ಸಲ್ಲು ಬಂದ ಪ್ರಾಂಶುಪಾಲ ಕಾಲೇಜಿಗೆ ರಜೆ ಎಂದ
ಜೈಪುರ ಇಂಜಿನಿಯರಿಂಗ್ ಕಾಲೇಜಿಗೆ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಇತ್ತೀಚೆಗೆ ಭೇಟಿ ನೀಡಿದ್ದರು. ತಮ್ಮ ಹೊಚ್ಚ ಹೊಸ ಚಿತ್ರ 'ದಬಾಂಗ್' ಪ್ರಚಾರಕ್ಕಾಗಿ ಅವರು ಈ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದು ವಿಶೇಷ. ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಸಲ್ಮಾನ್‌ರೊಂದಿಗೆ ಸಂವಾದ ಎಂದರೆ ಕೇಳಬೇಕೆ. ಮಾತು ಮಾತಿಗೂ ಹಾಸ್ಯ ಚಟಾಕಿ ಸಿಡಿಸುವ ಮಾತಿನ ಮಲ್ಲ ಸಲ್ಲು. ಅವರ ಮಾತಿಗೆ ವಿದ್ಯಾರ್ಥಿಗಳು ಫುಲ್ ಬೌಲ್ಡ್ ಆದರು. ವಿದ್ಯಾರ್ಥಿಗಳೆಲ್ಲಾ ಸಲ್ಲು ಮುಂದೆ ಜಮಾಯಿಸಿದರು. ತರಗತಿ ಕೊಠಡಿಗಳೆಲ್ಲಾ ಖಾಲಿ ಖಾಲಿ. ಉಪನ್ಯಾಸಕರು ಗೋಡೆಗಳಿಗೆ ಪಾಠ ಮಾಡಲಾಗುತ್ತದೆಯೇ.
ಮೈಕ್ ಕೈಗೆತ್ತಿಕೊಂಡ ಸಲ್ಲು, ಸರ್ ನಾಳೆ ಕಾಲೇಜಿಗೆ ರಜೆ ಘೋಷಿಸಿದರೆ ವಿದ್ಯಾರ್ಥಿಗಳು ಫುಲ್ ಖುಷ್ ಆಗುತ್ತಾರೆ ಎಂದು ತಮಾಷೆಗೆ ಅಂದರು. ಈ ಮಾತಿಗೆ ವಿದ್ಯಾರ್ಥಿಗಳ ಕರತಾಡನ ಮುಗಿಲು ಮುಟ್ಟಿತು. ಅವರು ಹಾಗೆ ತಮಾಷೆಗೆ ಅಂದದ್ದನ್ನು ಪ್ರಾಂಶುಪಾಲರಿಗೆ ಸೀರಿಯಸ್ ತೆಗೆದುಕೊಂಡು ಆಯ್ತು ಎಂದರು. ವಿದ್ಯಾರ್ಥಿಗಳಿಗೆ ಖುಷಿಯೋ ಖುಷಿ. ಒಟ್ಟಿನಲ್ಲಿ ಸಲ್ಲು ಕಾಲೇಜಿಗೆ ರಜೆ ಕೊಡಿಸಿ ವಿದ್ಯಾರ್ಥಿಗಳ ಹೃದಯ ಕದ್ದಿದ್ದಾರೆ.
ಜೈಪುರದ ಉಮಾಂಗ್ ಶಾಲೆ ಗೂ (ವಿಕಲಚೇತನರ ಪುನರ್ವಸತಿ ಶಾಲೆ) ಭೇಟಿ ನೀಡಿದ್ದರು. ಅಲ್ಲಿನ ವಿಕಲಚೇತನ ವಿದ್ಯಾರ್ಥಿಗಳ ಜೊತೆ ಕಾಲ ಕಳೆದ ಸಲ್ಲು ಬಳಿಕ ರು.11 ಲಕ್ಷ ದೇಣಿಗೆ ನೀಡಿ ಕೃತಾರ್ಥರಾದರು. ಅದಾದ ಬಳಿಕ ಅವರು ನೇರವಾಗಿ ಭೇಟಿ ಕೊಟ್ಟಿದ್ದ್ದು ದೀಪ್‌ಶಿಖ ರೀಜನಲ್ ಇಂಜಿನಿಯರಿಂಗ್ ಕಾಲೇಜಿಗೆ.


Click it and Unblock the Notifications











