ದೀಪಿಕಾ ಎರಡೆರಡು ಬಾರಿ ಸಿಟ್ಟಾಗಲು ಕಾರಣ

By Mahesh

ರಣಬೀರ್ ಗೆ ಟೂ ಬಿಟ್ಟ ನಂತರ ಸಿದ್ಧಾರ್ಥ್ ನೊಂದಿಗೆ ದೀಪಿಕಾ ಸರಿಗಮ ರಾಗ ಹಾಡುತ್ತಿದ್ದಾಳೆ ಎಂದು ಮಾಧ್ಯಮಗಳಲ್ಲಿ ಬಂದ ಮೇಲೆ ದೀಪಿಕಾ ಯಾಕೋ ಕೊಂಚ ಗರಂ ಆಗಿದ್ದಾರೆ. ಇತ್ತೀಚೆಗೆ ಬಿಗ್ ಬಿ ಅಮಿತಾಬ್ ಕೂಡಾ ಮೆಟ್ರೋಗಾಗಿ ತಮ್ಮ ಮನೆ ಬಲಿ ಕೊಡಬೇಕಾದರೆ ನನ್ನ ವಿರೋಧವಿದೆ ಎಂದು ದುಃಖ ತೋಡಿಕೊಂಡಿದ್ದರು. ಇದಕ್ಕೆ ಒಂದಿಷ್ಟು ಜಲ್ಲಿ ಮರಳು ಸುಣ್ಣ ಎಲ್ಲಾ ಸೇರಿಸಿ ಸಿಮೆಂಟ್ ಕಲೆಸಿ ಮಾಧ್ಯಮದ ಮಂದಿ ಬಣ್ಣ ಬಣ್ಣದ ಚಿತ್ತಾರದೊಂದಿಗೆ ಸಿನಿಮಾ ಪುರವಣಿಯ ಮುಖಪುಟಗಳಲ್ಲಿ ರಾರಾಜಿ ಬಿಟ್ಟಿದ್ದರು.

ಆದರೆ, ದೀಪಿಕಾ ಸಿಟ್ಟಾಗಲು ಎರೆಡೆರಡು ಕಾರಣಗಳಿವೆ. ಒಂದು ಸಿದ್ದಾರ್ಥ್ ಮಲ್ಯ ಜೊತೆ ತಗಲಿಹಾಕಿಕೊಂಡ ತನ್ನ ಹೆಸರು ಇನ್ನೊಂದು RK ಟ್ಯಾಟ್ಟೋಅಳಿಸಿ ಹಾಕುವ ವಿಷಯ. ಮೊದಲ ಪ್ರೇಮವಾ ಮರೆಯಲು ಸಾಧ್ಯವೇ.

ಆದರೆ, ಮಲ್ಯ ಪುತ್ರನೊಂದಿಗೆ ಪ್ರೇಮದ ಅಮಲಿನಲ್ಲಿರುವ ದೀಪಿಗೆ ರಣಬೀರನ ಹೆಸರಿನ ಹಚ್ಚೆ ಸ್ವಲ್ಪ ಹೆಚ್ಚಾಗಿ ಕಾಡುತ್ತಿದೆ .ಅದಕ್ಕೆ ಹಚ್ಚೆಯನ್ನು ಆದಷ್ಟೂ ಬೇಗ ಕ್ಲೀನ್ ಮಾಡಿ, ಜಾಹೀರಾತಿನಲ್ಲಿ ಬಹುಶಃ ನೆಸ್ ಕೆಫೆ ಆಡ್ ಇರ್ಬೇಕು ಅದರಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದು ಮಂಗಳೂರಿನ ಬಾಲೆಯ ಮುನಿಸಿಗೆ ಕಾರಣ.

ಮಾಧ್ಯಮದವರಿಗೆ ವಾಸ್ತವಕ್ಕಿಂತ ಕಲ್ಪನೆಯ ಕಥೆಗಳೆ ಹೆಚ್ಚು ಇಷ್ಟ ಎನಿಸುತ್ತದೆ. ನಾನು ಟ್ಯಾಟ್ಟೋ ಅಳಿಸುತ್ತೇನೆ ಎಂದು ಹೇಳಿಲ್ಲ. ಆ ರೀತಿಯ ಯೋಚನೆ ಕನಸಿನಲ್ಲೂ ಬಂದಿಲ್ಲ. ಖಾಸಗಿ ವಿಷಯದ ಬಗ್ಗೆ ಏನೇ ಬರೆಯಲಿ, ನಾನಂತೂ ನನ್ನ ಜೀವನ ಶೈಲಿ ಬದಲಿಸೋಲ್ಲ, ಆಗುವುದು ಆಗಲಿ ಎನ್ನುತ್ತಾಳೆ ಬಿಂಕದ ಬೆಡಗಿ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X