ಕಮಲ್ ಜೊತೆ ರೋಮಾನ್ಸ್ ಸೋನಾ ಬದಲಿಗೆ ದೀಪಿಕಾ

By Mahesh

ಕಮಲ್ ಹಾಸನ್ ಗೆ ಸೋನಾಕ್ಷಿ ಸಿನ್ಹಾ ಕೈ ಕೊಟ್ಟಿದ್ದಾರೆ. ಕಮಲ್ ಅವರ ವಿಶ್ವರೂಪಂ ಚಿತ್ರದಿಂದ ಸೋನಾಕ್ಷಿ ಹೊರಬಿದ್ದಿದ್ದಾರೆ. ಸೋನಾಕ್ಷಿ ಬದಲಿಗೆ ಬೆಂಗಳೂರು ಬೆಡಗಿ ದೀಪಿಕಾ ನಟಿಸುವ ಸಾಧ್ಯತೆಯಿದೆ.

ಸೋನಾಕ್ಷಿ ಬಿಟ್ಟು ಹೋದ ಸ್ಥಳವನ್ನು ದೀಪಿಕಾ ತುಂಬುವುದು ಇತ್ತೀಚೆಗೆ ಹೆಚ್ಚಾಗಿದೆ. ಕೆಎಸ್ ರವಿಕುಮಾರ್ ಅವರ ರಾಣಾ ಚಿತ್ರ ಹಾಗೂ ಕಮಲ್ ಹಾಸನ್ ರ ವಿಶ್ವರೂಪಂಗೆ ಸೋನಾಕ್ಷಿ ಮೊದಲ ಆಯ್ಕೆ ಯಾಗಿದ್ದರು. ಆದರೆ, ಈಗ ಬದಲಿಗೆ ದೀಪಿಕಾ ಆ ಸ್ಥಾನ ತುಂಬುತ್ತಿದ್ದಾರೆ.

ನನ್ನದೇನೂ ತಪ್ಪಿಲ್ಲ ನನ್ನ ಕಾಲ್ ಶೀಟ್ ಬಗ್ಗೆ ಮೊದಲೇ ಹೇಳಿದ್ದೆ. ಸಂಜಯ್ ಲೀಲಾ ಬನ್ಸಾಲಿ ಅವರ ರೌಡಿ ರಾಥೋಡ್ ಚಿತ್ರಕ್ಕೆ ಸಹಿ ಹಾಕಿದ್ದೇನೆ. ಅದರ ಶೂಟಿಂಗ್ ಶುರು ಆಗುತ್ತಿದೆ ಹಾಗಾಗಿ ಕಮಲ್ ಜೊತೆ ನಟಿಸಲು ಸಾಧ್ಯವಿಲ್ಲ ಎನ್ನುತ್ತಿದ್ದಾಳೆ ಸೋನಾಕ್ಷಿ.

ಆದರೆ, ಕಮಲ್ ರಂಥ ಹಿರಿಯ ನಟ(ಅನುಭವ ಹಾಗೂ ವಯಸ್ಸಿನಲ್ಲಿ)ರ ಜೊತೆ ನಟಿಸುತ್ತಿರುವುದು ನನ್ನ ಭಾಗ್ಯ. ಬೇರೆ ಎಲ್ಲಾ ಪ್ರಾಜೆಕ್ಟ್ ಬದಿಗೊತ್ತಿ ಈ ಚಿತ್ರದಲ್ಲಿ ನಟಿಸುವೆ. ಕಮಲ್ ಪತ್ನಿ ಪಾತ್ರದಲ್ಲಿ ಮಿಂಚುವ ಆಸೆ ಎಂದು ಸೋನಾಕ್ಷಿ ಹೇಳಿದ್ದರು.

ಜೂನ್ ಮೊದಲ ವಾರ ಆರಂಭವಾಗಬೇಕಿದ್ದ ವಿಶ್ವರೂಪಂ ಶೂಟಿಂಗ್, ನಿರ್ದೇಶಕ ಸೆಲ್ವರಾಘವನ್ ಅವರ ನಿರ್ಗಮನದಿಂದ ನಿಂತು ಹೋಗಿತ್ತು. ಆಮೇಲೆ ಸಕಲಕಲಾವಲ್ಲಭ ಕಮಲ್ ತಾವೇ ನಿರ್ದೇಶಕನ ಹೊಣೆ ಹೊತ್ತಿದ್ದರು.ಆದರೆ, ಚಿತ್ರೀಕರಣ ವಿಳಂಬವಾಗತೊಡಗಿದಾಗ ಸೋನಾಕ್ಷಿ, ಚಿತ್ರತಂಡದಿಂದ ಹೊರ ಬಿದ್ದಿದ್ದಾರೆ.

ರಜಿನಿಕಾಂತ್ ಜೊತೆ ರಾಣಾ, ಈಗ ಕಮಲ್ ಜೊತೆ ವಿಶ್ವರೂಪಂ ಡಬಲ್ ಧಮಾಕಾ ದೀಪಿಕಾ ಪಾಲಿಗೆ ಒದಗಿ ಬಂದಿದೆ. ಸೋನಾಕ್ಷಿ ಮಾತ್ರ ತನ್ನ ನಿರ್ಧಾರವೇ ಸರಿ ಎಂದು ತಲೆ ಎತ್ತಿ ನಡೆಯುತ್ತಿದ್ದಾಳಂತೆ.

More from Filmibeat

English summary
Bollywood actress Sonakshi Sinha snubs Kamal Hassan and walks out ot Vishwaroopam Movie. She is now busy with Sanjay Leela Bansali's Rowdy Rathod. According to sources Deepika Padukone is likely to replace Sonakshi in Vishwaroopam.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X