Just In
Don't Miss!
- News
ನೇಪಾಳ ಕಮ್ಯೂನಿಸ್ಟ್ ಪಕ್ಷದಿಂದ ಕೆಪಿ ಶರ್ಮಾ ಓಲಿ ಉಚ್ಚಾಟನೆ
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ನಟ ಅಕ್ಷಯ್ ಕುಮಾರ್ ಕೈಗೆ ಕುಟುಕಿದ ಚೇಳು
ಚಿತ್ರೀಕರಣದಲ್ಲಿ ಅವಗಡಗಳಾಗುವುದು ಸಾಮಾನ್ಯ. ಆದರೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರಿಗೆ ಸೆಟ್ಸ್‌ನಲ್ಲಿ ಚೇಳು ಕುಟುಕಿದೆ. ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ "ಖತ್ರನ್ ಕೆ ಖಿಲಾಡಿ ಸೀಸನ್ 4" ಚಿತ್ರೀಕರಣದಲ್ಲಿ ಈ ಘಟನೆ ನಡೆದಿದೆ. ಚೇಳು ಕಡಿತದ ಬಳಿಕ ಸುಧಾರಿಸಿಕೊಂಡು ಅಕ್ಷಯ್ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗಿ ಸುದ್ದಿ.
ಕಲರ್ಸ್ ವಾಹಿನಿಗಾಗಿ ಈ ಕಾರ್ಯಕ್ರಮ ಚಿತ್ರೀಕರಿಸಲಾಗುತ್ತಿತ್ತು. "ಅವರ ಎಡಗೈ ತೋರು ಬೆರಳಿಗೆ ಚೇಳು ಕುಟುಕಿದೆ" ಎಂದು ವಾಹಿನಿ ತಿಳಿಸಿದೆ. ಚೇಳು ಕಡಿತದಿಂದ ಅಸಾಧ್ಯ ನೋವು ಅನುಭವಿಸಿದ ಅಕ್ಕಿ ಬಳಿಕ ನಂಜು ನಿರೋಧಕ ದ್ರವ ಲೇಪನವನ್ನು ನಾಲ್ಕು ಬಾರಿ ಹಚ್ಚಿಕೊಂಡು ನೋವು ಶಮನಕ್ಕೆ ಹರಸಾಹಸ ಪಟ್ಟಿದ್ದಾರೆ. ಆದರೂ ನೋವು ಮಾತ್ರ ಇನ್ನೂ ಕಾಡುತ್ತಿದೆಯಂತೆ.
ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ 10 ನಿಮಿಷಗಳ ಕಾಲ ಮಂಜುಗಡ್ಡೆ ಇಟ್ಟು ತಣ್ಣಗೆ ಮಾಡಿದರೂ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಆಯಿಂಟ್‌ಮೆಂಟ್ ಹಚ್ಚಿ ಆರೈಕೆ ಮಾಡಲಾಯಿತು. ಅಸಾಧ್ಯ ನೋವಿನ ನಡುವೆಯೂ ಚಿತ್ರೀಕರಣ ಮುಗಿಸಿದ್ದಾಗಿ ಕಲರ್ಸ್ ವಾಹಿನಿ ತಿಳಿಸಿದೆ. "ಈಗಷ್ಟೇ ಕೇಪ್ ಟೌನ್‌ನಲ್ಲಿ ಚೇಳು ಕುಟುಕಿತು. ಅಬ್ಬಬ್ಬಾ ಎಂಥಾ ಚೇಳು ಎಂಥಾ ಕಡಿತಾ ಅಂತೀರಾ!" ಎಂದು ಅಕ್ಕಿ ಟ್ವೀಟ್ ಮಾಡಿದ್ದಾರೆ.