ಪ್ರಿಯಾಂಕಾ ಪಟಾಕಿ, ಶಾರುಖ್ ಖಾನ್ ಬಾಂಬ್
ಹೇಗೂ ದೀಪಾವಳಿ ಹಬ್ಬ ಸಮೀಪಿಸುತ್ತಿದೆ, ಸಿನಿಮಾ ತಾರೆಗಳನ್ನು 'ಪಟಾಕಿ', 'ಬಾಂಬ್'ಗೆ ಹೋಲಿಸಿದರೆ ಹೇಗೆ? ಈ ಹೊಸ ಐಡಿಯಾ ಹೊಳೆದದ್ದೇ ತಡ ಎಂಎಸ್ ಎನ್ ಇಂಡಿಯಾ ಓದುಗರಿಗೆ ಪ್ರಶ್ನೆಯೊಂದನ್ನು ಒಗೆಯಿತು. ಬಾಲಿವುಡ್‌ನ 'ಪಟಾಕಿ' ಮತ್ತು 'ಬಾಂಬ್' ಯಾರು ಎಂಬುದೇ ಆ ಪ್ರಶ್ನೆ.
ಈ ಪ್ರಶ್ನೆಗೆ ಉತ್ತರ ನೀಡಿರುವ ಓದುಗರು ಕಿಂಗ್ ಖಾನ್ ಶಾರುಖ್ ಅವರನ್ನು 'ಬಾಂಬ್' ಎಂದು ಹಾಟ್ ನಟಿ ಪ್ರಿಯಾಂಕಾ ಚೋಪ್ರಾರನ್ನು 'ಪಟಾಕಿ' ಎಂದು ಅಭಿಮಾನಿಗಳು ನಿರ್ಧರಿಸಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ಪಟಾಕಿ, ಬಾಂಬ್, ಗ್ರೆನೇಡ್, ಧಮಾಕ್ ವಿಭಾಗದಲ್ಲಿ ಬಾಲಿವುಡ್ ನಟ, ನಟಿಯರನ್ನು ಹೆಸರಿಸುವಂತೆ ಓದುಗರಿಗೆ ಸೂಚಿಸಲಾಗಿತ್ತು.
ಸಮೀಕ್ಷೆಯಲ್ಲಿ ಬಾಂಬ್ ವಿಭಾಗದಲ್ಲಿ ಹೃತಿಕ್ ಮತ್ತು ಸಲ್ಲುರನ್ನು ಹಿಂದಿಕ್ಕಿ ಶಾರುಖ್ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಪಟಾಕಿ ವಿಭಾಗದಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಕತ್ರಿನಾ ಕೈಫ್ ರನ್ನು ಪ್ರಿಯಾಂಕಾ ಹಿಂದಿಕ್ಕಿ ಹೆಚ್ಚು ಮತ ಪಡೆದಿದ್ದಾರೆ. ಬಾಲಿವುಡ್‌ನ ಗ್ರೆನೇಡ್ ಆಗಿ ಮಿಸ್ಟರ್ ಪರ್‌ಫೆಕ್ಟ್ ಅಮೀರ್ ಖಾನ್ ಆಯ್ಕೆಯಾಗಿದ್ದಾರೆ.


Click it and Unblock the Notifications











