ಹೈಕೋರ್ಟ್ ತೀರ್ಪಿಗೆ ಬಾಲಿವುಡ್ ಜಿಂದಾಬಾದ್
ರಾಮಜನ್ಮಭೂಮಿ ಮತ್ತು ಬಾಬ್ರಿ ಮಸೀದಿ ವಿವಾದ ತೀರ್ಪು ಹೊರಬೀಳುವುದಕ್ಕೂ ಮುನ್ನ ಬಾಲಿವುಡ್ ತಾರೆಗಳು ಶಾಂತಿಮಂತ್ರ ಜಪಿಸಿದ್ದರು. ತೀರ್ಪು ಯಾರ ಪರವಾಗಿ ಬಂದರೂ ಜನತೆ ಶಾಂತಿ, ಸೌಹಾರ್ದತೆಯನ್ನು ಕಾಪಾಡಬೇಕು ಎಂದು ವಿನಂತಿಸಿಕೊಂಡಿದ್ದರು. ಅಲಹಾಬಾದ್ ಹೈಕೋರ್ಟ್ ಗುರುವಾರ ತೀರ್ಪನ್ನು ಪ್ರಕಟಿಸಿದೆ. ಬಾಲಿವುಡ್ ತಾರೆಗಳು ತೀರ್ಪಿಗೆ ಜಿಂದಾಬಾದ್ ಹೇಳಿದ್ದಾರೆ.
ಮಂದಿರ ಮತ್ತು ಮಸೀದಿ ಅಕ್ಕಪಕ್ಕದಲ್ಲೇ ನಿರ್ಮಿಸಬೇಕು ಎಂಬ ತೀರ್ಪನ್ನು ತಾವು ಮುಕ್ತಕಂಠದಿಂದ ಸ್ವಾಗತಿಸುತ್ತಿರುವುದಾಗಿ ಖ್ಯಾತ ಗೀತ ಸಾಹಿತಿ ಜಾವೇದ್ ಅಕ್ತರ್ ತಿಳಿಸಿದ್ದಾರೆ. ಚಿತ್ರ ನಿರ್ಮಾಪಕ ಶೇಖರ್ ಕಪೂರ್ ಅವರು ಟ್ವೀಟ್ ಮಾಡಿದ್ದು ತೀರ್ಪಿನ ಬಗ್ಗೆ "ನ್ಯಾಯಾಲಯಗಳು ಈ ಕೇಸನ್ನು ಅಚ್ಚುಕಟ್ಟಾಗಿ ನಿಭಾಯಿಸಿವೆ" ಎಂದಿದ್ದಾರೆ.
ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಟ್ವೀಟ್ ಮಾಡುತ್ತಾ, ಇಂತಹ ಸಂದರ್ಭದಲ್ಲಿ ಒಗ್ಗಟ್ಟು ಸಂಯಮವನ್ನು ಪ್ರದರ್ಶಿಸಿದ್ದಕ್ಕೆ ಭಾರತದ ಪ್ರಜೆಗಳಿಗೆ ಧನ್ಯವಾದಗಳು. ಈ ತೀರ್ಪನ್ನು ನೀವು ಒಪ್ಪುತ್ತೀರೋ ಇಲ್ಲವೋ ಅದು ಮುಖ್ಯವಲ್ಲ. ಅಹಿಂಸೆ ನಿಮ್ಮ ಧ್ವನಿಯಾಗಲಿ. ಶಾಂತಿ, ಸಂಯಮದಿಂದ ಇರಿ ಎಂದಿದ್ದಾರೆ.


Click it and Unblock the Notifications











