»   »  ಕರೀನಾ ಸೀರೆ ಬೆಲೆ ಕೇವಲ ಎಂಟು ಲಕ್ಷ ರುಪಾಯಿ!

ಕರೀನಾ ಸೀರೆ ಬೆಲೆ ಕೇವಲ ಎಂಟು ಲಕ್ಷ ರುಪಾಯಿ!

Posted By: Super
Subscribe to Filmibeat Kannada
Kareena Kapoor
ಇತ್ತೀಚೆಗೆ ಕೇರಳ ಕುಟ್ಟಿ ಅಸಿನ್ ಗಾಗಿ ನಿರ್ಮಾಪಕರೊಬ್ಬರು ರು.2 ಲಕ್ಷ ಬೆಲೆ ಬಾಳುವ ಪಾದರಕ್ಷೆಗಳನ್ನು ಉಡುಗೊರೆಯಾಗಿ ನೀಡಿದ್ದರು. ಆ ಘಟನೆ ಮರೆಯಾಗುವ ಮುನ್ನವೇ ಕರೀನ್ ಕಪೂರ್ ಗೆ ರು. 8ಲಕ್ಷ ಬೆಲೆ ಬಾಳುವ ವಿದೇಶಿ ಸೀರೆ ಉಡುಗೊರೆಯಾಗಿ ಸಿಕ್ಕಿದೆ! ಸಾಜಿದ್ ನದಿಯಡ್ ವಾಲಾ ಎಂಬ ನಿರ್ಮಾಪಕ ಈ ದುಬಾರಿ ಸೀರೆಯನ್ನು ಪ್ರೀತಿಯಿಂದ ಕರೀನಾಗೆ ಕೊಟ್ಟಿದ್ದಾರೆ!

ಪ್ರಸ್ತುತ ಸಾಜಿದ್ 'ಕಂಬಖ್ತ್ ಇಷ್ಕ್' ಎಂಬ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ನಾಯಕಿ ಕರೀನಾ. ಚಿತ್ರದಲ್ಲಿ ಬರುವ ಒಂದು ಹಾಡಿಗೆ ಈ ದುಬಾರಿ ಸೀರೆಯನು ಬಳಸಿಕೊಳ್ಳಲಾಗಿದೆ. ಸೀರೆ ಉಟ್ಟು ಕರೀನಾ ನೃತ್ಯ ಸಹ ಮಾಡಿದ್ದಾರೆ. ಹಾಡುಗಳ ಚಿತ್ರೀಕರಣ ಮುಗಿದ ಬಳಿಕ ನಿರ್ಮಾಪಕರಿಗೆ ಏನನ್ನಿಸಿತೋ ಏನೋ! ಕರೀನಾ ಕಪೂರ್ ಬಳಿಗೆ ಬಂದು 'ಈ ಸೀರೆಯಲ್ಲಿ ನೀವು ತುಂಬಾ ಚೆನ್ನಾಗಿ ಕಾಣ್ತೀರ. ಸೀರೆಯನ್ನು ನೀವೇ ಇಟ್ಟುಕೊಳ್ಳಿ' ಎಂದರಂತೆ.

ಅಷ್ಟೇ, ವಿದೇಶದಿಂದ ತರಿಸಿದ ದುಬಾರಿ ಸೀರೆ ಕರೀನಾ ಪಾಲಾಯಿತು. ಚಿತ್ರತಂಡದ ಇತರೆ ಕಲಾವಿದರು, ತಂತ್ರಜ್ಞರು ಈ ಘಟನೆಯಿಂದ ಅವಾಕ್ಕಾಗಿದ್ದಾರೆ. ತುಂಡು ಬಟ್ಟೆಗಿಂತಲೂ ಸೀರೆಯಲ್ಲಿ ಕರೀನಾ ಅಂದವಾಗಿ ಕಾಣುತ್ತಾರೆ ಎಂಬ ಮಾತುಗಳು ಚಿತ್ರತಂಡದಿಂದ ಸ್ಫುರಿಸಿವೆಯಂತೆ.

ಸಬೀರ್ ಖಾನ್ ನಿರ್ದೇಶಿಸುತ್ತಿರುವ ಕಂಬಖ್ತ್ ಇಷ್ಕ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ನಾಯಕ ನಟ. ಅಫ್ತಾಬ್ ಶಿವದಾಸಾನಿ, ಅಮೃತಾ ಅರೋರಾ ಇತರೆ ಮುಖ್ಯ ಪಾತ್ರಧಾರಿಗಳು. ಹಾಲಿವುಡ್ ಪ್ರಮುಖ ನಟರಾದ ಸಿಲ್ವೆಸ್ಟರ್ ಸ್ಟಾಲೊನ್, ಬ್ರಾಂಡನ್ ರೌತ್, ಅರ್ನಾಲ್ಡ್ ಸ್ಕ್ವಾಜ್ ನೆಗರ್, ಡೆನಿಸ್ ರಿಚರ್ಡ್ಸ್ ಸಹ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೇ 28ಕ್ಕೆ ಚಿತ್ರಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ.

(ಏಜೆನ್ಸೀಸ್)
ಬಡ ವಿದ್ಯಾರ್ಥಿಗಳಿಗಾಗಿ ಕರೀನಾ ಕಪೂರ್ ಶಾಲೆ
ಕರೀನಾ ,ಸೈಫ್ ಮದುವೆ ಟ್ಯಾಬ್ಲಾಯ್ಡ್‌ನಲ್ಲಿ ಬಹಿರಂಗ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada