ಬಾಲಿವುಡ್‌ಗೆ ಹೊಸ ಐಟಂ ಗರ್ಲ್ ಚಿತ್ರಾಂಗದಾ ಸಿಂಗ್
ಬಾಲಿವುಡ್‌ಗೆ ಹೊಸ ಐಟಂ ಗರ್ಲ್ ಆಗಮನವಾಗಿದೆ. ಈ ಕೃಷ್ಣಸುಂದರಿ ಬೇರಾರು ಅಲ್ಲ ಚಿತ್ರಾಂಗದ ಸಿಂಗ್. ಶಿರೀಶ್ ಕುಂದರ್ ಅವರ 'ಜೋಕರ್' ಚಿತ್ರದಲ್ಲಿ ತಮ್ಮ ಮೈಮಾಟವನ್ನು ಪ್ರದರ್ಶಿಸಲಿದ್ದಾರೆ ಚಿತ್ರಾಂಗದಾ. ಚಿತ್ರದ ಪಾತ್ರವರ್ಗದಲ್ಲಿ ಅಕ್ಷಯ್ ಕುಮಾರ್, ಸೋನಾಕ್ಷಿ ಸಿನ್ಹಾ ಮುಂತಾದವರಿದ್ದು ಚಿತ್ರಾಂಗದಾ ಅವರದು ಐಟಂ ನಂಬರ್.
"ಕಾಫಿರಾನಾ..." ಎಂಬ ಹಾಡಿಗೆ ಫರಾ ಖಾನ್ ನೃತ್ಯ ಸಂಯೋಜಿಸಿದ್ದಾರೆ. ಈಗಾಗಲೆ 'ತೀಸ್ ಮಾರ್ ಖಾನ್' ಚಿತ್ರದಲ್ಲಿ ಕತ್ರಿನಾ ಕೈಫ್‌ಗೆ "ಶೀಲಾ ಕಿ ಜವಾನಿ" ಹಾಡಿಗೆ ಅಕ್ಷಯ್ ಕುಮಾರ್ ಸಾಥ್ ನೀಡಿದ್ದರು. ಈಗ ಚಿತ್ರಾಂಗದೆಗೂ ಅಕ್ಕಿ ಸಾಥ್ ನೀಡಲಿದ್ದಾರೆ.
ಈ ಚಿತ್ರದಲ್ಲಿ ಮತ್ತೊಂದು ಐಟಂ ಹಾಡಿದೆಯಂತೆ. ಅದರಲ್ಲಿ ಸೋನಾಕ್ಷಿ ಸಿನ್ಹಾ ಹೆಜ್ಜೆ ಹಾಕಲಿದ್ದಾರೆ. 2012ರಲ್ಲೇ ಈ ಹಾಡು ಸೂಪರ್ ಡೂಪರ್ ಐಟಂ ಹಾಡಾಗಲಿದೆ ಎಂಬ ವಿಶ್ವಾಸವನ್ನು ಸೋನಾಕ್ಷಿ ವ್ಯಕ್ತಪಡಿಸಿದ್ದಾರೆ. ಇನ್ನು ಚಿತ್ರಾಂಗದೆಯ ಹಾಡಂತೂ ಪಡ್ಡೆಗಳಿಗೆ ರಸದೌತಣ ನೀಡಲಿದೆ ಎಂಬುದು ಸದ್ಯದ ಮಾಹಿತಿ. (ಏಜೆನ್ಸೀಸ್)
More from Filmibeat
English summary
Guess who's the new item girl of Bollywood? It's our industry's dusky lady Chitrangada Singh. Chitrangada will be seen in a different avatar in Shirish Kunder"s 'Joker". The actress will do her first item number in the film which stars Akshay Kumar, Sonakshi Sinha and Shreyas Talpade.


Click it and Unblock the Notifications











