ್ರಕರಣದ ತೀರ್ಪು ನೀಡುವುದಾಗಿ ಘೋಷಿಸಿದರಲ್ಲದೆ, ನಟ ಸಲ್ಮಾನ್ ಖಾನ್ ಅವರಿಗೆ ಅಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದರು.[ಕಳೆದ ವರ್ಷ ಸಲ್ಲು ಆದಾಯ ಬರೋಬ್ಬರಿ 270 ಕೋಟಿ ರು. !]

    Verdict in Salman Khan case on January 18

    ಏನಿದು ಪ್ರಕರಣ?: 1999ರಲ್ಲಿ ಸಲ್ಮಾನ್ ಖಾನ್ ಅವರ ವಿರುದ್ಧ ಈ ಪ್ರಕರಣ ದಾಖಲಾಗಿತ್ತು. ಅವರಿಗೆ ನೀಡಲಾಗಿದ್ದ ಶಸ್ತ್ರಾಸ್ತ್ರ ಲೈಸನ್ಸ್ ನವೀಕರಿಸದೇ ಅವರು ತಮ್ಮಲ್ಲಿ ಕೆಲವು ಶಸ್ತ್ರಾಸ್ತ್ರಗಳನ್ನು ಹೊಂದಿದ್ದರಿಂದಾಗಿ ಅವರ ವಿರುದ್ಧ ಜೋಧ್ ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆಗಿನಿಂದ ಈ ಪ್ರಕರಣದ ವಿಚಾರಣೆ ನಡೆಯುತ್ತಿತ್ತು.

    English summary
    A Jodhpur court on Monday fixed January 18 for pronouncing the verdict in the Arms Act case against Salman Khan and asked the actor to be present on that date.
    Monday, January 9, 2017, 18:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X