ಬರೋಬ್ಬರಿ ಆರು ಬಾರಿ ಮದ್ವೆ ಆಗ್ತಾಳಂತೆ ಪ್ರಿಯಾಂಕಾ!

By Srinath

ಬಾಲಿವುಡ್‌ನ ಬ್ಯೂಟಿಕ್ವೀನ್ ಅದೇ ಪ್ರಿಯಾಂಕಾ ಚೋಪ್ರಾ ಬರೋಬ್ಬರಿ ಆರು ಬಾರಿ ಮದುವೆಯಾಗುವ ಬಯಕೆ ವ್ಯಕ್ತಪಡಿಸಿದ್ದಾಳೆ. ಅವಕಾಶಗಳು ಹೆಚ್ಚಾಗಿವೆಯೆಂದು 'ಸಿಕ್ಸರ್' ಬಾರಿಸಲು ನಿಮ್ಮ ಬ್ಯಾಟ್ ಹಿಡಿದು ಕಣಕ್ಕಿಳಿಯುವ (ದುರ್)ಬುದ್ಧಿ ನಿಮಗೆ ಬಂತೆ? ಸ್ವಲ್ಪ ತಡೆಯಿರಿ. ಅತಿ ಆಸೆ ಗತಿಕೇಡು ಆದೀತು.

ಪ್ರಿಯಾಂಕಾ ಸ್ವಲ್ಪ ಬುದ್ಧಿವಂತೆಯೂ ಹೌದು. ಅವಳು ಮದ್ವೆ ಆಗಬಯಸಿರುವುದು ಒಬ್ಬರನ್ನೇ, ರಿಪೀಟ್‌ ಒಬ್ಬರನ್ನೇ, ಆರು ಬಾರಿ. ಅವಳಿಗ್ಯಾಕ್ ಬಂತು ಇಂಥ ತಿಕ್ಕಲು ಬುದ್ಧಿ? ಎಂದು ಮತ್ತೆ ಬೌನ್ಸರ್ ಎಸೆಯಬೇಡಿ. ಏಕೆಂದರೆ ಪ್ರಿಯಾಂಕಾ ಇದೆಲ್ಲ ಮಾಡಹೊರಟಿರುವುದು ತನ್ನ ಹೊಸ ಚಿತ್ರ '7 ಖೂನ್ ಮಾಫ್' ಪ್ರಚಾರಕ್ಕಾಗಿ ಅಷ್ಟೇ! ಈ ಚಿತ್ರದಲ್ಲಿ ಅವಳು ಏಳು ಬಾರಿ ಮದುವೆಯಾಗುತ್ತಾಳೆ ಅದಕ್ಕೇ!

ಇನ್ನೂ 28ರ ಈ ಬೆಡಗಿಗೆ ಮದ್ವೆ ಆಗಬೇಕು ಎಂಬ ಆಲೋಚನೆ ಬಹುದಿನದಿಂದ ಕಾಡುತ್ತಿದೆಯಂತೆ. ಆದರೆ ಇತ್ತೀಚೆಗೆ ಯಾಕೋ ಮದ್ವೆ ಅಂದರೆ ವ್ಯಾಕ್, ವ್ಯಾಕ್ ಅನ್ನುವಂತಾಗಿದೆಯಂತೆ. ಅದ್ಯಾಕೊ ಪ್ರಿಯಾಂಕಾ ಪ್ರಿಯತಮ ಶಾಹಿದ್ ಕಪೂರ್ ಒಳಗೊಳಗೇ ನಗುತ್ತಿದ್ದಾನೆ.

ಆರು ಸ್ಥಳಗಳಲ್ಲಿ ಆರು ಮಹೂರ್ತಗಳಲ್ಲಿ ಆದರೆ ಒಬ್ಬನನ್ನೇ ನಿಖಾ ಆಗುವುದು ನಿಕ್ಕಿಯಾಗಿದೆ. ಅಂಬಾಲಾದಲ್ಲಿರುವ ತಾತನ ಮನೆಯಲ್ಲಿ ಮೊದಲ ಮದ್ವೆ. ಎರಡನೆಯದು ಆಸ್ಟ್ರೇಲಿಯಾದ ಗ್ರೇಟ್ ಬ್ಯಾರಿಯರ್ ರೀಫ್ ಸಮುದ್ರತಳದಲ್ಲಿ, ಮೂರನೆಯದು ಲಾಸ್ ವೇಗಸ್‌ನಲ್ಲಿರುವ ಚರ್ಚ್‌ನಲ್ಲಿ, ನಾಲ್ಕು ಸ್ವಿಟ್ಸರ್‌ಲ್ಯಾಂಡ್‌ನ ಚಿಕ್ಕ ಚರ್ಚ್‌ನಲ್ಲಿ ...ಇನ್ನೆರಡು!? ಇನ್ನೂ ನಿರ್ಧರಿಸಿಲ್ಲ ಎನ್ನುತ್ತಾಳೆ ಈ ಚೆಂದುಳ್ಳಿ ಚೆಲುವೆ. ಬಹುಶಃ ಅದನ್ನು ಭಾವಿ ಪತಿಯ ಆಯ್ಕೆಗೆ ಬಿಟ್ಟಿರಬಹುದು.

More from Filmibeat

English summary
Bollywood beauty queen Priyanka Chopra proposes to wed six times but same man! Also she has already decided as where to marry but who is that most eligible bachelor? did you see Shahid Kapoor smiling?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X