ಬಾಲಿವುಡ್ ತಾರೆ ಸೋನಂ ಕಪೂರ್ ಆಸ್ಪತ್ರೆಗೆ ದಾಖಲು

By Rajendra

ಮೊದಲ ಹೇಳಿಬಿಡುತ್ತೆನೆ ಇದು ಏಪ್ರಿಲ್ ಫೂಲ್ ಸುದ್ದಿಯಲ್ಲ! ನಿಜವಾಗಿಯೂ ಸೋನಂ ಕಪೂರ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಡಬಿಡದೆ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದೆ ಇದಕ್ಕೆ ಕಾರಣ ಎನ್ನಲಾಗಿದೆ. ಈ ಹಿಂದೆ ಇದೇ ರೀತಿ ಪುರುಸೊತ್ತಿಲ್ಲದಂತೆ ಚಿತ್ರೀಕರಣದಲ್ಲಿ ಭಾಗವಹಿಸಿ ಬಳಲಿ ಬೆಂಡಾಗಿ ಕರೀನಾ ಕಪೂರ್, ಪ್ರಿಯಾಂಕಾ ಚೋಪ್ರಾ ಹಾಗೂ ಕತ್ರಿನಾ ಕೈಫ್ ಆಸ್ಪತ್ರೆಗೆ ದಾಖಲಾಗಿದ್ದರು.

ತೀವ್ರವಾಗಿ ಸುಸ್ತಾಗಿರುವ ಸೋನಂ ಅವರು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. 'ಮೌಸಂ' ಹಾಗೂ 'ಪ್ಲೇಯರ್ಸ್' ಚಿತ್ರದಲ್ಲಿ ಅಭಿನಯಿಸುತ್ತಿರುವ ಸೋನಂ ಸಿಕ್ಕಾಪಟ್ಟೆ ಸಂಚಾರ ಮಾಡಿದ್ದೇ ಬಳಲಿಕೆ ಕಾರಣ ಎನ್ನುತ್ತವೆ ಮೂಲಗಳು. ಆದರೆ ಆಕೆಯ ಅಭಿಮಾನಿಗಳು ಗಾಬರಿ ಪಡುವಷ್ಟು ಸೀಸಿಯಸ್ಸಾಗಿ ಏನೂ ಆಗಿಲ್ಲ.

ಇನ್ನೇನು ಬಿಡುಗಡೆಗೆ ಸಿದ್ಧವಾಗಿರುವ 'ಥ್ಯಾಂಕ್ಯು' ಚಿತ್ರದ ಪ್ರಚಾರದಲ್ಲಿ ಸೋನಂ ಪಾಲ್ಗೊಳ್ಳಬೇಕಾಗಿದೆ. ಆದರೆ ಆಕೆ ಆಸ್ಪತ್ರೆಗೆ ದಾಖಲಾಗಿರುವುದು ಆ ಚಿತ್ರದ ನಿರ್ಮಾಪಕರನ್ನು ಕೊಂಚ ಆತಂಕಕ್ಕೆ ದೂಡಿದೆ. ಏನೇ ಇರಲಿ ಆರೋಗ್ಯವೇ ಮಹಾಭಾಗ್ಯ ಅಲ್ಲವೆ. ಸೋನಂ ಕಪೂರ್ ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸೋಣ.

More from Filmibeat

English summary
The news is doing the rounds that actress Sonam Kapoor was admitted to Kokilaben Hospital in Mumbai yesterday after she felt weak due to acute exhaustion. She has been travelling from one place to another shooting for her films Mausam and Players.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X