ರಾಣಾ ಜೊತೆ ಮದುವೆ ಬರೀ ಸುಳ್ಳು: ಬಿಪಾಶಾ
ಪ್ಯಾರೀಸ್ ಹಿಲ್ಟನ್ ಗಾಗಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಚಕ್ಕಂದವಾಡಿ ಎಲ್ಲರ ಗಮನ ಸೆಳೆದಿದ್ದ ಬಿಪಾಶಾ ಹಾಗೂ ರಾಣಾ ನಡುವಿನ ಸಂಬಂಧ ಬರೀ ಡೇಟಿಂಗ್ ಅಷ್ಟೇ ಅಲ್ಲ. ಮದುವೆ ಮಣೆ ಏರುವ ತನಕ ಆತ್ಮೀಯವಾಗಿದೆ ಎಂದು ಬಾಲಿವುಡ್ ಮಂದಿ ಗಾಳಿಸುದ್ದಿ ಹಬ್ಬಿಸಿದ್ದಾರೆ.
ಆದರೆ, ದಕ್ಷಿಣ ಭಾರತದ ನಟ ರಾಣಾ ದಗ್ಗುಬಾತಿ ಜೊತೆ ನಾನು ಮದುವೆಯಾಗುವ ಯಾವ ಪ್ರಸ್ತಾಪವೂ ಬಂದಿಲ್ಲ. ನಾನು ಆತನನ್ನು ಮದುವೆಯಾಗುತ್ತಿಲ್ಲ ಎಂದು ಬೆಂಗಾಳಿ ಬೆಡಗಿ ಬಿಪ್ಸ್ ಸ್ಪಷ್ಟಪಡಿಸಿದ್ದಾಳೆ.
ಧಮ್ ಮಾರೋ ಧಮ್ ನಂತರ ಆಗಾಗ ಮಾಧ್ಯಮದ ಕಣ್ಣಿಗೆ ಸಿಕ್ಕಿ ಬೀಳುತ್ತಿದ್ದ ಈ ಜೋಡಿ ನಾವು ಬರೀ ಫ್ರೆಂಡ್ಸ್ ಎಂದು ಹೇಳಿಕೊಂಡು ತಿರುಗಾಡುತ್ತಿತ್ತು.
ಆದರೆ, ಲೇಟ್ ನೈಟ್ ಪಾರ್ಟಿಗಳಲ್ಲಿ ಡ್ಯಾನ್ಸ್ ಮಾಡಿ ಕುಣಿದು ಎಂಜಾಯ್ ಮಾಡುವುದರಲ್ಲೇ ಸುಖ ಕಾಣುತ್ತಿದೆ ಈ ಜೋಡಿ. ಆದರೆ. ಡ್ಯಾನ್ಸ್ ಗಿಂತ ರೋಮ್ಯಾನ್ಸ್ ಜಾಸ್ತಿಯಾಗಿದೆ ಎನ್ನುತ್ತಿದೆ ಬಾಲಿವುಡ್ ಗಾಸಿಪ್ ವರದಿಗಳು.
ನಂತರ ಈ ಬಗ್ಗೆ ಸುಮ್ಮನೆ ಗಾಳಿಸುದ್ದಿ ಹಬ್ಬುವುದನ್ನು ತಡೆಯಲು ಮರುದಿನವೇ ಟ್ವಿಟ್ಟರ್ ನಲ್ಲಿ ಮದುವೆ ಬಗ್ಗೆ ಬಿಪ್ಸ್ ಸ್ಪಷ್ಟನೆ ನೀಡಿದ್ದಾರೆ. ಬಿಪ್ಸ್ ಟ್ವೀಟ್ ನೋಡಿ ಫೋರ್ಸ್ ಯಶಸ್ಸಿನ ಖುಷಿಯಲ್ಲಿರುವ ಮಾಜಿ ಗೆಳೆಯ ಜಾನ್ ಕಿಸಕ್ಕನೆ ನಕ್ಕಿದ್ದು ಎಲ್ಲೂ ವರದಿಯಾಗಿಲ್ಲ.


Click it and Unblock the Notifications











