ಮಂದಸ್ಮಿತೆ ಯುವಿಕಾಗೆ ಕಾಮಪುರುಷನ ಕಾಟ
ಕನ್ನಡದಲ್ಲಿ ಗೋಲ್ಡನ್ ಸ್ಟಾರ್ ಗಣೇಶನ ಜೊತೆ ಮಳೆಯಲಿ ನೆಂದು ಜೊತೆಯಲಿ ಹಾಡು ಹಾಡಿದ ಮಂದಮಿತೆ ಯುವಿಕಾಗೆ ಬಾಲಿವುಡ್ ನಲ್ಲಿ ಮತ್ತೆ ಎಂಟ್ರಿ ಕೊಟ್ಟ ಘಳಿಗೆ ಯಾಕೋ ಸರಿಯಿಲ್ಲ. ಗೋವಿಂದ ಜೊತೆ ನಾಟಿ @40 ಎಂಬ ಚಿತ್ರದಲ್ಲಿ ನಟಿಸುತ್ತಿರುವ ಯುವಿಕಾ ಇತ್ತೀಚೆಗೆ ದೆಹಲಿ ಮೂಲದ ವಿಟ(pimp)ನೊಬ್ಬನಿಂದ ವಿಪರೀತ ಕಾಟ ಎದುರಿಸಬೇಕಾಯಿತು.
"ಯುವಿಕಾ 5 ಲಕ್ಷಕ್ಕೆ ಸಿಕ್ತಾಳೆ" ಮಜಾ ಮಾಡಿ ಎಂದು ಆನ್ ಲೈನ್ ನಲ್ಲಿ ಸಂದೇಶಗಳನ್ನು ಹರಡುತ್ತಿದ ಈ ಕಾಪುರುಷನ ಹೆಸರು ಜಾನ್. ಯುವಿಕಾ ಹೆಸರಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಯುವಿಕಾ ಹೆಸರಲ್ಲಿ ವೇಶ್ಯೆಯರು ನೀಡುವಂಥ ಜಾಹೀರಾತುಗಳನ್ನು ನೀಡತೊಡಗಿದ್ದ. ಇಂತಿಷ್ಟು ಹಣ ಕೊಟ್ಟರೆ ಸೆಕ್ಸ್ ಸೇವೆಗೆ ನಾನು ಸಿದ್ಧ ಎಂದು ಯುವಿಕಾ ಹೆಸರಲ್ಲಿ ಸಂದೇಶ ಹರಡುತ್ತಿದ್ದ.
ಇಷ್ಟೇ ಅಲ್ಲದೆ, ಯುವಿಕಾಳ ನೇರ ಸಂಪರ್ಕ ಸಾಧಿಸಿ, ಸಮಯ ಸಿಕ್ಕಾಗಲೆಲ್ಲಾ ಕರೆ ಮಾಡಿ, ಡೀಲ್ ಮಾಡಿಕೊಳ್ಳೋಣ ರೆಡಿಯಾಗು ಎಂದು ಪೀಡಿಸತೊಡಗಿದ. ಕೊನೆಗೆ ಪೊಲೀಸರ ಮೊರೆ ಹೊಕ್ಕ ಯುವಿಕಾ, ಈಗ ಅನಾಮಧೇಯ ನಂಬರ್ ಗಳಿಂದ ಬರುವ ಕರೆಗಳನ್ನು ಬಂದ್ ಮಾಡಿದ್ದಾರೆ.
ಟ್ವಿಟ್ಟರ್, ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ತಾವು ಯಾವುದೇ ಅಧಿಕೃತ ಅಕೌಂಟ್ ಹೊಂದಿಲ್ಲ ಎಂದು ಅಭಿಮಾನಿಗಳಿಗೆ ಸಾರ್ವಜನಿಕರಿಗೆ ಮಾಧ್ಯಮಗಳ ಮೂಲಕ ಯುವಿಕಾ ಹೇಳಿದ್ದಾರೆ. ಕಳೆದ ಕೆಲ ವಾರಗಳಿಂದ ನಿದ್ದೆಕೆಡೆಸಿದ ಹಸನ್ಮುಖಿ ನಟಿ ಈಗ ನಾಟಿ@40 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ.


Click it and Unblock the Notifications











