ರು.10 ಕೋಟಿಗೆ ಕರೀನಾ ಡಿಮಾಂಡಪ್ಪೋ ಡಿಮಾಂಡು

By Rajendra

ಬಾಲಿವುಡ್‌ನಲ್ಲಿ ಅತ್ಯಧಿಕ ಸಂಭಾವನೆ ಎಣಿಸುವ ತಾರಾಮಣಿ ಕರೀನಾ ಕಪೂರ್ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯಕ್ಕೆ ಈಕೆ ಮಧುರ್ ಭಂಡಾರ್‌ಕರ್ ಅವರ ಹೀರೋಯಿನ್ ಚಿತ್ರದಲ್ಲಿ ಕಾಣಿಸಲಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಚಿತ್ರ ಐಶ್ವರ್ಯ ರೈ ಹೀರೋಯಿನ್ ಆಗಬೇಕಿತ್ತು. ಆದರೆ ಆಕೆ ಗರ್ಭಿಣಿ ಆಗಿದ್ದೇ ತಡ ಈ ಚಿತ್ರವನ್ನು ಕೈಬಿಟ್ಟರು.

ಈಗ ಈ ಚಿತ್ರಕ್ಕೆ ಕರೀನಾ ಕಪೂರ್‌‍ಳನ್ನು ಕರೆತರಲು ತೆರೆಮರೆಯ ಕಸರತ್ತು ನಡೆಯುತ್ತಿದೆ. ಅಸಲಿ ವಿಷಯ ಇದಲ್ಲ. ಈ ಚಿತ್ರಕ್ಕಾಗಿ ಕರೀನಾ ರು.10 ಕೋಟಿ ಕೊಡುವಂತೆ ಡಿಮಾಂಡ್ ಮಾಡಿರುವುದು. ಇಷ್ಟು ಮೊತ್ತವನ್ನು ಚಿತ್ರ ನಿರ್ಮಾಣ ಸಂಸ್ಥೆ ಯುಟಿವಿ ಕೊಡಲು ಮುಂದಾಗಿದೆಯಂತೆ.

ಆದರೆ ಸುದ್ದಿ ಇನ್ನೂ ಅಧಿಕೃತವಾಗಿ ಹೊರಬಿದ್ದಿಲ್ಲದಿದ್ದರೂ ಬಾಲಿವುಡ್ ವಲಯದಲ್ಲಿ ಮಾತ್ರ ಹೊಗೆಯಾಡುತ್ತಿದೆ. ಇತ್ತೀಚೆಗೆ ಒದ್ದೆಮುದ್ದೆ ಸೀರೆಯಲ್ಲಿ ಕರೀನಾ ಅಭಿನಯಿಸುವ ಮೂಲಕ ಗಮನಸೆಳೆದಿದ್ದರು. ಏಕ್ತಾ ಕಪೂರ್ ನಿರ್ಮಾಣದ ಈ ಬಹುನಿರೀಕ್ಷಿತ ಚಿತ್ರದಲ್ಲಿ ಮಂದಾಕಿನಿ ಹಾಗೂ ದಾವೂದ್ ನಡುವಿನ ಪ್ರೇಮ ಕಥಾನಕವೇ ಹೈಲೈಟ್ ಎನ್ನಲಾಗಿದೆ. (ಏಜೆನ್ಸೀಸ್)

More from Filmibeat

English summary
Kareena Kapoor will become the highest paid actress if the latest news turns true. It is said that she is ready to act in Madhur Bhandarkar’s much-hyped film, Heroine but only if paid handsomely. She has reportedly demanded Rs.10 crore as her remuneration for the film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X