ಬಾಲಿವುಡ್ ತಾರೆಯರ ಸೌಂದರ್ಯದ ಗುಟ್ಟು
ಆ ಕಾಲದಿಂದ ಈ ಕಾಲದವರೆಗೂ ಸಿನಿತಾರೆಯರು ಗುಟ್ಟುಗುಟ್ಟಾಗಿ ಸರ್ಜರಿ ಮಾಡಿಸಿಕೊಂಡು ಅಲ್ಲಿ ಇಲ್ಲಿ ಕಸಿ ಮಾಡಿಸಿಕೊಂಡು ತಮ್ಮ ದೇಹದ ಅಂಗಾಂಗಗಳ ಹೊಳಪು, ಮೈಮಾಟ ವೃದ್ಧಿಸಿಕೊಳ್ಳುವುದು ಸಾಮಾನ್ಯ.
ಮಾರುಕಟ್ಟೆಯಲ್ಲಿ ಬೇಡಿಕೆ ಉಳಿಸಿಕೊಳ್ಳಲು ಏನೆಲ್ಲಾ ಕಸರತ್ತು ಮಾಡುತ್ತಾರೆ . ಮೂಗು, ಎದೆ, ಕೂದಲ ಕಸಿ ಹೀಗೆ ನಾನಾ ಬಗೆಯ ಸರ್ಜರಿಗಳು ಭರ್ಜರಿಯಾಗಿ ನಡೆಯುತ್ತಲೇ ಇರುತ್ತದೆ. ಸಲ್ಮಾನ್ ನ ಕೂದಲು, ಮಿನಿಷಾಳ ಮೂಗು, ಸುಷ್ಮಿತಾಳ ಎದೆ ಎಲ್ಲವೂ ಸರ್ಜರಿಗೆ ಒಳಗಾಗಿ ಸುದ್ದಿಗೆ ಗ್ರಾಸವಾದವುಗಳು.
ಒಟ್ಟಾರೆ ಬಾಲಿವುಡ್ ಮಂದಿಯ ಸರ್ಜರಿಗಳ ಮೇಳ ನಿರಂತರ. ತೆರೆಯ ಮೇಲಿನ ಸೌಂದರ್ಯ ಉಳಿಸಿಕೊಳ್ಳಲು ತಾರೆಯರ ಬದಲಾದ ಚಹರೆ ಪಡೆಯುವ ಕಾಯಕ ಹೇಗೆ ಸಾಗಿದೆ ಎಂಬುದರ ಸಮಗ್ರ ವಿಡಿಯೋಗಳ ಪಟ್ಟಿ ನಿಮಗಾಗಿ:
* ಸನ್ನಿ ಡಿಯೋಲ್ ಗೂ ಕೂದಲ ಸಮಸ್ಯೆ?
* ಮಿನಿಷಾಗೆ ಯಾಕೋ ಮೂಗಿನ ಮೇಲೆ ಕೋಪ
* ಸಲ್ಮಾನ್ ತಲೆಗೂದಲು ಒರಿಜಿನಲ್ಲೋ, ಡ್ಲೂಪಿಕೇಟೋ?
* ಬಳಕುವ ಬಳ್ಳಿ ಕಂಗನಾಗೂ ಆಯ್ತು ಸರ್ಜರಿ
* ಸಿಲಿಕಾನ್ ಚೀಲ ತುಂಬಿಸಿಕೊಂಡ ಸುಷ್ಮಿತಾ
* ಮುಖ ಸೌಂದರ್ಯದ ಬಗ್ಗೆ ಸೋನಮ್ ಕಪೂರ್
ಶಿಲ್ಪಾ ಶೆಟ್ಟಿ ತನ್ನ ಮೂಗು, ತುಟಿ ಸರಿ ಪಡಿಸಿಕೊಳ್ಳಲು ಸರ್ಜರಿಗೆ ಮೊರೆ ಹೊಂದಂತೆ, ಪ್ರೀತಿ ಜಿಂಟಾ ಅತಿ ಮೇಕಪ್ ನ ಹಾನಿ ಸರಿಪಡಿಸಿಕೊಳ್ಳಲು ಸರ್ಜರಿಗೆ ಒಳಪಡಬೇಕಾಯಿತು. ಈಶಾ ಡಿಯೋಲ್, ಕರೀನಾ ಕಪೂರ್ ಹಲ್ಲು ಹಾಗೂ ದವಡೆಗಳಿಗೆ ಸರ್ಜರಿ ನಡೆಸಿ ಫಳಫಳ ಹೊಳೆವ ಹಲ್ಲುಗಳ ಪ್ರದರ್ಶಿಸತೊಡಿಗಿದರು.
ಕೃಷ್ಣಸುಂದರಿ ಬಿಪಾಶಾ ಕೂಡಾ ಸ್ತನಗಳ ಆಕಾರ ಬದಲಿಸಲು ಸಿಲಿಕಾನ್ ತುಂಬಿಸಿಕೊಂಡಿದ್ದಾಳೆ. ಇದೇ ರೀತಿ ರಾಖಿ ಸಾವಂತ್ ಕೂಡಾ ಉನ್ನತ ಸ್ತನ ಹೊಂದುವ ಬಯಕೆಯಿಂದ ವೈದ್ಯರ ಮೊರೆ ಹೋಗಿದ್ದುಂಟು.


Click it and Unblock the Notifications











