ಮೊರಾನಿ ಜೊತೆ ಬರೀ ಪರ್ಸನಲ್ ಕನೆಕ್ಷನ್: ಶಾರುಖ್

2ಜಿ ಹಗರಣಕ್ಕೆ ಸಂಬಂಧಿಸಿ ಜೈಲು ಸೇರಿರುವ ಆರೋಪಿಗಳ ಸಾಲಿಗೆ ಸಿನೆಯುಗ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ನಿರ್ದೇಶಕ, ಶಾರುಖ್ ಅವರ ಗೆಳೆಯ ಕರೀಂ ವೊರಾನಿ ಸೋಮವಾರ(ಮೇ.30) ಹೊಸದಾಗಿ ಸೇರ್ಪಡೆಗೊಂಡರು.
ಡಿಬಿ ರಿಯಾಲ್ಟಿ ಸಂಸ್ಥೆಯಿಂದ ಡಿಎಂಕೆ ಒಡೆತನದ ಕಲೈಂಗ್ನರ್ ಟಿವಿಗೆ 200 ಕೋಟಿ ರು. ವರ್ಗಾವಣೆ ಮಾಡಲು ನೆರವು ನೀಡಿದ ಆರೋಪ ಮೊರಾನಿ ಮೇಲಿದೆ. ಕಲೈಂಗ್ನರ್ ಟಿವಿ ವಾಹಿನಿಯ ಒಡತಿಯಲ್ಲಿ ಒಬ್ಬರಾದ ಡಿಎಂಕೆ ಸಂಸದೆ ಕನ್ನಿಮೋಳಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಕಲೈಂಗ್ನರ್ ಟಿವಿಗೆ ಶಾರುಖ್ ಒಡೆತನದ ರೆಡ್ ಚಿಲ್ಲೀಸ್ ಎಂಟರ್ ಟೈನ್ಮೆಂಟ್ ಮೂಲಕ ಹರಿದಿದೆ ಎಂಬ ಆರೋಪವನ್ನು ಶಾರುಖ್ ತಳ್ಳಿ ಹಾಕಿದ್ದಾರೆ.
ಶಾರುಖ್ ಅವರ ಮುಂಬರುವ ಚಿತ್ರ ರಾ ಒನ್ ಚಿತ್ರಕ್ಕೆ ಮೊರಾನಿ ಸಹ ನಿರ್ಮಾಪಕರಾಗಿರುವ ಬಗ್ಗೆ ಪ್ರಶ್ನಿಸಿದರೆ, ಜೂಹಿ ಚಾವ್ಲ ಅಣ್ಣ ಸಂಜೀವ್ ಚಾವ್ಲಾ ಅನಾರೋಗ್ಯ ಪೀಡಿತರಾದ ಕಾರಣ ಅವರ ಸ್ಥಾನದಲ್ಲಿ ಮೊರಾನಿ ಸಹ ನಿರ್ಮಾಪಕರಾಗಿ ವ್ಯವಹಾರ ನಿರತರಾಗಿದ್ದರು ಅಷ್ಟೆ ಎಂದು ಕಿಂಗ್ ಖಾನ್ ಹೇಳುತ್ತಾರೆ.
ಕೆಕೆಆರ್ ಗೂ ಮೊರಾನಿಗೂ ಯಾವುದೇ ಸಂಬಂಧವಿಲ್ಲ. ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಮೂಲಕ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಷೇರು ಖರೀದಿಸಲು ಮೊರಾನಿ ಪ್ರಯತ್ನಪಟ್ಟಿದ್ದರು ಎಂಬ ಸುದ್ದಿ ಸುಳ್ಳು.ಈ ಬಗ್ಗೆ ಸುನಂದಾ ಅವರನ್ನು ಪ್ರಶ್ನಿಸಿ ಎಂದು ಪತ್ರಿಕಾಗೋಷ್ಠಿಯಲ್ಲಿ ಶಾರುಖ್ ಸ್ಪಷ್ಟನೆ ನೀಡಿದ್ದಾರೆ. ಮೊರಾನಿ ಪುತ್ರಿ ಜೊಯಾ ಅಭಿನಯದ ಮೊದಲ ಚಿತ್ರ ಆಲ್ವೇಸ್ ಕಭಿ ಕಭಿ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ನಿರ್ಮಿಸಿದ್ದು ಎಂಬುದು ಗಮನಾರ್ಹ.


Click it and Unblock the Notifications











