ಹೃತಿಕ್-ಪ್ರಿಯಾಂಕಾ ಅಭಿಮಾನಿಗಳಿಗೆ ಸಿಹಿಸಿಹಿ ಸುದ್ದಿ
ಕ್ರಿಶ್ ಸಿನಿಮಾದ 'ಸೀಕ್ವೆಲ್' ಬರುತ್ತಿರುವುದು ಹಳೆ ಸುದ್ದಿ. ಇದೀಗ 'ಕ್ರಿಶ್ 3' ಬರುತ್ತಿದೆ ಎಂಬುದು ಹೊಸ ಸುದ್ದಿ. ಅದರಲ್ಲೂ ವಿಶೇಷ ಎಂದರೆ 'ಕ್ರಿಶ್' ನಲ್ಲಿ ಮೋಡಿಮಾಡಿದ್ದ ಅದೇ ಜೋಡಿ 'ಹೃತಿಕ್ ಹಾಗೂ ಪ್ರಿಯಾಂಕಾ ಚೋಪ್ರಾ' ಇದರಲ್ಲೂ ಇದ್ದಾರೆ. 2006 ರಲ್ಲಿ ಬಂದಿದ್ದ 'ಕ್ರಿಶ್' ಚಿತ್ರದಲ್ಲಿ ಇವರಿಬ್ಬರ ಚುಂಬನದ ದೃಶ್ಯದಿಂದ ಪ್ರೇಕ್ಷಕರು ಕುಳಿತಲ್ಲೇ ಬಿಸಿಯಾಗಿದ್ದರು.
'ಕ್ರಿಶ್ 3'ನಲ್ಲಿ ಸೂಪರ್ ವುಮನ್ ಆಗಿ ಬಾಲಿವುಡ್ ಹಾಟೆಸ್ಟ್ ಬ್ಯೂಟಿ ಕಂಗನಾ ರಣಾವತ್ ಮಿಂಚಲಿದ್ದಾರೆ. ಈ ಪಾತ್ರಕ್ಕೆ ಸಾಕಷ್ಟು ಜನ ಸ್ಪರ್ಧೆಯಲ್ಲಿದ್ದರು. ಅಂತಿಮವಾಗಿ ಕಂಗನಾ ಜಯಭೇರಿ ಭಾರಿಸಿರುವುದು ಹಲವರ ಹುಬ್ಬೇರಿಸಿದೆ. ಮೊದಲು ಡೇಟ್ಸ್ ಸಮಸ್ಯೆಯಿಂದ ಒಪ್ಪಿಕೊಳ್ಳದಿದ್ದ ಕಂಗನಾ ಈಗ ಕೈನಲ್ಲಿದ್ದ 'ದೇದ್ ಇಷ್ಕಿಯಾ' ಮುಂದಕ್ಕೆ ಹೋಗಿದ್ದರಿಂದ 'ಓಕೆ' ಅಂದಿದ್ದಾರೆ.
ಡಿಸೆಂಬರ್ ನಲ್ಲಿ ಮುಹೂರ್ತ ಫಿಕ್ಸ್ ಆಗಿದ್ದು ಬಾಲಿವುಡ್ ನಲ್ಲಿ ಈಗಲೇ ಸಂಚಲನ ಪ್ರಾರಂಭವಾಗಿದೆ. ಹೃತಿಕ್, ಹರೆಯದ ಹುಡುಗರ ರೋಲ್ ಮಾಡೆಲ್ ಹಾಗೂ ಪ್ರಿಯಾಂಕಾ ಹೃದಯ ದೇವತೆ. ಇನ್ನು ಹುಡುಗಿಯರಿಗೆ ಹೃತಿಕ್ ಎಂದರೆ 'ಧಕ್ ಧಕ್' ಪ್ರಾರಂಭ ಆಗಿಯೇ ಬಿಡುತ್ತದೆ. ಇದರಲ್ಲೂ ಕಿಸ್ಸಿಂಗ್ ಗಮ್ಮತ್ತ್ ಇರುತ್ತೋ ಏನೋ? ಕ್ರಿಶ್ 3 ಬಿಡುಗಡೆಯ ನಂತರ ಉತ್ತರ ಸಿಗಲಿದೆ. ಮೊದಲೇ ಸಿಕ್ಕರೆ ನೀವು ಲಕ್ಕಿ. (ಏಜೆನ್ಸೀಸ್)


Click it and Unblock the Notifications











