ಸಲ್ಮಾನ್ ಖಾನ್ ರೇಟು ರು.50 ಕೋಟಿಗೆ ಏರಿಕೆ

By Rajendra

ಬಾಲಿವುಡ್ ನಟ ಸಲ್ಮಾನ್ ಖಾನ್‌ಗೆ ಈಗ ಶುಕ್ರದೆಸೆ. ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಅಮೀರ್ ಖಾನ್ ಹಾಗೂ ಶಾರುಖ್ ಖಾನ್ ಸಂಭಾವನೆಗೆ ಹತ್ತಿರ ಹತ್ತಿರ ಸುಳಿದಿದ್ದಾರೆ ಸಲ್ಲು. 'ದಬಾಂಗ್' ಹಾಗೂ 'ರೆಡಿ' ಚಿತ್ರಗಳು ಬಾಕ್ಸಾಫೀಸಲ್ಲಿ ಗೆದ್ದ ಬಳಿಕ ಸಲ್ಲು ತಮ್ಮ ಸಂಭಾವನೆಯನ್ನು ರು.50 ಕೋಟಿಗೆ ಏರಿಸಿಕೊಂಡಿದ್ದಾರೆ.

ಈ ಎರಡೂ ಚಿತ್ರಗಳು ಹಿಟ್ ಆಗುವುದಕ್ಕೂ ಮುನ್ನ ಸಲ್ಲು ಆಗೂ ಹೀಗೂ ರು.40 ಕೋಟಿಗೆ ಅಡ್ಜೆಸ್ಟ್ ಮಾಡಿಕೊಳ್ಳುತ್ತಿದ್ದರು. ಈಗ ಸಕ್ಸಸ್ ಅಲೆಯಲ್ಲಿ ತೇಲುತ್ತಿರುವ ಸಲ್ಮಾನ್ ರು.50 ಕೋಟಿ ಮಡಗಿ ಆಮೇಲೆ ಮಾತಾಡಿ ಅನ್ನುತ್ತಿದ್ದಾರೆ. ಸಲ್ಲು ಮತ್ತೊಂದು ಒಳ್ಳೆ ಕೆಲಸವನ್ನೂ ಮಾಡಿದ್ದಾರೆ.

ತಮ್ಮ ಸಂಭಾವನೆಯ ಜೊತೆಗೆ ಚಲನಚಿತ್ರ ಕಾರ್ಮಿಕರ, ತಾಂತ್ರಿಕ ಬಳಗದ ಸಂಭಾವನೆಯನ್ನೂ ಹೆಚ್ಚಿಸಿ ಎಂದು ಡಿಮ್ಯಾಂಡ್ ಮಾಡಿದ್ದಾರೆ. ತಮ್ಮ ಮುಂದಿನ ಚಿತ್ರಗಳ ನಿರ್ದೇಶಕರು ನಿರ್ಮಾಪಕರಿಗೆ ಈ ಸಲಹೆ ಸೂಚನೆಗಳನ್ನು ಪಾಲಿಸುವಂತೆ ಆಜ್ಞಾಪಿಸಿದ್ದಾನೆ.

ಈ ಕಾಲದಲ್ಲಿ ಯಾರ್ರಿ ಮಾಡ್ತಾರೆ ಇಷ್ಟೆಲ್ಲಾ. ತಮಗೇಕೆ ಊರ ಉಸಾಬರಿ ಎಂದು ಸುಮ್ಮನಾಗುವವರೆ ಅಧಿಕ. ಆದರೆ ಸಲ್ಲು ಮಾತ್ರ ಕಾರ್ಮಿಕರ ಸಂಬಳ ಜಾಸ್ತಿ ಮಾಡಿ ಎಂದು ಆಗ್ರಹಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ ಸಲ್ಲು ಮೇಲೆ ಹಾಕುವ ಬಂಡವಾಳಕ್ಕೆ ಮೋಸ ಏನು ಇಲ್ಲ ಎನ್ನುತ್ತವೆ ಬಾಲಿವುಡ್ ಮೂಲಗಳು. (ಏಜೆನ್ಸೀಸ್)

More from Filmibeat

English summary
Riding on the back-to-back success of his films Dabangg and Ready, the actor Salman Khan has reportedly hiked his fee to Rs.50 crore. Sources said that Salman has been charging only Rs.40 crore per film till date.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X