ಬಾಲಿವುಡ್ ನ ಹೊಸ ಗಾಯಕ ಹೃತಿಕ್ ರೋಶನ್
ಬಾಲಿವುಡ್ ನಾಯಕ ನಟ ಹೃತಿಕ್ ರೋಶನ್ ಕಂಠದಿಂದ ಹಾಡೊಂದು ಹೊರಬಿದ್ದಿದೆ. ಕೈಟ್ಸ್ ಇನ್ ದ ಸ್ಕೈ...ಎಂದು ಅವರು ಹಾಡಿ ತಮ್ಮ ಅಭಿಮಾನಿಗಳನ್ನು ದಂಗುಬಡಿಸಿದ್ದಾರೆ. ಅವರ ಹೊಚ್ಚ ಹೊಸ ಚಿತ್ರ 'ಕೈಟ್ಸ್'ಗಾಗಿ ಹೃತಿಕ್ ಈ ಹಾಡನ್ನು ಹಾಡಿದ್ದಾರೆ.
ಚಿತ್ರದ ನಿರ್ದೇಶಕ ಅನುರಾಗ್ ಬಸು ಹಾಡೊಂದನ್ನು ಹಾಡಬೇಕೆಂದು ಹೇಳಿದರು. ನಾನು ಹಾಡಿವುದುದಾ! ಪ್ರೇಕ್ಷಕರು ಬಿದ್ದು ಬಿದ್ದು ನಗ್ತಾರೆ ಅಷ್ಟೆ ಎಂದರಂತೆ ಹೃತಿಕ್. ಕಡೆಗೂ ಅವರು ಪಟ್ಟು ಬಿಡದ ಕಾರಣ ಅನಿವಾರ್ಯವಾಗಿ ಹಾಡನ್ನು ಹಾಡಬೇಕಾಯಿತು ಎನ್ನುತ್ತಾರೆ ಹೃತಿಕ್. ಕೈಟ್ಸ್ ಚಿತ್ರಕ್ಕಾಗಿ ಹೃತಿಕ್ ಹಾಡಿದ ಹಾಡನ್ನು ಆ ಚಿತ್ರದ ಪ್ರಚಾರಕ್ಕಾಗಿ ಬಳಸಿಕೊಳ್ಳಲಾಗುತ್ತದಂತೆ.
ಅನಿವಾರ್ಯ ಪರಿಸ್ಥಿತಿಯಲ್ಲಿ ತಾವು ಗಾಯಕರಾದ ಬಗ್ಗೆ ಹೃತಿಕ್ ಪ್ರತಿಕ್ರಿಯಿಸುತ್ತಾ, ನಾನು ಸಂಗೀತವನ್ನು ಸಂಪೂರ್ಣವಾಗಿ ಬಲ್ಲ ಗಾಯಕನಲ್ಲ. ಆದ ಕಾರಣ ಹಿರಿಯ ಗಾಯಕರೊಂದಿಗೆ ನನ್ನನ್ನು ಹೋಲಿಸುವುದು ತರವಲ್ಲ ಎನ್ನುತ್ತಾರೆ. ಅಂದಹಾಗೆ ಮೇ 21ರಂದು ಕೈಟ್ಸ್ ಚಿತ್ರ ತೆರೆಗೆ ಅಪ್ಪಳಿಸಿತ್ತಿದೆ.
ಹೃತಿಕ್ ರೋಶನ್ ಕೈಟ್ಸ್ ಕಂಗನಾ ರನೌತ್ ಬಾರ್ಬರ ಮೋರಿ ಬಾಲಿವುಡ್ hrithik roshan barbara mori singer kangana ranaut kites


Click it and Unblock the Notifications