ಐಶ್ವರ್ಯಾಳಿಗೆ ಹುಟ್ಟುವ ಮಗು ರಹಸ್ಯ ಬಹಿರಂಗ

By Mahesh

ಬುಕ್ಕಿಗಳ ಕಣ್ಣು ಐಶ್ವರ್ಯ ರೈ ಹೊಟ್ಟೆ ಮೇಲೆ ಬಿದ್ದು, ಹುಟ್ಟಲಿರುವ ಮಗು ಗಂಡೋ ಹೆಣ್ಣೋ ಎಂಬ ಬಗ್ಗೆ ಬೆಟ್ಟಿಂಗ್ ಶುರು ಮಾಡಿದ ಮೇಲೆ ಮೂಡಿದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ಇತ್ತೀಚೆಗೆ ಐಶ್ವರ್ಯಾ ತಮಗೆ ಹುಟ್ಟುವ ಮಗುವಿನ ಗುಟ್ಟು ರಟ್ಟು ಮಾಡಿದ್ದಾರೆ.

ಬಸರಿ ಐಶ್ವಯಾ ಬಯಕೆ ಈಡೇರಿಸಲು ಅವರ ತಾಯಿ ಕಾಂಜೀವರಂ ಸೀರೆಯೊಂದನ್ನು ತಂದಿದ್ದರಂತೆ. ಹಳದಿ ಹಾಗೂ ಚಿನ್ನದ ಮೆರಗು ಪಡೆದಿದ್ದ ಆ ಭರ್ಜರಿ ಸೀರೆ ಕಂಡ ಐಶ್ವರ್ಯಾ 'ಇದು ನನ್ನ ಮಗಳು ದೊಡ್ಡವಳಾದ ಮೇಲೆ ಉಡಲು ನೀಡುವೇ' ಎಂದಳಂತೆ.

ಗಂಡು ಸಂತಾನಕ್ಕಾಗಿ ಹಂಬಲಿಸುತ್ತಿದ್ದೇವೆ ಎಂದು ಅಭಿಷೇಕ್ ಬಚ್ಚನ್ ಹೇಳಿಕೊಂಡಿದ್ದ. ಆದರೆ, ಐಶ್ ಮಾತ್ರ ಹೆಣ್ಣು ಸಂತಾನದ ಬಯಕೆಯಲ್ಲಿದ್ದಾರೆ.

ಗಂಡು ಸಂತಾನಕ್ಕಾಗಿ ಪ್ರಾಚೀನ ಆಯುರ್ವೇದ ಪದ್ಧತಿಯಂತೆ ವಿಶೇಷ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೂ ಹಬ್ಬಿತ್ತು. ಸೀರೆ ಉಡುಗೊರೆ ವಿಷ್ಯ ಬಹಿರಂಗವಾದ ಮೇಲೆ ಐಶ್ವರ್ಯಾಳಿಗೆ ಹುಟ್ಟುವುದು ಹೆಣ್ಣು ಮಗು ಎಲ್ಲರಿಗೂ ಅನ್ನಿಸತೊಡಗಿದೆ.

ಐಶ್ವರ್ಯಾಗೆ ಹುಟ್ಟುವುದು ಟೆಸ್ಟ್ ಟ್ಯೂಬ್ ಬೇಬಿ ಎಂದು ಮಾಡೆಲ್ ಕಿಡಿ ಹಾರಿಸಿದ್ದಳು. ಬಾಲಿವುಡ್ ನಲ್ಲಿ ಐಶ್ವರ್ಯಾ ರೈ ಗರ್ಭಿಣಿಯಾದ ಮೇಲೆ ನಾನಾ ವದಂತಿಗಳು, ಶೂಟಿಂಗ್ ಏರುಪೇರು, ಬೇಕಾದ್ದು, ಬೇಡದ್ದು ಗಾಸಿಪ್ ಗಳು ಹುಟ್ಟಿಕೊಂಡಿತ್ತು.

ಹೆಣ್ಣೋ, ಗಂಡೋ ಒಟ್ಟಿನಲ್ಲಿ ನಾನು ಮತ್ತೆ ತಾತಾ ಆಗುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ಬಿಗ್ ಬಿ ಸಂಭ್ರಮ ಆಚರಿಸಿದ್ದರು. ಒಟ್ಟಿನಲ್ಲಿ ಐಶ್ ಗೆ ಹುಟ್ಟುವ ಮಗು ಎಲ್ಲರ ಕುತೂಹಲವನ್ನು ಕಾಯ್ದುಕೊಂಡಿದೆ. ಅಕ್ಟೋಬರ್ ತಿಂಗಳಿನಲ್ಲಿ ಎಲ್ಲಕ್ಕೂ ಉತ್ತರ ಸಿಗಲಿದೆ.

More from Filmibeat

English summary
Recenty Aishwarya and Abhishek gave a statement that they really love to have a daughter. Aishwarya Rai also revealed that she wish to gift a saree to her baby daughter.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X