»   » ಸನ್ನಿ ಲಿಯೋನ್ ಮಾತಿಗೆ ಬಾಲಿವುಡ್ ಬೆಪ್ಪುತಕ್ಕಡಿ

ಸನ್ನಿ ಲಿಯೋನ್ ಮಾತಿಗೆ ಬಾಲಿವುಡ್ ಬೆಪ್ಪುತಕ್ಕಡಿ

Posted By:
Subscribe to Filmibeat Kannada

ವಯಸ್ಕರ ಚಿತ್ರಗಳ ಖ್ಯಾತಿಯ ನಟಿ ಸನ್ನಿ ಲಿಯೋನ್, 'ನಾನು ಅಂತಹ ಚಿತ್ರಗಳಲ್ಲಿ ನಟಿಸುವುದನ್ನು ಬಿಡುವುದಿಲ್ಲ, ಅದನ್ನು ಮುಂದುವರಿಸುತ್ತೇನೆ" ಎಂದಿದ್ದಾರೆ. ಮಹೇಶ್ ಭಟ್ ಅವರ ಜಿಸ್ಮ್ 2 ಚಿತ್ರೀಕರಣಕ್ಕಾಗಿ ಜೈಪುರಕ್ಕೆ ಆಗಮಿಸಿದ್ದ ನಟಿ ಸನ್ನಿ ಲಿಯೋನ್ ತಮ್ಮ ವೃತ್ತಿಯ ಬಗ್ಗೆ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಿದ್ದರು.

ಈಗ ಬಾಲಿವುಡ್ ನಲ್ಲಿ ಅವಕಾಶ ದೊರಕಿರುವುದರಿಂದ ಆ ಚಿತ್ರಗಳ ನಟನೆ ತ್ಯಜಸಬಹುದಲ್ಲ ಎಂಬ ಹಲವಾರ ಸಲಹೆಗೆ ಸನ್ನಿ ಲಿಯೋನ್, "ನಾನು ನನ್ನ ಭವಿಷ್ಯದ ಬಗ್ಗೆ ಈಗಲೇ ನಿರ್ಧರಿಸಲಾರೆ. ಸಿಕ್ಕ ಒಂದೇ ಒಂದು ಬಾಲಿವುಡ್ ಅವಕಾಶ ಮುಂದೆ ನನಗೆ ಅವಕಾಶಗಳ ಮಹಾಪುರವನ್ನೇ ಹರಿಸುತ್ತದೆ ಎಂದು ನಂಬುವುದು ಹೇಗೆ?" ಎಂದು ಮಾರ್ಮಿಕವಾಗಿ ಉತ್ತರಿಸಿ ಅಚ್ಚರಿ ಹುಟ್ಟಿಸಿದ್ದಾರೆ.

ಇದೇ ತಿಂಗಳು, ಏಪ್ರಿಲ್ 1 ರಿಂದ ಪ್ರಾರಂಭವಾಗಿರುವ ಜಿಸ್ಮ್ 2 ಚಿತ್ರೀಕರಣದಲ್ಲಿ ಸನ್ನಿ ಪಾಲ್ಗೊಳ್ಳುತ್ತಿದ್ದಾರೆ. ಜೈಪುರದ ಲಕ್ಸುರಿ ಹೊಟೆಲೊಂದರಲ್ಲಿ ಬೀಡುಬಿಟ್ಟಿರುವ ಈ ನಟಿ, ಕೇವಲ ತಮ್ಮ ಬಿಂದಾಸ್ ಮೈಮಾಟ ಪ್ರದರ್ಶನದಿಂದಲ್ಲದೇ ಬೋಲ್ಡ್ ಮಾತಿನಿಂದಲೂ ಕೇಳುಗರನ್ನು ಅಲ್ಲೋಲಕಲ್ಲೋಲ ಗೊಳಿಸುವ ಛಾತಿ ಹೊಂದಿದ್ದಾರೆ. (ಏಜೆನ್ಸೀಸ್)

English summary
Sunny Leone who is doing Jism 2 refuses to give up her Adult Career. Jism 2 shooting started on April 1 in Jaipur.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada