ಕೊಲಾವರಿ ಹಾಡು: ರಾಮ್ ಗೋಪಾಲ್ ವರ್ಮಾ ಪ್ರತಿಕ್ರಿಯೆ
ಧನುಷ್ ಬರೆದು ಹಾಡಿರುವ ತಮಿಳು ಚಿತ್ರ '3' ಹಾಡು 'ಕೊಲಾವರಿ ಡಿ...' ಕೇವಲ ಕಾಲಿವುಡ್ ನಲ್ಲಿ ಮಾತ್ರವಲ್ಲದೇ ಬಾಲಿವುಡ್ ಹಾಗೂ ಇಡೀ ದೇಶದ ತುಂಬಾ ಸಂಚಲವನ್ನು ಉಂಟುಮಾಡಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್, ಅಭಿಷೇಕ್ ಬಚ್ಚನ್, ಖುಷ್ ಬೂ, ಹಾಗೂ ಸಾಕಷ್ಟು ಘಟಾನುಘಟಿಗಳು ಈ ಹಾಡಿನ ಬಗ್ಗೆ ಬಹಳಷ್ಟು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಆದರೆ ಸಾಕಷ್ಟು ಜನರಿಗೆ ಈ ಹಾಡಿನ ಈ ಪರಿ ಜನಪ್ರಿಯತೆ ಬಗ್ಗೆ ಅಸಮಾಧಾನ ಇದೆ. ತುಂಬಾ ಮಂದಿ ಅದು ಅಷ್ಟೇನು ಚೆನ್ನಾಗಿಲ್ಲ, ಎಂದಿದ್ದಾರೆ. ಜೊತೆಗೆ ಸಾಕಷ್ಟು ಮಂದಿಯಿಂದ 'ಈ ಹಾಡು ಸರಳವಾಗಿದೆ ಅಷ್ಟೇ. ಅಂತಹ ವಿಶೇಷವೇನೂ ಇಲ್ಲ, ಬೇರೆ ಭಾಷೆಯಲ್ಲಿ ಈಗಾಗಲೇ ಇಂತಹ ಹಾಡುಗಳು ಬೇಕಾದಷ್ಟು ಬಂದಿವೆ. ತಮಿಳು ಸಿನಿಮಾಗಳಲ್ಲಿ ಹೊಸತಷ್ಟೆ' ಎಂದಿದ್ದಾರೆ.
ಖ್ಯಾತ ಬಾಲಿವುಡ್ ನಿರ್ದೇಶಕ, ರಾಮ್ ಗೋಪಾಲ್ ವರ್ಮಾಗೆ ಈ ಹಾಡಿನ ಜನಪ್ರಿಯತೆ ಬಗ್ಗೆ ಗೊಂದಲ ಉಂಟಾಗಿದೆಯಂತೆ. ಈ ಕುರಿತು ಅವರು "ನನಗೆ ಕೊಲಾವರಿ ಹಾಡು ಯಾಕೆ ಇಷ್ಟವಾಯ್ತು ಎಂಬುದರ ಬಗೆಗೇ ಗೊಂದಲ ಉಂಟಾಗಿದೆ. ನಾನೇ ಇಷ್ಟಪಟ್ಟೆನೋ ಅಥವಾ ಎಲ್ಲರೂ ಇಷ್ಟಪಡುತ್ತಿದ್ದಾರೆ ಅಂತ ಇಷ್ಟವಾಗುತ್ತಿದೆಯೋ?" ಎಂದು ಪ್ರತಿಕ್ರಿಯೆ ನೀಡಿದ್ದಾರೆ. (ಒನ್ ಇಂಡಿಯಾ ಕನ್ನಡ)


Click it and Unblock the Notifications











