ದೀಪಿಕಾ ಪಡುಕೋಣೆ ವಿರುದ್ಧ ಕೋರ್ಟ್‌ನಲ್ಲಿ ದೂರು
ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಹಾಗೂ 'ದಂ ಮಾರೋ ದಂ' ಚಿತ್ರದನಿರ್ಮಾಪಕರ ವಿರುದ್ಧ ಜೋಧ್‌ಪುರ(ರಾಜಸ್ತಾನ) ನಗರದ ಮೆಟ್ರೋ ಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿದೆ. ಚಿತ್ರದಲ್ಲಿನ ಐಟಂ ಹಾಡು ಅಸಭ್ಯ ಹಾಗೂ ಅಶ್ಲೀಲವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಚಿತ್ರದ ನಿರ್ದೇಶಕ ರೋಹನ್ ಸಿಪ್ಪಿ, ನಿರ್ಮಾಪಕ ರಮೇಶ್ ಸಿಪ್ಪಿ ಹಾಗೂ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ ಅವರ ಹೆಸರುಗಳನ್ನು ದೂರಿನಲ್ಲಿ ತಿಳಿಸಲಾಗಿದೆ. ಜೋಧ್‌ಪುರದ ನಿವಾಸಿ ಮುಕೇಶ್ ಕುಮಾರ್ ಎಂಬುವವರೆ ಕೋರ್ಟ್‌ನಲ್ಲಿ ದಾವಾ ಹೂಡಿರುವರು.
ಈ ಚಿತ್ರದ ಹಾಡಿನಲ್ಲಿ ಹಿಂದು ಧರ್ಮದ ಬಗ್ಗೆ ಅವಹೇಳನಕಾರಿ ಸಾಲುಗಳಿದ್ದು ಧಾರ್ಮಿಕ ಭಾವನೆಗಳನ್ನು ಕೆಣಕುವಂತಿದೆ ಎಂದು ಮುಕೇಶ್ ಆರೋಪಿಸಿದ್ದಾರೆ. ಅಂದಹಾಗೆ 'ದಂ ಮಾರೋ ದಂ' ಚಿತ್ರ ಕ್ರೈಮ್ ಮತ್ತು ಥ್ರಿಲ್ಲರ್ ಪ್ರಧಾನ ಚಿತ್ರ. ಅಭಿಷೇಕ್ ಬಚ್ಚನ್, ದಗ್ಗುಬಾಟಿ ರಾಣಾ, ಬಿಪಾಶಾ ಬಸು ಮುಂತಾದವರಿದ್ದಾರೆ. ಏಪ್ರಿಲ್ 11ರಂದು ಚಿತ್ರ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ದೀಪಿಕಾ ಐಟಂ ಹಾಡಿನಲ್ಲಿ ಅಭಿನಯಿಸಿದ್ದರು. (ಏಜೆನ್ಸೀಸ್)


Click it and Unblock the Notifications











