ಬಿಕಿನಿಗೆ ಮೇಲೆ ಟೂ ಬಿಟ್ಟ ಮಿನಿಷಾ ಲಾಂಬಾ

By Rajendra

ಹಾಲುಗೆನ್ನೆಯೆ ಸುಂದರಿ ಬಾಲಿವುಡ್ ತಾರೆ ಮಿನಿಷಾ ಲಾಂಬಾ ನೆನಪಿರಲೇಬೇಕಲ್ವಾ? 'ಕಿಡ್ನಾಪ್' ಖ್ಯಾತಿಯ ಈ ಬೆಡಗಿಯನ್ನು ನಿದ್ರೆ ಮಾತ್ರೆ ನುಂಗಿದರೂ ಮರೆಯಲು ಸಾಧ್ಯವೇ! ಇನ್ನೂ ಯಾರೂ ಈಕೆಯನ್ನು ಕಿಡ್ನಾಪ್ ಮಾಡದಿರುವುದೇ ದೊಡ್ಡ ವಿಷಯ. ಮೊದಲ ಚಿತ್ರದಲ್ಲೇ ಸಾಕಷ್ಟು ಬಿಚ್ಚಮ್ಮಳ್ಳಾಗಿ ಕಾಣಿಸಿಕೊಂಡಿದ್ದ ಈಕೆ ಈಗ ಎರಡನೇ ಚಿತ್ರದ ಹೊತ್ತಿಗೆ ಬುದ್ಧಿ ಬಂದಂತೆ ಮಾತನಾಡತೊಡಗಿರುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

ಅಭಿನಯಕ್ಕಿಂತಲೂ 'ಐಟಂ' ಪ್ರದರ್ಶನಕ್ಕೆ ಬಾಲಿವುಡ್‌ನಲ್ಲಿ ಮಣೆಹಾಕುತ್ತಾರೆ. ಆದರೆ ಮಿನಿಷಾ ಮಾತ್ರ ಬಿಕಿನಿಗಿಂತ ಅಭಿನಯವೇ ಮುಖ್ಯ ಎಂಬ ಲಾಜಿಕ್ಕಿಗೆ ಮರಳಿದ್ದಾರೆ. ಹಾಗಾಗಿ ಇನ್ನುಮುಂದೆ ಡೈರೆಕ್ಟರ್-ಪ್ರೊಡ್ಯೂಸರ್‌ಗಳು ಕಾಡಿ ಬೇಡಿದರೂ ಬಿಲ್ ಕುಲ್ ಬಿಕಿನಿ ಧರಿಸುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದು ಕೇಳಿ ಬಾಲಿವುಡ್ ಕಂಗಾಲಾಗಿರಬಹುದು!

ಈಗ ಚಿತ್ರೀಕರಣವಾಗುತ್ತಿರುವ "ಹಮ್ ತುಮ್ ಔರ್ ಶಬನಾ" ಎಂಬ ರೋಮ್ಯಾಂಟಿಕ್ ಕಾಮಿಡಿ ಚಿತ್ರಕ್ಕಾಗಿ ಡೈರೆಕ್ಟರ್ ಮಿನಿಷಾಗೆ ಬಿಕಿನಿ ಹಾಕಿಕೊಳ್ಳುವಂತೆ ಹೇಳಿದ್ದರು. ಬ್ಯೂಟಿ ಪೇಜೆಂಟ್ ಸ್ಪರ್ಧೆಯ ಕಥೆ ಹೊಂದಿರುವುದರಿಂದ ಬಿಕಿನಿ ಚಿತ್ರಕ್ಕೆ ಅಗತ್ಯ ಎಂದು ಡೇರೆಕ್ಟರ್ ಹೇಳಿದ್ದರೂ ಇದಕ್ಕೆ ಸುತಾರಾಂ ಒಪ್ಪಿಲ್ಲವಂತೆ ಮಿನಿಷಾ. ಈ ಚಿತ್ರದಲ್ಲಿ ತುಷಾರ್ ಕಪೂರ್-ಶ್ರೇಯಸ್ ತಲಪಾಡೆ ಜೊತೆ ಈ ಮಿನಿಷಾ ಕೂಡ ಇದ್ದಾರೆ.

ಇದೀಗ ಬುದ್ಧಿ ನೆಟ್ಟಗಾಗಿ ಬಿಕಿನಿ ಹಾಕುವುದಿಲ್ಲ ಎಂದು ಮುನಿಸಿಕೊಂಡಿರುವ ಮಿನಿಷಾ ಮೇಲೆ ಪ್ರೇಕ್ಷಕರು ಮುನಿಸಿಕೊಳ್ಳದಿದ್ದರೆ ಸಾಹು. ಬಿಕನಿ ಇಲ್ಲದ ಈಕೆಯನ್ನು ಜನರು ಚಿತ್ರದಲ್ಲಿ ಗುರುತಿಸದಿದ್ದರೆ ಅದಕ್ಕೆ ಮಿನಷಾಳೇ ಜವಾಬ್ದಾರಿ ಎಂದು ಬಾಲಿವುಡ್ ಮಂದಿ ಕುಹಕವಾಡಿದ್ದಾರಂತೆ. ರಾಮ ರಾಮಾ..!

More from Filmibeat

English summary
Bollywood Actress Minissha Lamba has rejected to wear bikini in the movie "Hum Thum Aur Shabna". Even though it is required for the character as director told, she got angry and told no, i can't. This is became hot news in bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X