ಐಶ್ವರ್ಯಾ ರೈಗೆ ಸಿಸೇರಿಯನ್ ಹೆರಿಗೆ ಸಾಧ್ಯತೆ

Aishwarya Rai
ಜಗತ್ತೇ ಕಾತರದಿಂದ ಕಾಯುತ್ತಿರುವ ಕ್ಷಣ ಸಮೀಪಿಸುತ್ತಿದೆ. ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈ ಬಚ್ಚನ್ ಸದ್ಯದಲ್ಲೇ ತಾಯಿಯಾಗಲಿದ್ದಾರೆ. ಅವರ ಹೆರಿಗೆ ಸಹಜವೋ ಅಥವಾ ಸಿಸೇರಿಯನ್ ಎಂಬ ಬಗ್ಗೆ ಸಾಕಷ್ಟು ಚರ್ಚೆ ಇಂಡಿಯಾ ಗಡಿಯನ್ನೂ ಮೀರಿ ನಡೆಯುತ್ತಿದೆ. ಅದಕ್ಕೀಗ ಉತ್ತರ ದೊರೆತಿದೆ.

ಐಶೂ ಹೆರಿಗೆ ಸಿಸೇರಿಯನ್, ಸಹಜ ಅಲ್ಲ. ಅವರು ಮಗುವಿಗೆ ಜನ್ಮ ನೀಡಲಿರುವ ದಿನಾಂಕ 11-11-11. ಆಸ್ಪತ್ರೆ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆ. ಈ ಆಸ್ಪತ್ರೆ ಏಷ್ಯಾದಲ್ಲೇ ಅತಿ ದೊಡ್ಡ ಆಸ್ಪತ್ರೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯದು. ಇದೇ ಏಕೆ ಎಂದರೆ ಐಶ್ವರ್ಯಾಗೆ ಈ ಆಸ್ಪತ್ರೆಯಲ್ಲಿ ಲಭ್ಯವಿರುವ ಸೌಲಭ್ಯಗಳು ಇಷ್ಟವಾಗಿವೆ. ಇಷ್ಟೆಲ್ಲ ಮಾಹಿತಿ ದೊರೆತಿದೆ.

ಇದೀಗ ಸೆವೆನ್ ಹಿಲ್ಸ್ ಆಸ್ಪತ್ರೆ ಐಶ್ವರ್ಯಾ ರೈ ಭೇಟಿಯನ್ನು ರಹಸ್ಯವಾಗಿಡುವ ಎಲ್ಲಾ ಪ್ರಯತ್ನಗಳನ್ನೂ ಮಾಡಿದೆ. ಪ್ರತಿಬಾರಿಯ ಭೇಟಿಯಲ್ಲಿಯೂ ಅವರ ಸುರಕ್ಷತೆಗಾಗಿ ವಿಶೇಷ ಕಾಳಜಿ ವಹಿಸುತ್ತಿದೆ. ಇನ್ನೇನು, ಐಶೂ ಮಗುವಿಗೆ ಜನ್ಮನೀಡುವ ದಿನ ತೀರಾ ಹತ್ತಿರವಿದೆ. ಬಚ್ಚನ್ ಪರಿವಾರ ಹಾಗೂ ಜಗತ್ತೇ ಈ ಸಂಭ್ರಮಕ್ಕೆ ಸಾಕ್ಷಿಯಾಗಲಿದೆ (ಏಜೆನ್ಸೀಸ್)

More from Filmibeat

English summary
Actress Aishwarya Rai, whose due date is on second week of Nov, will have a cesarean delivery. The most awaited celebrity baby will take birth on 11/11/11. It's Aishwarya Rai much-talked about baby delivery. Also reportedly, Ash will be having a Cesarean delivery.
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X