ಸಲ್ಲೂ ಕೈಫ್ ಒಂದಾಗೋಣ ಬಾ ಐಟಂ ಸಾಂಗ್ಸ್
ಇತ್ತೀಚೆಗೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಸುದ್ದಿ ಹೊತ್ತುತರುವ ಎಲ್ಲಾ ಮಾಧ್ಯಮಗಳ ಗಾಸಿಪ್ ಕಾಲಂನಲ್ಲಿ ಪ್ರಮುಖ ಸಮಾಚಾರವಾಗಿ ಹೋಗಿದ್ದ ಸಲ್ಮಾನ್ ಕತ್ರೀನಾ ಬ್ರೇಕ್ ಅಪ್ ಗೆ ಈಗ ಹೊಸ ತಿರುವು ಕಂಡಿದೆ. ಸಲ್ಲೂ ಕೈಫ್ ಜೋಡಿ ಮತ್ತೆ ಒಂದಾಗಿದ್ದು, ಒಟ್ಟಿಗೆ ಐಟಂ ಸಾಂಗ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಸಲ್ಲೂನ ಕೈ ಬಿಟ್ಟೆ ಎಂದು ಗೋಳೋ ಎಂದು ಕಣ್ಣೀರಿಟ್ಟಿದ್ದ ಕೊಕ್ಕರೆ ಕಾಲಿನ ಸುಂದರಿ, ಮಾಧ್ಯಮಗಳ ಮೇಲೆ ಹರಿಹಾಯ್ದು ನಮ್ಮ ಖಾಸಗಿ ವಿಷಯಕ್ಕೆ ತಲೆ ಹಾಕಬೇಡಿ ಎಂದಿದ್ದು ಆಯ್ತು. ಅತ್ತ ಸಲ್ಲೂ ಕೂಡಾ ಬ್ರೇಕ್ ಅಪ್ ವಿಷಯವನ್ನು ರಿಯಾಲಿಟಿ ಷೋ ಸೇರಿದಂತೆ ಎಲ್ಲೆಡೆ ಹಾಸ್ಯಾಸ್ಪದ ವಿಷಯವನ್ನಾಗಿಸಿಬಿಟ್ಟ.
ಫರ್ಹಾ ಖಾನ್ ನಿರ್ದೇಶನದ ತೀಸ್ ಮಾರ್ ಖಾನ್ ಚಿತ್ರದಲ್ಲಿ ಈ ಖ್ಯಾತ ಜೋಡಿ ನೃತ್ಯಮಾಡಲಿದ್ದಾರೆ. ಈ ಹಾಡಿನಲ್ಲಿ ನಾಯಕ ಅಕ್ಷಯ್ ಕೂಡಾ ಕಾಣಿಸಿಕೊಳ್ಳಲಿದ್ದಾರಂತೆ. ಈಗ ಇಬ್ಬರೂ ಮುನಿಸಿಕೊಂಡಿರುವುದರಿಂದ ಕುಣಿತದ ಗತಿ ಏನಾಗುತ್ತದೆಯೋ ಎಂದು ಫರ್ಹಾ ಖಾನ್ ಚಿಂತಿತರಾಗಿದ್ದಾರೆ.
ಈ ಐಟಂ ಸಾಂಗ್ಸ್ ಮೂಲಕ ಸಲ್ಲೂ ಕೈಫ್ ಬ್ರೇಕ್ ಅಪ್ ಗೆ ಪ್ಯಾಚ್ ಅಪ್ ಮಾಡುವ ಜವಾಬ್ದಾರಿಯನ್ನು ಸ್ವಯಂ ಪ್ರೇರಣೆಯಿಂದ ಫರ್ಹಾ ವಹಿಸಿಕೊಂಡಿದ್ದಾರೆ. ಆದರೆ, ಬರೀ ಹಾಡಿ ಕುಣಿದು ನಲಿದು ಮತ್ತೆ ಕಿತ್ತಾಟ ಶುರು ಮಾಡುವುದಿಲ್ಲ ಎಂಬ ಗ್ಯಾರಂಟಿ ಏನು ಬಾಲಿವುಡ್ ನ ಮಂದಿ ಪ್ರಶ್ನಿಸುತ್ತಾರೆ. ಇದಕ್ಕೆ ಕಾಲವೆ ಉತ್ತರಿಸಬೇಕು.ದಬಾಂಗ್ ಸಲ್ಮಾನ್ ಎದುರು ನಿಂತು ಸಂಧಾನ ಮಾಡಲು ಗಂಡೆದೆ ಬೇಕೆ ಬೇಕು.


Click it and Unblock the Notifications











